ಮಡೆಸ್ನಾನ ತಡೆಯಲು ಎಲ್ಲರ ಸಹಕಾರ ಅಗತ್ಯ: ಆಚಾರ್ಯ

7

ಮಡೆಸ್ನಾನ ತಡೆಯಲು ಎಲ್ಲರ ಸಹಕಾರ ಅಗತ್ಯ: ಆಚಾರ್ಯ

Published:
Updated:

ಬೆಂಗಳೂರು: `ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ `ಮಡೆ ಸ್ನಾನ~ ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದ್ದು, ಅದನ್ನು ದಿಢೀರ್ ನಿಲ್ಲಿಸುವುದಕ್ಕಿಂತ ಎಲ್ಲರ ಸಹಮತದಿಂದಲೇ ಅದಕ್ಕೆ ತಡೆ ಹಾಕಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಗಳನ್ನು ನಡೆಸಿದೆ~ ಎಂದು ಮುಜರಾಯಿ ಸಚಿವ ಡಾ.ವಿ.ಎಸ್.ಆಚಾರ್ಯ ಶುಕ್ರವಾರ ವಿಧಾನಸಭೆಗೆ ತಿಳಿಸಿದರು.ಮಸೂದೆಗಳ ಕುರಿತು ಚರ್ಚೆ ನಡೆಸುವಾಗ ಕಾಂಗ್ರೆಸ್‌ನ ವಿ.ಶ್ರೀನಿವಾಸ ಪ್ರಸಾದ್ ವಿಷಯ ಪ್ರಸ್ತಾಪಿಸಿ, `ಅನಿಷ್ಟ ಪದ್ಧತಿಯಾದ ಮಡೆ ಸ್ನಾನ ತಕ್ಷಣ ನಿಷೇಧಿಸಬೇಕು~ ಎಂದು ಆಗ್ರಹಪಡಿಸಿದರು.ಇದೇ ಸಂದರ್ಭದಲ್ಲಿ ಬಿಜೆಪಿಯ ಕೆ.ಎಸ್.ಈಶ್ವರಪ್ಪ ಮಾತನಾಡಿ, `ಮಡೆ ಸ್ನಾನಕ್ಕೆ ನಮ್ಮ ವಿರೋಧವೂ ಇದೆ. ಯಾವ ಹಿಂದುವಾದಿಯೂ ಈ ಅನಿಷ್ಟ ಪದ್ಧತಿ ಒಪ್ಪಲು ಸಾಧ್ಯ ಇಲ್ಲ~ ಎಂದು ಪ್ರಸಾದ್ ಅವರ ಬೆಂಬಲಕ್ಕೆ ನಿಂತರು.`ರಾಜ್ಯದ ವಿವಿಧ ಕಡೆ ನಡೆಯುತ್ತಿರುವ ಇಂತಹ ಅನಿಷ್ಟ ಪದ್ಧತಿಗಳನ್ನು ತಕ್ಷಣ ನಿಲ್ಲಿಸಬೇಕು. ಆದರೆ, ಅನಿಷ್ಟ ಪದ್ಧತಿಗಳೆಲ್ಲದಕ್ಕೂ ಹಿಂದುಗಳು ಕಾರಣ ಎಂಬುದು ಒಪ್ಪಲಾರೆ. ಯಾವುದೇ ಧರ್ಮದಲ್ಲಿ ಈ ರೀತಿಯ ಪದ್ಧತಿಗಳಿದ್ದರೂ ಅದರ ವಿರುದ್ಧ ಕ್ರಮ ತೆಗೆದುಕೊಳ್ಳಲಿ~ ಎಂದು ಅವರು ಸ್ಪಷ್ಟಪಡಿಸಿದರು.ನಂತರ ಆಚಾರ್ಯ ಮಾತನಾಡಿ, `ಕಾಂಗ್ರೆಸ್‌ನವರು ಸ್ವಾತಂತ್ರ್ಯ ಬಂದ ನಂತರ ಅತಿ ಹೆಚ್ಚು ವರ್ಷ ಅಧಿಕಾರದಲ್ಲಿದ್ದರು. ಆಗ ಮಡೆ ಸ್ನಾನದ ಬಗ್ಗೆ ಯಾವ ಕ್ರಮವನ್ನೂ ತೆಗೆದುಕೊಳ್ಳದವರು ಈಗ ತಕ್ಷಣ ನಿಷೇಧಿಸಬೇಕು ಎನ್ನುತ್ತಾರೆ. ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವುದನ್ನು ದಿಢೀರ್ ನಿಷೇಧಿಸಲು ಆಗುವುದಿಲ್ಲ.

 

ಹೀಗಾಗಿ ಒಮ್ಮತಾಭಿಪ್ರಾಯದ ನಂತರವೇ ಆ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು. ಒಪ್ಪಿಸುವ ಕೆಲಸ ಸರ್ಕಾರದ ಕಡೆಯಿಂದ ನಡೆಯುತ್ತಿದೆ~ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry