ಶುಕ್ರವಾರ, ನವೆಂಬರ್ 15, 2019
21 °C

ಮಣಪ್ಪುರಂ ಶಾಖೆ ಉದ್ಘಾಟನೆ

Published:
Updated:

ಬೆಂಗಳೂರು: ನಗರದಲ್ಲಿ `ಮಣಪ್ಪುರಂ ಚಿಟ್ಸ್'ನ ಪ್ರಥಮ ಶಾಖೆಯನ್ನು ನಗರದ ಹೊಸಕರೆಹಳ್ಳಿಯಲ್ಲಿ ಈಚೆಗೆ ಆರಂಭಿಸಲಾಯಿತು. ಪಾಲಿಕೆ ಸದಸ್ಯ ಎಚ್.ನಾರಯಣ  ಶಾಖೆಯನ್ನು ಉದ್ಘಾಟಿಸಿದರು.ಮಣಪ್ಪುರಂ ಚಿಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರೊ.ಕೆ.ಜಿ.ರವಿ, `ಗ್ರಾಹಕರ ಖುಷಿಯೇ ಮೊದಲ ಆದ್ಯತೆ. ಫಂಡ್‌ನ ಯೋಜನೆಗಳಿಂದ ಗ್ರಾಹಕರಿಗೆ ಸಂಪೂರ್ಣ ಪ್ರಯೋಜನವಾಗಲಿದೆ' ಎಂದು ತಿಳಿಸಿದರು.`ಗ್ರಾಹಕರಿಗೆ ತೊಂದರೆಯಾಗದಂತೆ  ನೀತಿ ನಿಯಮಗಳನ್ನು ಪಾಲಿಸುವುದರೊಂದಿಗೆ ಹೆಚ್ಚಿನ ವಿಶ್ವಾಸರ್ಹತೆಯನ್ನು ಕಾಯ್ದುಕೊಳ್ಳಲಾಗುವುದು' ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)