ಮಡದಿ ಆರಂಭ

ಸೋಮವಾರ, ಮೇ 27, 2019
34 °C

ಮಡದಿ ಆರಂಭ

Published:
Updated:

ಝೀ ಕನ್ನಡ ವಾಹಿನಿ `ಮಡದಿ~ ಹೆಸರಿನ ಹೊಸ ಧಾರಾವಾಹಿ ಆರಂಭಿಸುತ್ತಿದೆ. ಗುರುದಾಸ್ ಶೆಣೈ ನಿರ್ದೇಶನದ ಹೊಣೆ ಹೊತ್ತಿದ್ದಾರೆ. `ಮಡದಿ~  ಒಬ್ಬ ಮುಗ್ಧ ಹೆಣ್ಣಿನ ಜೀವನದ ಏಳುಬೀಳುಗಳ ಕಥೆ.ಹಳ್ಳಿ ಹುಡುಗಿ ಶಾರದೆ ತಂದೆ ಇಲ್ಲದ ಕೂಸು. ತಾಯಿಯೊಂದಿಗೆ ಬದುಕುತ್ತಿರುವ ಅವಳನ್ನು ಚಿಕ್ಕಮ್ಮ- ಚಿಕ್ಕಪ್ಪ ಶೋಷಿಸುತ್ತಿರುತ್ತಾರೆ. ಆಗ ಶಾರದೆಯನ್ನು ಶ್ರೀಮಂತರೊಬ್ಬರು ಮದುವೆ ಮಾಡಿಕೊಳ್ಳಲು ಬರುತ್ತಾರೆ. ಅಲ್ಲಿಂದ ಅವಳ ಮದುವೆ ಮುರಿಯುವ ಕೆಲಸ ಆರಂಭವಾಗುತ್ತದೆ. ಶಾರದಾ ನಂತರ ಯಾರ ಮಡದಿಯಾಗುತ್ತಾಳೆ? ಕುತೂಹಲಕರ ಘಟ್ಟಗಳನ್ನು ಆಯ್ದು ಶಾರದಾ ಬದುಕು ಹೇಗೆ ಹಸನಾಗುತ್ತದೆ? ಎಂಬುದು ಧಾರಾವಾಹಿಯ ಕತೆ.ಹರ್ಷಿತಾ, ಕವಿಲ್ ನಂದಕುಮಾರ್, ಅಶೋಕ್‌ರಾವ್, ನಾಗರಾಜ್ ಕೋಟೆ, ಎಸ್.ನದಾಫ್, ಪವನ್ ಕುಮಾರ್, ಶೈಲಜಾ ಜೋಷಿ, ಚಂದ್ರಕಲಾ ಮೋಹನ್, ಅಪೂರ್ವ, ಮಾನಸ, ಹಂಸ , ವರ್ಷ, ನಿಶಾ ಮುಂತಾದವರು ತಾರಾಗಣದಲ್ಲಿದ್ದಾರೆ. ಧಾರಾವಾಹಿಯ ಸಂಚಿಕೆ ನಿರ್ದೇಶಕರು ಪೂರ್ಣಚಂದ್ರ ತೇಜಸ್ವಿ. ಸಂಭಾಷಣೆ- ಜೋಗಿ, ಸಂಗೀತ - ಅರ್ಜನ್ ಜನ್ಯ ಅವರದು. ಆಗಸ್ಟ್ 6ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7.30ಕ್ಕೆ `ಮಡದಿ~ ಪ್ರಸಾರವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry