ಮಠ, ಮಂದಿರಕ್ಕೆ ಕೊಟ್ಟಿದ್ದು 617 ಕೋಟಿ ರೂಪಾಯಿ

ಶುಕ್ರವಾರ, ಜೂಲೈ 19, 2019
24 °C

ಮಠ, ಮಂದಿರಕ್ಕೆ ಕೊಟ್ಟಿದ್ದು 617 ಕೋಟಿ ರೂಪಾಯಿ

Published:
Updated:

ಬೆಂಗಳೂರು: ಕಳೆದ ಮೂರು ವರ್ಷಗಳಲ್ಲಿ ವಿವಿಧ ಮಠ ಹಾಗೂ ದೇವಸ್ಥಾನಗಳಿಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಮೊತ್ತ ಎಷ್ಟು ಗೊತ್ತೇ? ಬರೋಬ್ಬರಿ  ರೂ. 617.3 ಕೋಟಿ!ಬೆಳ್ತಂಗಡಿ ಶಾಸಕ ವಸಂತ  ಬಂಗೇರ ಅವರ ಪ್ರಶ್ನೆಗೆ ನೀಡಿದ ಲಿಖಿತ ಉತ್ತರ ದಲ್ಲಿ  ಮುಜರಾಯಿ ಸಚಿವ ಪ್ರಕಾಶ  ಹುಕ್ಕೇರಿ ಈ ವಿಷಯ ತಿಳಿಸಿದ್ದಾರೆ.2010-11ನೇ ಸಾಲಿನಲ್ಲಿ 2,809 ದೇವಸ್ಥಾನಗಳಿಗೆ ರೂ. 147.94 ಕೋಟಿ ಹಾಗೂ 130 ಮಠಗಳಿಗೆ ರೂ. 51.16 ಕೋಟಿ ಬಿಡುಗಡೆ ಮಾಡಲಾಗಿದೆ.  2011-12ನೇ ಸಾಲಿನಲ್ಲಿ 4,070 ದೇವಸ್ಥಾನಗಳಿಗೆ ರೂ. 121.33 ಕೋಟಿ ಹಾಗೂ 183 ಮಠಗಳಿಗೆ ರೂ. 42.53 ಕೋಟಿ,  2012-13ನೇ ಸಾಲಿನಲ್ಲಿ 5,583 ದೇವಸ್ಥಾನಗಳಿಗೆ ರೂ. 222.30 ಕೋಟಿ ಹಾಗೂ 252 ಮಠಗಳಿಗೆ ರೂ. 27.91 ಕೋಟಿ ಬಿಡುಗಡೆ ಮಾಡಲಾ ಗಿದೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry