ಮಡಿಕೇರಿ ನಗರಸಭೆ ಚುನಾವಣೆ: ದಿನಾಂಕ ಪ್ರಕಟಿಸದಿರಲು ಮನವಿ

7

ಮಡಿಕೇರಿ ನಗರಸಭೆ ಚುನಾವಣೆ: ದಿನಾಂಕ ಪ್ರಕಟಿಸದಿರಲು ಮನವಿ

Published:
Updated:

ಮಡಿಕೇರಿ: ಗಣೇಶೋತ್ಸವ, ಮಡಿಕೇರಿ ದಸರಾ ಉತ್ಸವ ಮೊದಲಾದ ಹಬ್ಬಗಳು ಸಾಲುಸಾಲಾಗಿ ಬರುತ್ತಿರುವ ಹಿನ್ನೆಲೆಯಲ್ಲಿ ಮಡಿಕೇರಿ ನಗರಸಭೆ ಚುನಾವಣೆಯ ದಿನಾಂಕವನ್ನು ಪ್ರಕಟಿಸದಂತೆ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳ ಪದಾಧಿಕಾರಿಗಳು ಹಾಗೂ ದಸರಾ ಸಮಿತಿ ಸದಸ್ಯರು ಚುನಾವಣಾ ಆಯೋಗಕ್ಕೆ ಒತ್ತಾಯಿಸಿದ್ದಾರೆ.ಈ ಕುರಿತು ಮನವಿ ಪತ್ರವನ್ನು ಸೋಮವಾರ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಅವರಿಗೆ ಸಲ್ಲಿಸಲಾಗಿದ್ದು, ಚುನಾವಣಾ ಆಯೋಗಕ್ಕೆ ಕಳುಹಿಸಿಕೊಡುವಂತೆ ಸದಸ್ಯರು ಮನವಿ ಮಾಡಿಕೊಂಡರು.ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ವಾರ್ಡ್ ಮೀಸಲಾತಿಯನ್ನು ಸರ್ಕಾರ ಪ್ರಕಟಿಸಿದೆ. ಚುನಾವಣೆಯ ದಿನಾಂಕವನ್ನು ಈಗ ಪ್ರಕಟಿಸಿದರೆ ನೀತಿ ಸಂಹಿತೆ ಜಾರಿಯಾಗಿ ಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳಲು ಹಾಗೂ ಸರ್ಕಾರದಿಂದ ಅನುದಾನ ತರಲು ಕಷ್ಟವಾಗುತ್ತದೆ. ಹೀಗಾಗಿ ಚುನಾವಣೆಯ ದಿನಾಂಕವನ್ನು ಸದ್ಯಕ್ಕೆ ಪ್ರಕಟಿಸಬಾರದು ಎಂದು ಸದಸ್ಯರು ಮನವಿ ಮಾಡಿದರು.ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಪ್ರತಿಕ್ರಿಯೆ ನೀಡಿ, ಮನವಿ ಪತ್ರವನ್ನು ತಕ್ಷಣವೇ ಚುನಾವಣಾ ಆಯೋಗಕ್ಕೆ ಕಳುಹಿಸಲು ಕ್ರಮಕೈಗೊಳ್ಳುವುದಾಗಿ ಹೇಳಿದರು.ಸೆ.4ರಂದು ನಿಯೋಗ:

ಖುದ್ದಾಗಿ ಚುನಾವಣಾ ಆಯೋಗದ ಅಧ್ಯಕ್ಷರನ್ನು ಭೇಟಿ ಮಾಡಿ, ತಮ್ಮ ಅಹವಾಲನ್ನು ಮಂಡಿಸಲು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ದಸರಾ ಸಮಿತಿಯ ಸದಸ್ಯರು ಹಾಗೂ ಸರ್ವ ಪಕ್ಷಗಳ ನಿಯೋಗ ಸೆಪ್ಟೆಂಬರ್ 4ರಂದು ಬೆಂಗಳೂರಿಗೆ ತೆರಳಲಿದೆ.ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡುವುದಕ್ಕಿಂತ ಮುಂಚೆ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಸಭೆಯಲ್ಲಿ ಸದಸ್ಯರು ಈ ತೀರ್ಮಾನವನ್ನು ಕೈಗೊಂಡರು.ಮಡಿಕೇರಿ ದಸರಾ ಜನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಕೆ.ಎಂ. ಗಣೇಶ, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಜಿ. ಚಿದ್ವಿಲಾಸ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಶ್ರಿಧರ ನೆಲ್ಲಿತ್ತಾಯ, ಮುನೀರ್ ಅಹಮದ್, ಕೋಡಿ ಚಂದ್ರಶೇಖರ, ಮಹೇಶ್ ಜೈನಿ, ಬಿ.ವೈ. ರಾಜೇಶ್, ಹಾರೂನ್, ವಿ.ಪಿ.ಸುರೇಶ್, ಅಬ್ದುಲ್ ರಜಾಕ್, ಹನೀಫ್ ಸಭೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry