ಶನಿವಾರ, ಜುಲೈ 24, 2021
28 °C

ಮಚ್ಚಾಮಾಡ ಕಪ್ ಹಾಕಿ ಉತ್ಸವ: ಬಿದ್ದಂಡ ತಂಡಕ್ಕೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಚ್ಚಾಮಾಡ ಕಪ್ ಹಾಕಿ ಉತ್ಸವ: ಬಿದ್ದಂಡ ತಂಡಕ್ಕೆ ಗೆಲುವು

ಗೋಣಿಕೊಪ್ಪಲು: ಬಿದ್ದಂಡ ಹಾಗೂ ಕುಟ್ಟಂಡ ತಂಡದವರು ಇಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ‘ಮಚ್ಚಾಮಾಡ ಕಪ್ ಹಾಕಿ ಉತ್ಸವದ ಪಂದ್ಯದಲ್ಲಿ ಟೈಬ್ರೇಕರ್ ಮೂಲಕ ಅದೃಷ್ಟದ ವಿಜಯ ಸಾಧಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿದರು.ಪೊನ್ನಂಪೇಟೆ ಪದವಿ ಪೂರ್ವ ಕಾಲೇಜ್ ಮೈದಾನದಲ್ಲಿ  ಮಂಗಳವಾರ ನಡೆದ ಪಂದ್ಯದಲ್ಲಿ ಬಿದ್ದಂಡ ತಂಡ ಟೈಬ್ರೇಕರ್‌ನಲ್ಲಿ ಇಟ್ಟಿರ ತಂಡದ ವಿರುದ್ಧ 6-5 ಗೋಲುಗಳ ಜಯ ಪಡೆದರು. ಉಭಯ ತಂಡದವರು ಪಂದ್ಯದ ನಿಗಧಿಯ ವೇಳೆಗೆ ಗೋಲುಗಳಿಸಲಿಲ್ಲ. ಇನ್ನೊಂದು ಪಂದ್ಯದಲ್ಲಿ ಕುಟ್ಟಂಡ ತಂಡ ಟೈಬ್ರೇಕರ್‌ನಲ್ಲಿ ಅಪ್ಪಾರಂಡ ವಿರುದ್ಧ 3-1 ಗೋಲುಗಳ ಜಯ ಪಡೆಯಿತು.ಉಭಯ ತಂಡ ಆಟ ನಿಗಧಿಯ ವೇಳೆಗೆ ಗೋಲಿಲ್ಲದೆ ಡ್ರಾ ಮಾಡಿಕೊಂಡತು.

ಟೂರ್ನಿ ಇತರ ಪಂದ್ಯಗಳಲ್ಲಿ ಕರ್ತಾಮಾಡ ತಂಡ 3-0 ಗೋಲುಗಳಿಂದ ದೇವಣಗೇರಿ ಮುಕ್ಕಾಟಿರ ಮೇಲೂ, ಮಾಚಂಗಡ ತಂಡ 4-0 ಗೋಲುಗಳಿಂದ ಆದೇಂಗಡ ವಿರುದ್ಧವೂ, ಕಾಳೇಂಗಡ ತಂಡ 6-2 ರಲ್ಲಿ ಅಮ್ಮುಣಿಚಂಡ ಮೇಲೂ, ಬಾಳೆಯಡ ತಂಡ 2-1 ಗೋಲುಗಳಿಂದ ಪಳೆಂಗಡ ಮೇಲೂ, ಆಲೇಮಾಡ ತಂಡ 4-2 ಗೋಲುಗಳಿಂದ ಚೆಕ್ಕೇರ ವಿರುದ್ಧವೂ, ಗಾಂಡಂಗಡ ತಂಡ 2-1 ಗೋಲುಗಳಿಂದ ಕೊಲ್ಲಿರ ಮೇಲೂ, ಚಂದುರ ತಂಡ 2-1 ಗೋಲುಗಳಿಂದ ಕೋಳೇರ ವಿರುದ್ಧವೂ, ಪಾಂಡಂಡ ತಂಡ 1-0 ಗೋಲಿನಿಂದ ಅಪ್ಪಾಂಡೆರಂಡ ಮೇಲೂ, ಚೇಂದಂಡ ತಂಡ 1-0 ಗೋಲುಗಳಿಂದ ಅರೆಯಡ ವಿರುದ್ಧವೂ ಜಯ ಪಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.