ಮಗ್ಗದ ಸೀರೆ, ಸಾವಯವ ಎಳ್ಳು ಬೆಲ್ಲ...

7

ಮಗ್ಗದ ಸೀರೆ, ಸಾವಯವ ಎಳ್ಳು ಬೆಲ್ಲ...

Published:
Updated:

ದೇಸಿತನದ, ಗ್ರಾಮ್ಯ ಸೊಗಡನ್ನು ಹೊತ್ತ ಹಬ್ಬಗಳಲ್ಲಿ ಮಕರ ಸಂಕ್ರಮಣವೂ ಒಂದು. ಕ್ಯಾಲೆಂಡರ್ ವರ್ಷದ ಮೊದಲ ಹಬ್ಬವೆಂಬುದು ಒಂದು ಹೆಗ್ಗಳಿಕೆಯಾದರೆ, ಚೈತ್ರಕ್ಕೆ ಮುನ್ನುಡಿ ಬರೆಯುವ ಶಿಶಿರನ ಕೈಹಿಡಿದು ತರುವುದು ಇದರ ಮತ್ತೊಂದು ಹಿರಿಮೆ.ಸೀರೆ, ಉಡುಗೆ ತೊಡುಗೆಗಳೂ ರೇಷ್ಮೆ ಅಥವಾ ಕಾಟನ್‌ನದ್ದಾಗಿರುವುದು ಗಮನಾರ್ಹ. ಕೈಮಗ್ಗದ ಸೀರೆಗಳಿಗೆ, ವಸ್ತ್ರಗಳಿಗೆ ಮಕರ ಸಂಕ್ರಮಣದ ಹೊತ್ತಿನಲ್ಲಿ ಸ್ವಲ್ಪ ಬೇಡಿಕೆ ಹೆಚ್ಚುವುದು ವಿಶೇಷ. ಜಯನಗರ 4ನೇ ‘ಟಿ’ ಬ್ಲಾಕ್‌ನಲ್ಲಿರುವ ‘ಗ್ರಾಮೀಣ ಅಂಗಡಿ’ಯಲ್ಲಿ ಈಗ ಕೈಮಗ್ಗದ ಸೀರೆ, ಶುದ್ಧ ಹತ್ತಿ ಬಟ್ಟೆಯಿಂದ ಸಿದ್ಧಪಡಿಸಿದ ಘಾಗ್ರಾ ಚೋಲಿ, ಡ್ರೆಸ್ ಮೆಟೀರಿಯಲ್‌ಗಳು ಭರದಿಂದ ಮಾರಾಟವಾಗುತ್ತಿವೆ.‘ಸಾವಯವ ಕ್ರಮದಲ್ಲಿ ಬೆಳೆದ ಉತ್ಪನ್ನಗಳನ್ನು ಬಳಸಿ ಈ ಹಬ್ಬವನ್ನು ಮಾಡಬೇಕೆಂಬುದು ಆಸೆಯಿದ್ದರೂ ಸಾವಯವ ಉತ್ಪನಗಳು ಲಭ್ಯವಾಗದೇ ಇರಬಹುದು. ಅದಕ್ಕಾಗಿ ನಾವು ಮಂಡ್ಯದ ಬೆಲ್ಲ, ಚಿಕ್ಕಮಗಳೂರು, ಹೊಸಕೋಟೆ ಮತ್ತು ನೆಲಮಂಗಲದ ಕೊಬ್ಬರಿ ಮತ್ತು ಎಳ್ಳು ತರಿಸಿದ್ದೇವೆ. ಹೀಗಾಗಿ ಕೈಮಗ್ಗದ ಬಟ್ಟೆ ಧರಿಸಿ ಸಾವಯವ ಎಳ್ಳು ಬೆಲ್ಲ ಬೀರಲು ಅವಕಾಶ ಕಲ್ಪಿಸಿದ್ದೇವೆ. ಜ. 14ರವರೆಗೆ ಸೀರೆ ಅಥವಾ ಯಾವುದೇ ರೀತಿಯ ಬಟ್ಟೆ ಖರೀದಿಸುವ ಗ್ರಾಹಕರಿಗೆ ಎಳ್ಳು ಬೆಲ್ಲ ಉಚಿತವಾಗಿ ನೀಡುತ್ತೇವೆ’ ಎಂದು ಮಾಹಿತಿ ನೀಡುತ್ತಾರೆ, ‘ಗ್ರಾಮೀಣ ಅಂಗಡಿ’ಯ ವ್ಯವಸ್ಥಾಪಕ ಬಿ. ರಾಜಶೇಖರ ಮೂರ್ತಿ.ಕಳೆದ ವರ್ಷ ಇಲ್ಲಿ ಆರಂಭಿಸಲಾದ ‘ಕರ್ನಾಟಕ ಕುಶಲ ಕಲೆ ಉಳಿಸಿ- ಕರ್ನಾಟಕ ಸೀರೆಗಳನ್ನು ಖರೀದಿಸಿ’ ಅಭಿಯಾನದ ಹಿನ್ನೆಲೆಯಲ್ಲಿ ಹತ್ತಿಯ ಬಟ್ಟೆ ಮತ್ತು ಉಡುಪುಗಳಿಗೆ ಬೇಡಿಕೆ ಹೆಚ್ಚಿದೆಯಂತೆ. ಕೊಪ್ಪಳದ ಭಾಗ್ಯನಗರ, ಬಾಗಲಕೋಟೆಯ ಇಳಕಲ್, ಬಿಜಾಪುರದ ಬನಹಟ್ಟಿ, ಗದಗ್‌ನ ಶೀಲ್ಗಿ, ಹುಬ್ಬಳ್ಳಿ, -ಧಾರವಾಡದ ಸೀರೆ, ರವಿಕೆ ಕಣ, ಕುರ್ತಾ, ಜುಬ್ಬಾ, ಹಾಸಿಗೆಯ ಹೊದಿಕೆ, ಬೆಡ್‌ಶೀಟ್ ಮುಂತಾದ ಹತ್ತಿಯ ಬಟ್ಟೆಗಳು ಲಭ್ಯ. ಸಾವಯವ ಆಹಾರ ಪದಾರ್ಥ, ಆಯುರ್ವೇದ ಪಾನೀಯ, ನೈಸರ್ಗಿಕ ವಸ್ತುಗಳಿಂದ ತಯಾರಾದ ಕರಕುಶಲ ವಸ್ತುಗಳೂ ಇಲ್ಲಿ ಲಭ್ಯ.

ಬೆಳಿಗ್ಗೆ 10.30ರಿಂದ ರಾತ್ರಿ 9ರವರೆಗೂ ‘ಅಂಗಡಿ’ ತೆರೆದಿರುತ್ತದೆ. ಸಂಪರ್ಕಕ್ಕೆ: ೯೭೩೧೧ ೦೫೫೨೬/೯೪೪೮೩ ೨೪೭೨೭.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry