ಮಣಪ್ಪುರಂ ಸುಂದರಿಯರು

7

ಮಣಪ್ಪುರಂ ಸುಂದರಿಯರು

Published:
Updated:
ಮಣಪ್ಪುರಂ ಸುಂದರಿಯರು

ಮಣಪ್ಪುರಂ ರಿತಿ ಜ್ಯುವೆಲರ್ಸ್‌ನ ಎರಡನೇ ಮಳಿಗೆಯ (ಇಂದಿರಾನಗರ 80 ಅಡಿ ರಸ್ತೆ) ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ತೆರೆಯಲಾದ `ಆಂಟಿಕ್ ಬೊಟಿಕ್'ನ್ನು ಚಿತ್ರನಟಿ ನೀತು ಶೆಟ್ಟಿ ಉದ್ಘಾಟಿಸಿದರು. ಈ ಬೊಟಿಕ್‌ನಲ್ಲಿ ಲಭ್ಯವಿರುವ ವಿವಿಧ ಕುಸುರಿ ಒಡವೆಗಳನ್ನು ರೂಪದರ್ಶಿಯರು ಧರಿಸಿ ರ್‍ಯಾಂಪ್‌ವಾಕ್ ಮಾಡಿದರು. ನೀತು ಶೆಟ್ಟಿ ಸಹ ಕೆಲವು ಒಡವೆಗಳನ್ನು ಧರಿಸಿ ಸಂಭ್ರಮಿಸಿದರು.ಮಣಪ್ಪುರಂನ ಆಭರಣಗಳು ಅಪೂರ್ವ ಆಭರಣ ಕುಸುರಿ ಕಲೆಗಾರಿಕೆ ಹೆಸರು ಪಡೆದಿವೆ. ಸಾಂಪ್ರದಾಯಿಕ ಮತ್ತು ಆಧುನಿಕ ಮನೋಭಾವದವರಿಗೂ ಇಷ್ಟವಾಗುವ ಮತ್ತಷ್ಟು ನೂತನ ವಿನ್ಯಾಸಗಳ ಸಂಗ್ರಹವನ್ನು, ಬಂಗಾರದ ಕುಸುರಿಗಳನ್ನು ಬೊಟಿಕ್‌ನಲ್ಲಿ ಕಾಣಬಹುದು. ಇದೇ ಸಂದರ್ಭದಲ್ಲಿ ಮಣಪ್ಪುರಂ ರಿತಿ ಜ್ಯವೆಲ್ಲರ್ಸ್‌ನ `ಡೈಮಂಡ್ ವೆಬ್‌ಸೈಟ್' (www.manappuramdiamonds.com)  ಚಾಲನೆ ನೀಡಲಾಯಿತು.  ಆನ್‌ಲೈನ್ ಗ್ರಾಹಕರಿಗೆ ಉಚಿತ ಹೋಂ ಡೆಲಿವರಿ ಸೌಲಭ್ಯ ಮತ್ತು ಪ್ರತಿಶತ ಮರು ಖರೀದಿಸುವ ಖಚಿತತೆ ಇರುತ್ತದೆ. ಜತೆಗೆ, ಒಂದು ಲಕ್ಷ ರೂ ಮೌಲ್ಯಕ್ಕಿಂತ ಹೆಚ್ಚಿನ ಖರೀದಿಗೆ ಚಿನ್ನದ ನಾಣ್ಯ ಹಾಗೂ ಶೇ 25 ಮಾರ್ಕೆಟ್ ಚಾರ್ಜ್ ರಿಯಾಯಿತಿ ವಜ್ರದ ಗ್ರಾಹಕರಿಗೆ ಪ್ರತಿ ಕ್ಯಾರಟ್ ಮೇಲೆ 5000ದವರೆಗೆ ರಿಯಾಯಿತಿಯೂ ಲಭ್ಯ. ಅಲ್ಲದೆ `ಮಣಪ್ಪುರಂ ಗೋಲ್ಡ್ ಫೆಸ್ಟ್ 2013'ನಲ್ಲಿ ಗೆಲ್ಲುವ ಅವಕಾಶವೂ ಇರುತ್ತದೆ. ಈ ಸೌಲಭ್ಯಗಳು ಮಾ. 3ರವರೆಗೂ ಲಭ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry