ಬುಧವಾರ, ಜೂನ್ 23, 2021
30 °C

ಮಠದಲ್ಲಿ ತಿಂಡಿ: 12 ಗೃಹರಕ್ಷಕರ ಅಸ್ವಸ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಠದಲ್ಲಿ ತಿಂಡಿ: 12 ಗೃಹರಕ್ಷಕರ ಅಸ್ವಸ್ಥ

ತುಮಕೂರು: ಸಿದ್ದಗಂಗಾ ಮಠದಲ್ಲಿ ತಿಂಡಿ ಸೇವಿಸಿದ ಗೃಹ ರಕ್ಷಕ ದಳದ ತರಬೇತಿಯಲ್ಲಿದ್ದ 12 ಮಂದಿ ವಾಂತಿ ಮಾಡಿಕೊಂಡು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.

ಪ್ರವಾಹ, ಬೆಂಕಿ ಅವಘಡ ಸೇರಿದಂತೆ ಪ್ರಕೃತಿ ವಿಕೋಪ ಸಂಭವಿಸಿದಾಗ ಕೈಗೊಳ್ಳಬೇಕಾದ ರಕ್ಷಣಾ ಕ್ರಮಗಳ ಕುರಿತು ಜಿಲ್ಲಾ ಗೃಹ ರಕ್ಷಕ ದಳದ ವತಿಯಿಂದ 158 ಹೋಂಗಾಡ್ಸ್ ಸದಸ್ಯರಿಗೆ ತರಬೇತಿ ನೀಡಲಾಗುತ್ತಿದೆ.

 

ಇದರಲ್ಲಿ ಕೆಲವರು ಬೆಳಿಗ್ಗೆ ಮಠದಲ್ಲಿ ತಿಂಡಿ ಸೇವಿಸಿದ ಬಳಿಕ ಅಸ್ವಸ್ತರಾದರು.

ಗುಬ್ಬಿಯ ಜಯರಾಂ, ಶಿರಾದ ಪುಟ್ಟಮ್ಮ, ಕೊರಟಗೆರೆ ಮುದ್ದಯ್ಯ, ಚಿಕ್ಕನಾಯಕನಹಳ್ಳಿ ಬಸವರಾಜು, ತುರುವೇಕೆರೆ ಶಿವನಂಜಯ್ಯ, ಶಿವಪ್ರಸಾದ್, ಮಂಜುಳಾ, ಅನುಸೂಯ ತೀವ್ರ ಅಸ್ವಸ್ತರಾಗಿದ್ದರು.ಆರಂಭದಲ್ಲಿ 12 ಜನರು ಅಸ್ವಸ್ಥರಾದರು. ಅವರೆಲ್ಲರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಅವರಲ್ಲಿ 4 ಮಂದಿಗೆ ಚುಚ್ಚುವದ್ದು ನೀಡಿ ಕೂಡಲೇ ವಾಪಸ್ ಕಳುಹಿಸಿದರು. ಉಳಿದ 8 ಮಂದಿಗೆ ಡ್ರಿಪ್ಸ್ ಹಾಕಿ ಸಂಜೆ ವೇಳೆಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು ಎಂದು ಜಿಲ್ಲಾ ಕಮಾಂಡೆಂಟ್ ರವಿಕುಮಾರ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ. ಕಲುಷಿತ ನೀರು ಸೇವನೆಯಿಂದ ವಾಂತಿ ಮಾಡಿಕೊಂಡು ಅಸ್ವಸ್ಥರಾಗಲು ಕಾರಣ ಇರಬಹುದು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.ತುರುವೇಕೆರೆ, ಶಿರಾ, ಗುಬ್ಬಿ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ತರಬೇತಿಗಾಗಿ ಬಂದಿದ್ದರು. ತರಬೇತಿ ವೇಳೆ ಇಲಾಖೆಯಿಂದ ಪ್ರತಿ ಸದಸ್ಯನಿಗೆ ಪ್ರತಿ ದಿನ ರೂ. 175 ಭತ್ಯೆ ನೀಡಲಾಗುತ್ತಿದೆ. ಈ ಭತ್ಯೆಯಲ್ಲೇ ಊಟ, ವಸತಿ ವ್ಯವಸ್ಥೆಯನ್ನು ಸದಸ್ಯರೇ ಮಾಡಿಕೊಳ್ಳಬೇಕಾಗಿದೆ. ಈ ಹಣ ಸಾಲದಾಗಿದ್ದು, ತರಬೇತಿಗೆ ಬಂದಿರುವವರಲ್ಲಿ ಸಾಕಷ್ಟು ಜನರು ಮಠದಲ್ಲಿ ತಂಗಿದ್ದು, ಅಲ್ಲಿಯೇ ತಿಂಡಿ, ಊಟ ಮಾಡಿಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.