ಮಡಿಕೇರಿ ದಸರೆಗೆ ಚಿತ್ರೋತ್ಸವ ರಂಗು

7

ಮಡಿಕೇರಿ ದಸರೆಗೆ ಚಿತ್ರೋತ್ಸವ ರಂಗು

Published:
Updated:

ಮಡಿಕೇರಿ: ಬೆಳ್ಳಿ ಮಂಡಲ ಚಿತ್ರ ಸಮಾಜವು ಇದೇ ಮೊದಲ ಬಾರಿಗೆ ಮಡಿಕೇರಿ ದಸರಾ ಉತ್ಸವದಲ್ಲಿ ಚಿತ್ರೋತ್ಸವವನ್ನು ಅ.21ರಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದು, ಸಾರ್ವಜನಿಕರು ಉಚಿತವಾಗಿ ಚಿತ್ರಗಳನ್ನು ವೀಕ್ಷಿಸಬಹುದು. ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಅ.21ರಂದು ಸಂಜೆ 4 ಗಂಟೆಗೆ ನಗರಸಭೆ ಅಧ್ಯಕ್ಷ ಎಚ್.ಎಂ. ನಂದಕುಮಾರ್ ಅವರು ಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಅತಿಥಿಗಳಾಗಿ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಡ್ಡಂಡ ಕಾರ್ಯಪ್ಪ, ಅರೆಭಾಷೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎನ್.ಎಸ್. ದೇವಿಪ್ರಸಾದ್ ಭಾಗವಹಿಸಲಿದ್ದಾರೆಂದು ಬೆಳ್ಳಿ ಮಂಡಲದ ಸಂಚಾಲಕ ಅಲ್ಲಾರಂಡ ವಿಠಲ ನಂಜಪ್ಪ ತಿಳಿಸಿದರು.ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸಹಕಾರದೊಂದಿಗೆ ಚಿತ್ರೋತ್ಸವ ಹಮ್ಮಿಕೊಳ್ಳಲಾಗಿದೆ. ಪ್ರತಿ ಚಿತ್ರದ ಪ್ರದರ್ಶನದ ನಂತರ ಸಾರ್ವಜನಿಕರ ಜೊತೆ ಸಂವಾದವೂ ನಡೆಯಲಿದೆ ಎಂದರು.23ರಂದು ಸಂಜೆ 5 ಗಂಟೆಗೆ ನಡೆಯುವ ಸಮಾರೋಪ ಸಮಾರಂಭವನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷೆ ಚಿತ್ರನಟಿ ತಾರಾ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ದಸರಾ ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ ರಾಬಿನ್ ದೇವಯ್ಯ, ಸಾಹಿತಿ ಕೆ.ಆರ್. ವಿದ್ಯಾಧರ್ ಭಾಗವಹಿಸಲಿದ್ದಾರೆ ಎಂದರು.ಮೈಸೂರು ದಸರಾದಲ್ಲಿ ನಡೆಯುವಂತೆ ಚಿತ್ರೋತ್ಸವವನ್ನು ಇಲ್ಲಿಯೂ ನಡೆಸಬೇಕೆನ್ನುವ ಉದ್ದೇಶದಿಂದ ಇದಕ್ಕೆ ಕೈಹಾಕಿದ್ದೇವೆ. ಮುಂಬರುವ ವರ್ಷಗಳಿಂದ ಇದನ್ನು ದಸರಾ ಸಮಿತಿಯವರು ತಮ್ಮ ಅಧಿಕೃತ ಕಾರ್ಯಕ್ರಮಗಳಲ್ಲಿ ಸೇರಿಸಿಕೊಂಡರೆ ಬಹಳ ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಚಿತ್ರಮಂಡಲದ ಮತ್ತೊಬ್ಬ ಸಂಚಾಲಕ ಶ್ರೀನಿವಾಸ ನಾಯ್ಡು ಉಪಸ್ಥಿತರಿದ್ದರು.21ರಂದು ಬಹುಭಾಷಾ ಕವಿಗೋಷ್ಠಿ

ಮಡಿಕೇರಿ: ಮಡಿಕೇರಿ ದಸರಾ ಉತ್ಸವ ಪ್ರಯುಕ್ತ ದಸರಾ ಬಹುಭಾಷಾ ಕವಿಗೋಷ್ಠಿ ಅ.21 ರಂದು ಬೆಳಿಗ್ಗೆ 10 ಗಂಟೆಗೆ ಕಾವೇರಿ ಕಲಾ ಕ್ಷೇತ್ರದಲ್ಲಿ ಜರುಗಲಿದೆ.ಕವಿಗೋಷ್ಠಿಯನ್ನು ಮಡಿಕೇರಿ ನಗರ ದಸರಾ ಸಮಿತಿಯ ಕಾರ್ಯಾಧ್ಯಕ್ಷ ರಾಬಿನ್ ದೇವಯ್ಯ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಬಹುಭಾಷಾ ಕವಿಗೋಷ್ಠಿ ಸಮಿತಿಯ ಅಧ್ಯಕ್ಷ ಎಂ. ಶ್ರಿಧರ್ ಹೂವಲ್ಲಿ ಅವರು ವಹಿಸುವರು.ಅಂದು ವಾಚಿಸಲ್ಪಡುವ ಕವನಗಳನ್ನು ಒಟ್ಟುಗೂಡಿಸಿ ಸಂಕಲನವನ್ನಾಗಿ ಮುದ್ರಿಸಲ್ಪಟ್ಟ `ಕಾವ್ಯ ಲಹರಿ~ ಎಂಬ ಕವನ ಸಂಕಲನವನ್ನು ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಡ್ಡಂಡ ಸಿ. ಕಾರ್ಯಪ್ಪ ಅವರು ಬಿಡುಗಡೆಗೊಳಿಸುವರು.ಅತಿಥಿಗಳಾಗಿ ನಗರಸಭಾ ಅಧ್ಯಕ್ಷ ಎಚ್.ಎಂ. ನಂದಕುಮಾರ್, ಮುಖ್ಯ ಭಾಷಣಕಾರರಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಕವಿತಾ ರೈ ಆಗಮಿಸುವರು.ಆಹ್ವಾನಿತ ಕವಿಗಳಾಗಿ ಎ.ಎಚ್. ಸತೀಶ್ ಕುಮಾರ್, ತೆನ್ನೀರ ರಾಧ ಪೊನ್ನಪ್ಪ, ಕುಡೆಕಲ್ ಸಂತೋಷ್, ಹೇಮಲತಾ ಪೂರ್ಣ ಪ್ರಕಾಶ್, ಅಕ್ಷತಾ ಶೆಟ್ಟಿ, ಪಾಣತ್ತಲೆ ಕಲ್ಪನಾ ರಾಘವಯ್ಯ, ಮಿಲನ ಕೆ. ಭರತ್, ಟಿ.ಪಿ. ಮಂಜುನಾಥ್, ಇ.ಸುಲೇಮಾನ್ ಶೇಕ್, ಬಿ.ಬಿ.ಸೌಮ್ಯ ಶೆಟ್ಟಿ, ದಿನೇಶ್ ಕೆ. ಕಾರ್ಯಪ್ಪ, ತೊರೆನೂರು ಸುಕುಮಾರ್, ಡಿ. ಸುಜಲಾದೇವಿ, ಡಾ.ಎ.ಎಲ್. ಚಂದ್ರಶೇಖರ್, ಕಾಜೂರು ಸತೀಶ್, ಎಚ್.ಎ. ರಾಘವೇಂದ್ರ, ಜಾನ್ ಸುಂಟಿಕೊಪ್ಪ, ಸಹನಾ ಕಾಂತಬೈಲ್, ಎಂ .ಪಿ. ಪುಷ್ಪಲತ ಶಿವಪ್ಪ, ಪಿ.ಎ. ಅಬ್ದುಲ್ ರಶೀದ್, ಎನ್. ಮಹೇಶ್, ಸಂದೇಶ್ ಜೋಸೆಫ್ ಡಿಸೋಜಾ, ಮಳುವಂಡ ನಳಿನಿಬಿಂದು, ನಾಯಕಂಡ ಬೇಬಿ ಚಿಣ್ಣಪ್ಪ, ಇಟ್ಟೀರ ಕೆ.ರಾಜಪ್ಪ, ಮುಲ್ಲೇಂಗಡ ರೇವತಿ ಪೂವಯ್ಯ, ಮೇರಿಯಂಡ ಸುಮಾ ಅಯ್ಯಪ್ಪ, ಕೊಂಗಿರಂಡ ದಮಯಂತಿ ಕುಶಾಲಪ್ಪ,ಎಂ.ಕೆ. ನಳಿನಾಕ್ಷಿ, ಟಿ.ಬಿ. ಕುಮಾರ ಸ್ವಾಮಿ, ಲೋಕೇಶ್ ಊರುಬೈಲು, ಕಡ್ಲೇರ ತುಳಸಿ ಮೊಹನ್, ಆಶಾ ಧರ್ಮಪಾಲ್ ಪ್ರಭು, ಕಡ್ಲೇರ ಜಯಲಕ್ಷ್ಮಿ ಮೋಹನ್ ಕುಮಾರ್, ಬಾರಿಯಂಡ ಜೋಯಪ್ಪ, ಪುದಿಯವೆರವನ ರೇವತಿ ರಮೇಶ್, ಎಚ್.ವಿ. ಸುನೀತಾ ವಿಶ್ವನಾಥ್, ಅಬ್ದುಲ್ಲಾ, ಎಂ.ಇ. ಮಹಮ್ಮದ್, ಬಿ.ಎಸ್. ಸತೀಶ್, ಸಬಲಂ ಬೋಜಣ್ಣ ರೆಡ್ಡಿ,  ಚಾರ್ಲ್ಸ್ ಡಿ ಸೋಜ, ಸುಚಿತ್ರ ಸಿ, ವಿನಿತ್ ಲೋಬೋ, ಕೆ.ಸಿ. ಚೇತನ್,ಅಭಿಜ್ಞಾ ಆರ್.ಕೆದಿಲಾಯ, ಡಯಾನ ಆ್ಯಂಟನಿ, ಶ್ರಿಜಾ ದಯಾನಂದ್ ಕೆ, ಬಿ .ಡಿ. ಮುತ್ತಣ್ಣ, ಎಂ.ಎಸ್.ಓಂಕಾರ್ ಕಾರ್ತಿಕೇಯನ್,ಇಂಚರ ಎಂ.ಸ್. ಕೃತಜ ಬೆಸೂರ್, ಎಂ.ಇ. ಮಹಮ್ಮದ್ ಭಾಗವಹಿಸಿ ತಮ್ಮ ಸ್ವರಚಿತ ಕವನಗಳನ್ನು ವಾಚಿಸಲಿದ್ದಾರೆ. ಸಾಹಿತ್ಯಾಸಕ್ತರು ಬಹುಭಾಷಾ ಕವಿಗೋಷ್ಠಿ ಸಮಾರಂಭಕ್ಕೆ ಆಗಮಿಸಿ ಯಶಸ್ವಿಗೊಳಿಸುವಂತೆ ಕವಿಗೋಷ್ಠಿ ಸಮಿತಿ ಮನವಿ ಮಾಡಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry