ಮಂಗಳವಾರ, ಮಾರ್ಚ್ 2, 2021
31 °C
ಸಶಸ್ತ್ರಪಡೆ ವಿಶೇಷಾಧಿಕಾರ ಕಾಯ್ದೆ ವಿರುದ್ಧ ಇರೋಮ್‌ ಶರ್ಮಿಳಾ ಘೋಷಣೆ

ಮಣಿಪುರದ ಮುಖ್ಯಮಂತ್ರಿಯಾಗಿ ಹೋರಾಡುವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಣಿಪುರದ ಮುಖ್ಯಮಂತ್ರಿಯಾಗಿ ಹೋರಾಡುವೆ

ಇಂಫಾಲ(ಪಿಟಿಐ): ಬದಲಾವಣೆಗಳನ್ನು  ತರಲು ಮಣಿಪುರದ ಮುಖ್ಯಮಂತ್ರಿಯಾಗುವ ಬಯಕೆ ನನಗಿದೆ.  ಸಿ.ಎಂ ಆಗಿ ಸಶಸ್ತ್ರಪಡೆ ವಿಶೇಷಾಧಿಕಾರ ಕಾಯ್ದೆ (ಎಎಫ್‌ ಎಸ್‌ಪಿಎ)ಯನ್ನು ಮೊದಲು ರದ್ದು ಮಾಡುತ್ತೇನೆ’ ಎಂದು ಉಪವಾಸ ಅಂತ್ಯ ಗೊಳಿಸಿದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಶರ್ಮಿಳಾ ಹೇಳಿದರು.‘ನನಗೆ ಅಧಿಕಾರ ಬೇಕಾಗಿದೆ. ಮಣಿಪುರದಲ್ಲಿ ರಾಜಕೀಯ ಎಷ್ಟು ಕೊಳಕಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಆದರೆ ಇದರ ಬಗ್ಗೆ ಜನರಿಗೆ ಅರಿವು ಇಲ್ಲ.  ಅವರೂ ಕೊಳಕು ರಾಜಕೀಯದಲ್ಲಿ ಮುಳುಗಿದ್ದಾರೆ.  ಈಗಿನ ಮುಖ್ಯಮಂತ್ರಿಯನ್ನು ಕೆಳಗಿಳಿಸಲು ನನಗೆ 20 ಸ್ವತಂತ್ರ ಅಭ್ಯರ್ಥಿಗಳು ಬೇಕಾಗಿದ್ದಾರೆ’ ಎಂದು ಹೇಳಿದರು.‘ಮಿಸ್ಟರ್ ಪ್ರಧಾನಿ ಅವರೇ ನಿಮಗೆ ಈ ವಯಸ್ಸಿನಲ್ಲಿ ಅಹಿಂಸೆಯ ಅಗತ್ಯವಿದೆ.  ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ  ರದ್ದುಪಡಿಸದೆ ಇದು ಸಾಧ್ಯವಿಲ್ಲ. ನೀವು ಮಹಾತ್ಮ ಗಾಂಧಿ ಅವರ ಅಹಿಂಸೆ ಮಾರ್ಗ ಅನುಸರಿಸಬೇಕಿದೆ’ ಎಂದು ಹೇಳಿದರು.‘ನಾನು ಸದ್ಯಕ್ಕೆ ಆಶ್ರಮವೊಂದರಲ್ಲಿ ಇರುತ್ತೇನೆ. ಯಾವುದೇ ಭದ್ರತೆಯ ಅಗತ್ಯವಿಲ್ಲ. ‘ಮಣಿಪುರದ ದೇವತೆ’ ಎಂದು ನನ್ನನ್ನು ಕರೆಯಬೇಕಾಗಿಲ್ಲ. ನಾನು ಕೇವಲ ಮಹಿಳೆಯಷ್ಟೇ’ ಎಂದರು.‘16 ವರ್ಷಗಳಿಂದ ನನಗೆ ಉಪವಾಸ  ಮಾಡುವುದು ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ. ಹೊಸತೇನಾದರೂ ಮಾಡಲು ನಾನು ಈ ನಿರ್ಧಾರ ಕೈಗೊಂಡಿದ್ದೇನೆ’ ಎಂದು ಹೇಳಿದರು.‘ಯಾಕೆ ಬದಲಾವಣೆ ಬೇಕಾಗಿದೆ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ‘ಬದಲಾವಣೆ ಎಂದರೆ ಎಎಫ್‌ಎಸ್‌ಪಿಎ ಕಾಯ್ದೆ ವಿರುದ್ಧದ ಹೋರಾಟ. ಏಕೆಂದರೆ ಮಣಿಪುರದಲ್ಲಿ ನಿಜವಾದ ಪ್ರಜಾಪ್ರಭುತ್ವವೇ ಇಲ್ಲ’ ಎಂದರು.ಮದುವೆ ವೈಯಕ್ತಿಕ:  ವಿವಾಹವಾಗುವ ಆಲೋಚನೆ ಏನಾದರೂ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಅದು ವೈಯಕ್ತಿಕ ಆಯ್ಕೆ. ಪ್ರೇಮವಿವಾಹ ಸ್ವಾಭಾವಿಕ ವಲ್ಲವೇ? ಎಂದು ಮರುಪ್ರಶ್ನೆ ಹಾಕಿದರು.ಎಎಫ್‌ಎಸ್‌ಪಿಎ ಕಾಯ್ದೆ ಬದಲಾದ ನಂತರವೇ ತಾನು ಆಶ್ರಮದಲ್ಲಿರುವ ತಾಯಿಯನ್ನು ನೋಡುವುದಾಗಿ ಘೋಷಣೆ ಮಾಡಿದರು. ‘ಮೂಲಭೂತವಾದಿ ಗುಂಪು ಮತ್ತು ಉಗ್ರರಿಂದ ಬೆದರಿಕೆ’ ಇದೆಯೇ ಎಂಬ ಪ್ರಶ್ನೆಗೆ ‘ನನ್ನ ರಕ್ತ ಬೀಳುವುದರಿಂದ ಅವರ ಚಳವಳಿ ಪೂರ್ಣಗೊಳ್ಳುವುದಾ ದರೆ ಅದನ್ನು ಒಂದು ಬಾರಿ ನೋಡ ಬಹುದು. ಮಹಾತ್ಮ ಗಾಂಧಿ ಮತ್ತು ಜೀಸಸ್‌ ಬೇರೆಯವರಿಗಾಗಿ ರಕ್ತ ಚೆಲ್ಲಿದರು’ ಎಂದು ಉತ್ತರಿಸಿದರು.ಉಪವಾಸ ಅಂತ್ಯಗೊಳಿಸಿದ  ಬಳಿಕ ಅವರನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ವೈದ್ಯಕೀಯ ಪರೀಕ್ಷೆಯ ಬಳಿಕ   ಶರ್ಮಿಳಾ ಅವರು ಆಹಾರ ಸೇವನೆ ಮಾಡಲಿದ್ದಾರೆ ಎಂದು ಅವರ ಸಹೋ ದರ ಇರೋಮ್‌ ಸಿಂಗ್‌ಜಿತ್‌ ತಿಳಿಸಿದ್ದಾರೆ.ಬದಲಾದ  ದಿನಚರಿ : 16 ವರ್ಷಗಳಿಂದ  ಉಪವಾಸ ನಡೆಸುತ್ತಿದ್ದ ಶರ್ಮಿಳಾ ಅವರ ಎಂದಿನ ದಿನಚರಿಗಿಂತ ಮಂಗಳವಾರ ವಿಭಿನ್ನವಾಗಿತ್ತು. ಪ್ರತಿ 15 ದಿನಗಳಿಗೊಮ್ಮೆ ಅಂಬು ಲೆನ್ಸ್‌ನಲ್ಲಿ  ಜವಾಹರಲಾಲ್‌ ನೆಹರು ವೈದ್ಯಕೀಯ ಮಹಾವಿದ್ಯಾ ಲಯದ ಆಸ್ಪತ್ರೆಯಿಂದ ಅವರನ್ನು  ಸಿಜೆಎಂ ನ್ಯಾಯಾಲಯಕ್ಕೆ ಹಾಜರುಪಡಿಸ ಲಾಗುತ್ತಿತ್ತು. ಮಂಗಳವಾರ ಅವರನ್ನು ನ್ಯಾಯಧೀಶರ ಮುಂದೆ ‘ನೀವು ಉಪವಾಸ ಕೈಬಿಡುತ್ತೀರೊ ಇಲ್ಲವೊ’ ಎಂದು ಅವರು ಪ್ರಶ್ನಿಸುತ್ತಿದ್ದರು.16 ವರ್ಷದಿಂದ ಶರ್ಮಿಳಾ ಈ ಪ್ರಶ್ನೆಗೆ ‘ನಾನು ಉಪವಾಸ ಅಂತ್ಯಗೊಳಿ ಸುವುದಿಲ್ಲ’ ಎಂದು ಉತ್ತರಿಸುತ್ತಿದ್ದರು. ಮಂಗಳವಾರ ಉತ್ತರ ಅವರ ಬದ ಲಾಗಿತ್ತು. ಶರ್ಮಿಳಾ ಅವರು ಹಲವು ಬಾರಿ ಬಿಡುಗಡೆಯಾಗಿ ಮತ್ತೆ ಬಂಧ ನಕ್ಕೊಳ ಗಾಗುತ್ತಿದ್ದರು. ಅವರನ್ನು ಆಸ್ಪತ್ರೆಯ ಕೊಠಡಿಯಲ್ಲಿ ಏಕಾಂಗಿಯಾಗಿ ಇರಿಸಲಾಗಿತ್ತು.ಉಪವಾಸ ಕೊನೆಗೂ ಅಂತ್ಯ

ಇಂಫಾಲ(ಪಿಟಿಐ): ಮಣಿಪುರದಲ್ಲಿ ಜಾರಿಯಲ್ಲಿರುವ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ  (ಎಎಫ್‌ಎಸ್‌ಪಿಐ) ರದ್ದುಮಾಡಬೇಕು ಎಂದು ಆಗ್ರಹಿಸಿ 16 ವರ್ಷಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ  ಇರೋಮ್‌ ಛಾನು ಶರ್ಮಿಳಾ ಮಂಗಳವಾರ ಉಪವಾಸ ಅಂತ್ಯಗೊಳಿಸಿದರು.  

ಅಂಗೈ ಮೇಲೆ ಜೇನು ಹಾಕಿಕೊಂಡು  ನೆಕ್ಕುವ ಮೂಲಕ ಉಪವಾಸ ಅಂತ್ಯ ಮಾಡಿದ 44 ವರ್ಷದ ಇರೋಮ್‌ ಪತ್ರಿಕಾಗೋಷ್ಠಿಯಲ್ಲಿ ತೀರಾ ಭಾವುಕ ರಾಗಿದ್ದರು. 2000 ರಿಂದ ದ್ರವರೂಪದ ಆಹಾರವನ್ನು ಮೂಗಿಗೆ  ಅಳವಡಿಸಿದ್ದ ನಳಿಕೆಯಿಂದ ನೀಡಲಾಗುತ್ತಿತ್ತು.ಸರ್ಕಾರಿ ಆಸ್ಪತ್ರೆಯ ಹೊರಭಾಗದಲ್ಲಿ ಕೊಠಡಿಯೊಂದರಲ್ಲಿ ಶರ್ಮಿಳಾ ಅವರನ್ನು ಇರಿಸಲಾಗಿತ್ತು. ಅದು ಅವರಿಗೆ ಜೈಲಿನ ಕೋಣೆಯಾಗಿತ್ತು.ಇಂಫಾಲದ ಪಶ್ಚಿಮ ಜಿಲ್ಲೆಯ ಮ್ಯಾಜಿಸ್ಟ್ರೇಟ್‌ ಲಖನ್‌ಪಾವ್‌ ತೋನ್ಸಿಂಗ್‌  ಅವರು ಇರೋಮ್‌ ಅವರಿಗೆ ₹10 ಸಾವಿರ ಮೊತ್ತದ ವೈಯಕ್ತಿಕ ಬಾಂಡ್‌ ಮೇಲೆ ಜಾಮೀನು ನೀಡಿದ್ದರು.ಬಾಂಡ್‌ ನೀಡುವ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಅದನ್ನು ನ್ಯಾಯಾಲಯ ಒಪ್ಪಿಕೊಂಡಿತು. ಆನಂತರ ಬಿಡುಗಡೆ ಆದೇಶ ಹೊರಬಿತ್ತು. 

ಇದೇ 23 ರಂದು ಮತ್ತೊಮ್ಮೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಶರ್ಮಿಳಾ ಅವರಿಗೆ ಸೂಚಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.