ಮಠ-ಮಾನ್ಯಗಳ ರಸ್ತೆಗಳಿಗೆ ದುರಸ್ತಿ ಭಾಗ್ಯ!

ಶುಕ್ರವಾರ, ಮೇ 24, 2019
28 °C

ಮಠ-ಮಾನ್ಯಗಳ ರಸ್ತೆಗಳಿಗೆ ದುರಸ್ತಿ ಭಾಗ್ಯ!

Published:
Updated:

ಬೆಂಗಳೂರು:  ಮಠಗಳ ಆವರಣ ಮತ್ತು ಮಠಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಗೆ ಕಳೆದ ಎರಡು ವರ್ಷಗಳಲ್ಲಿ 189 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದ್ದು, ಲೋಕೋಪಯೋಗಿ ಇಲಾಖೆಯು ಪಾರದರ್ಶಕ ನಿಯಮಗಳನ್ನು ಗಾಳಿಗೆ ತೂರಿ ಮನಬಂದಂತೆ ಕಾಮಗಾರಿಗಳ ಗುತ್ತಿಗೆ ನೀಡಿರುವುದು ಬೆಳಕಿಗೆ ಬಂದಿದೆ.ದಕ್ಷಿಣ ವಲಯದಲ್ಲಿ ಹಿಂದೆ ಮುಖ್ಯ ಎಂಜಿನಿಯರ್ (ಸಂಪರ್ಕ ಮತ್ತು ಕಟ್ಟಡಗಳು) ಆಗಿದ್ದಸಿ.ಮೃತ್ಯುಂಜಯಸ್ವಾಮಿ (ಲೋಕಾಯುಕ್ತ ದಾಳಿಯಿಂದಾಗಿ ಈಗ ಅಮಾನತುಗೊಂಡಿದ್ದಾರೆ) ಅವಧಿಯಲ್ಲಿ ಕಾಮಗಾರಿಗಳನ್ನು ಮಂಜೂರು ಮಾಡಲಾಗಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಕಚೇರಿಯಲ್ಲಿನ ಕೆಲ ಅಧಿಕಾರಿಗಳ ಒತ್ತಡಕ್ಕೆ ಮಣಿದು ಮಠಗಳ ಆವರಣ, ಅವುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಗೆ ಹಣ ಮಂಜೂರು ಮಾಡಿದ್ದರು ಎಂದು ಲೋಕೋಪಯೋಗಿ ಇಲಾಖೆಯ ಮೂಲಗಳು ತಿಳಿಸಿವೆ.ವಿವಿಧ ಮಠ, ದೇವಸ್ಥಾನಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ನೀಡಿರುವ 189 ಕೋಟಿ ರೂಪಾಯಿ ಅಷ್ಟೇ ಅಲ್ಲದೆ, ಯಡಿಯೂರಿನ ದೇವಾಲಯ ಆವರಣ, ಅದರ ಮುಂದಿನ ರಸ್ತೆಗಳ ಅಭಿವೃದ್ಧಿಗೆ 61 ಕೋಟಿ ರೂಪಾಯಿಯನ್ನು ಪ್ರತ್ಯೇಕವಾಗಿ ನೀಡಲಾಗಿದೆ.ಇ-ಪ್ರಕ್ಯೂರ್‌ಮೆಂಟ್ ಪ್ರಕಾರ ಟೆಂಡರ್ ಕರೆದು ಕಾಮಗಾರಿಗಳನ್ನು ನೀಡುವ ಬದಲು, ಅಲ್ಪಾವಧಿ ಟೆಂಡರ್ ಮೂಲಕ ಮಠಾಧೀಶರು ಶಿಫಾರಸು ಮಾಡಿದ ಆಯ್ದ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ನೀಡಿದ್ದು, ಇದರಲ್ಲಿ ಬಹಳಷ್ಟು ದುರುಪಯೋಗ ನಡೆದಿದೆ ಎಂಬ ಆರೋಪ ಕೇಳಿ ಬರುತ್ತಿದೆ.`ಹಣಕಾಸು ಇಲಾಖೆಯ ವಿರೋಧದ ನಡುವೆಯೂ ಹಣ ನೀಡಲಾಗಿದೆ. ಲೋಕೋಪಯೋಗಿ ಇಲಾಖೆಯ ಮೇಲೆ ಒತ್ತಡ ತಂದು ಮಂಜೂರು ಮಾಡಿಸಿಕೊಂಡಿದ್ದಾರೆ. ಮಠಗಳಿಗೆ ಬರುವ ದೇಣಿಗೆ ಹಣದಲ್ಲಿಯೇ ಸಣ್ಣಪುಟ್ಟ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿತ್ತು.ಸಾವಿರಾರು ಹಳ್ಳಿಗಳಿಗೆ ಸಮರ್ಪಕ ರಸ್ತೆಗಳೇ ಇಲ್ಲದಿರುವಾಗ ಮಠಗಳ ಆವರಣ ಅಭಿವೃದ್ಧಿ ಹೆಸರಿನಲ್ಲಿ ಹಣ ಪೋಲು ಮಾಡಲಾಗಿದೆ~ ಎಂದು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಅಧಿಕಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.2008-09, 2009-10 ಮತ್ತು 2010-11ನೇ ಸಾಲಿನಲ್ಲಿ ಹಣ ಬಿಡುಗಡೆಯಾಗಿದ್ದು, ಈಗಾಗಲೇ ಬಹುತೇಕ ಹಣ ಖರ್ಚಾಗಿದೆ. ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಬರುವ ಹೆಚ್ಚಿನ ಮಠಗಳು, ದೇವಾಲಯಗಳು ಇದರ ಪ್ರಯೋಜನ ಪಡೆದಿವೆ.

 

ಮಠಗಳ ಆವರಣ ಮತ್ತು ಅವುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆ ಹಣ ನೀಡಿರುವುದು ಇದೇ ಮೊದಲು. ಇಲಾಖೆಯ ಹಿಂದಿನ ಪ್ರಧಾನ ಕಾರ್ಯದರ್ಶಿ ಸಹ ಹಣ ಬಿಡುಗಡೆಗೆ ಆಸಕ್ತಿ ತೋರಿದ್ದರು ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಪ್ರಮುಖ ಮಠಗಳ ಸಂಪರ್ಕ ರಸ್ತೆಗಳಿಗೆ ನೀಡಿದ ಅನುದಾನ

ಕಾಮಗಾರಿ ಅಂದಾಜು ನೀಡಿದಹೆಸರು ಮೊತ್ತ ರೂ ಹಣ ರೂಸಿದ್ಧಗಂಗಾ ಮಠದ ಆವರಣ ಅಭಿವೃದ್ಧಿ 20 ಲಕ್ಷ 4.53 ಲಕ್ಷಮಠದ ಕೆರೆ ಸುತ್ತಲ ಅಭಿವೃದ್ಧಿ 50 ಲಕ್ಷ 11.32 ಲಕ್ಷಮಠದಲ್ಲಿನ ಸಿದ್ದಲಿಂಗೇಶ್ವರದೇವಸ್ಥಾನ ಆವರಣ ಅಭಿವೃದ್ಧಿ 75 ಲಕ್ಷ 16.97 ಲಕ್ಷ

ಮಠದ ಆವರಣ ಸಂಪರ್ಕಿಸುವ ರಸ್ತೆಗಳ ಅಭಿವೃದ್ಧಿ 4 ಕೋಟಿ 90.52 ಲಕ್ಷ ಸಾವನದುರ್ಗ ಬೆಟ್ಟದ ಸಾವಂದಿವೀರಭದ್ರಸ್ವಾಮಿ ದೇವಸ್ಥಾನಮುಂಭಾಗ ಕಾಂಕ್ರೀಟ್ ರಸ್ತೆ ಅಭಿವೃದ್ಧಿ 1 ಕೋಟಿ 22.63 ಲಕ್ಷ

ರಂಭಾಪುರಿ ಮಠಕ್ಕೆ ಸಂಪರ್ಕಕಲ್ಪಿಸುವ ರಸ್ತೆ ಅಭಿವೃದ್ಧಿಗೆ   5 ಕೋಟಿ 3.82 ಲಕ್ಷಮುರುಘಾಮಠ

ಸುತ್ತಮುತ್ತ ರಸ್ತೆ ಅಭಿವೃದ್ಧಿ 1 ಕೋಟಿ 6.36 ಲಕ್ಷಸುತ್ತೂರು ಸುತ್ತಮುತ್ತ ರಸ್ತೆ ಅಭಿವೃದ್ಧಿ 17.78 ಕೋಟಿ 4.02 ಕೋಟಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry