ಮಣಿಪುರ: ಕರ್ಪ್ಯೂ

7

ಮಣಿಪುರ: ಕರ್ಪ್ಯೂ

Published:
Updated:

ಇಂಫಾಲ (ಪಿಟಿಐ): ಮಣಿಪುರದಲ್ಲಿ ಇತ್ತೀಚೆಗೆ ಚಿತ್ರನಟಿ ಹಾಗೂ ಇಬ್ಬರು ಕಲಾವಿದೆಯರ ಮೇಲೆ ನಡೆದ ಮಾನಭಂಗ ವಿರೋಧಿಸಿ ಗುರುವಾರವೂ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಗುಡ್ಡಗಾಡಿನ ನಾಲ್ಕು ಜಿಲ್ಲೆಗಳಲ್ಲಿ ಮತ್ತೆ ಕರ್ಪ್ಯೂ ಜಾರಿಗೊಳಿಸಲಾಗಿದೆ.ಚಿತ್ರೋದ್ಯಮ ಸೇರಿ ವಿವಿಧ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಸರ್ಕಾರಿ ಹಾಗೂ ಇತರೆ ಕಚೇರಿಗಳಲ್ಲಿ ನೌಕರರ ಗೈರು ಹಾಜರಿ ಎದ್ದುಕಾಣುತ್ತಿತ್ತು. ಬ್ಯಾಂಕ್‌ಗಳು, ಶಾಲಾ ಕಾಲೇಜುಗಳು ಮುಚ್ಚಿದ್ದವು. ಎಲ್ಲ ಮಾರುಕಟ್ಟೆಗಳು, ಅಂಗಡಿ- ಮುಗ್ಗಟ್ಟು ಬಂದ್ ಆಗಿದ್ದವು. ನೆರೆ ರಾಜ್ಯಗಳ ಸಂಚಾರ ರದ್ದಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry