ಮಣಪ್ಪುರಂ ಸಮಾಜಸೇವೆ

7

ಮಣಪ್ಪುರಂ ಸಮಾಜಸೇವೆ

Published:
Updated:

ಚಿನ್ನಾಭರಣ ಮಳಿಗೆಗಳ ಸರಣಿ ಮಣಪ್ಪುರಂ ಜುವೆಲರ್ಸ್ ಇಂದಿರಾ ನಗರ 80 ಅಡಿ ರಸ್ತೆಯಲ್ಲಿ ಹೊಸ ಮಳಿಗೆ ಆರಂಭಿಸಿತು. ಇದರ ಜತೆಜತೆಗೇ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ ಅನೇಕ ಸಮಾಜ ಸೇವಾ ಕಾರ್ಯಕ್ಕೂ ಚಾಲನೆ ನೀಡಿತು.ಸರ್ಕಾರಿ ಮತ್ತು ಪಾಲಿಕೆ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಬಡ ಕುಟುಂಬಗಳ ನೂರಾರು ಮಕ್ಕಳನ್ನು ಗುರುತಿಸಿ ಶಾಲಾ ಪರಿಕರಗಳು, ಬ್ಯಾಗ್, ಲೇಖನ ಸಾಮಗ್ರಿ ವಿತರಿಸಿತು. ಇದಲ್ಲದೆ ಅನೇಕ ಬಡ ಮಕ್ಕಳಿಗೆ ಪ್ರತಿಭಾ ವೇತನ ನೀಡಲಾಯಿತು. ವಿಶೇಷ ಎಂದರೆ ಇವರೆಲ್ಲ ಇಂದಿರಾ ನಗರ ಮತ್ತು ಸುತ್ತಲಿನ ಪ್ರದೇಶಗಳವರು.ಮಣಪ್ಪುರಂ ಜ್ಯುವೆಲರ್ಸ್ ಅಧ್ಯಕ್ಷ ವಿ.ಪಿ. ನಂದಕುಮಾರ್ ಹೇಳುವಂತೆ, ಇದರ ಹೊರತಾಗಿ ಅನಾರೋಗ್ಯಪೀಡಿತ ಮಕ್ಕಳು ಮತ್ತು ಅವರ ಪೋಷಕರಿಗೆ ಶಸ್ತ್ರಕ್ರಿಯೆಗೆ ನೆರವು ನೀಡುವ ಕಾರ್ಯಕ್ರಮವೂ ಇದೆ. ಇದಕ್ಕೆಲ್ಲ 5 ಲಕ್ಷ ರೂಪಾಯಿಗೂ ಹೆಚ್ಚು ವೆಚ್ಚ ಮಾಡಲಾಗುತ್ತಿದೆ.


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry