ಬುಧವಾರ, ಜೂನ್ 23, 2021
28 °C

ಮಡೆಸ್ನಾನ ನಿಷೇಧಕ್ಕೆ ಒತ್ತಾಯ:ವಿವಿಧ ಸಂಘಟನೆಗಳ ಪ್ರತಿಭಟನಾ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡೆಸ್ನಾನ ನಿಷೇಧಕ್ಕೆ ಒತ್ತಾಯ:ವಿವಿಧ ಸಂಘಟನೆಗಳ ಪ್ರತಿಭಟನಾ ಧರಣಿ

ರಾಯಚೂರು: ರಾಜ್ಯಾದ್ಯಂತ ಮಡೆಸ್ನಾನ, ಮಡೆ ಎಂಜಲು ಹಾಗೂ ಪಾದೋದಕ ಮುಂತಾದ ಆಚರಣೆಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರೈತ ಸಂಘ, ದಲಿತ ಸಂಘರ್ಷ ಸಮಿತಿ(ಭೀಮವಾದ) ಹಾಗೂ ಅಖಿಲ ಭಾರತ ಕ್ರಾಂತಿಕಾರಿ ಮಹಿಳಾ ಮತ್ತು ಮಾದಿಗರ ಮೀಸಲಾತಿ ಹೋರಾಟ ಸಮಿತಿಯ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸೋಮವಾರ ಧರಣಿ ನಡೆಸಿದರು.ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನಾ ಧರಣಿ ನಡೆಸಿ ಬಳಿಕ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ಎಂಜಲು ಎಲೆಗಳ ಮೇಲೆ ಉರುಳಿದರೆ ಆದಿವಾಸಿ ದಲಿತ ಸಮುದಾಯದ ಜನ್ಮ ಪಾವನವಾುತ್ತದೆ ಎಂಬ ಮಡೆಸ್ನಾನ ಪದ್ಧತಿಯ ವಿರುದ್ಧ ರಾಜ್ಯದ ಜನೆತೆ ವಿರೋಧ ವ್ಯಕ್ತಪಡಿಸಿದ್ದಾರೆ.ಪಂಕ್ತಿ ಬೇಧವನ್ನು ಸಮರ್ಥಿಕೊಳ್ಳುತ್ತಿರುವ ಬ್ರಾಹ್ಮಣ ಸ್ವಾಮಿಜೀಗಳ ವಿರುದ್ಧವೂ ಕರ್ನಾಟಕ ಜನ ವಿರೋಧಿಸುತ್ತಿದ್ದಾರೆ. ಇಂಥ ಪದ್ಧತಿಗಳನ್ನು ನಂಬಿಕೆ ಮತ್ತು ಧಾರ್ಮಿಕ ವಿಶ್ವಾಸದ ಹೆಸರಿನಲ್ಲಿ ಬಿಜೆಪಿ ಸರ್ಕಾರವು ಸಮರ್ಥಿಸಿಕೊಳ್ಳತ್ತಿದೆ ಎಂದು ಆರೋಪಿಸಿದರು.ಭಾರತದ ಸಂವಿಧಾನಕ್ಕಿಂತ ಮೇಲ್ಜಾತಿ ಹಾಗೂ ಮೇಲ್ವರ್ಗದ ಅಮಾನವೀಯ ಪದ್ಧತಿಗೆ ಮನ್ನಣೆ ನೀಡಲಾಗುತ್ತಿದೆ. ಜೋತಿಷ್ಯಶಾಸ್ತ್ರ ಪ್ರತಿಪಾದಿಸುವವರಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಉತ್ಪನ್ನಗಳನ್ನು ಬಳಸುವ ಹಕ್ಕು ಇರುವುದಿಲ್ಲ ಎಂದು ಟೀಕಿಸಿದರು.ಮಡೆಸ್ನಾನ ಹಾಗೂ ಪಂಕ್ತಿಬೇಧಗಳನ್ನು ನಿಷೇಧಿಸಬೇಕು, ಈ ಸಮಾಜ ಘಾತುಕ ಅನಿಷ್ಟ ಪದ್ಧತಿಗಳನ್ನು ಸಮರ್ಥಿಸುವವರ ಮೇಲೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಧಾರ್ಮಿಕ ಮಠ, ಮಂದಿರ, ಗುಡಿಗುಂಡಾರಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಪಂಕ್ತಿಬೇಧ ಮಾಡುವುದನ್ನು ನಿಷೇಧಿಸಬೇಕು, ಕಾನೂನು ವಿರುದ್ಧವಾಗಿ ನಡೆದುಕೊಳ್ಳುವವರ ವಿರುದ್ಧ ಜೈಲಿಗೆ ಕಳುಹಿಸಬೇಕು ಎಂದು ಒತ್ತಾಯಿಸಿದರು.ಪ್ರತಿಭಟನಾ ಧರಣಿಯಲ್ಲಿ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ, ದಲಿತ ಸಂಘರ್ಷ ಸಮಿತಿ(ಭೀಮವಾದ) ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ಶಾಂತಪ್ಪ ದೊಡ್ಡಿ, ರವೀಂದ್ರ ಪಟ್ಟಿ, ಮಾದಿಗ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಹೇಮರಾಜ್ ಅಸ್ಕಿಹಾಳ ಕೆಆರ್‌ಎಸ್‌ನ ತಾಲ್ಲೂಕು ಅಧ್ಯಕ್ಷ ಎಸ್.ರಾಜಶೇಖರ, ಅಖಿಲ ಭಾರತ ಕ್ರಾಂತಿಕಾರಿ ಮಹಿಳಾ ಸಂಘಟನೆಯ ಉಪಾಧ್ಯಕ್ಷೆ ಚನ್ನಮ್ಮ, ಕೆಆರ್‌ಎಸ್ ರಾಜ್ಯ ಮುಖಂಡ ಕೆ.ನಾಗಲಿಂಗಸ್ವಾಮಿ, ಹುಚ್ಚರೆಡ್ಡಿ, ಅಂಬಣ್ಣ ಆರೋಲಿ, ಜೆ.ಬಿ ರಾಜು, ಕೆ.ಪಿ ಅನಿಲಕುಮಾರ, ರಾಜೇಶ, ಶರಣಬಸವ, ಎಂ.ಆರ್ ಬೇರಿ, ನರಸಿಂಹಲು ನೆಲಹಾಳ, ಸುರೇಶ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.