ಮಣಿಪುರ ವಿದ್ಯಾರ್ಥಿಗಳ ಸದ್ಭಾವನಾ ಪ್ರವಾಸ

7

ಮಣಿಪುರ ವಿದ್ಯಾರ್ಥಿಗಳ ಸದ್ಭಾವನಾ ಪ್ರವಾಸ

Published:
Updated:
ಮಣಿಪುರ ವಿದ್ಯಾರ್ಥಿಗಳ ಸದ್ಭಾವನಾ ಪ್ರವಾಸ

ಬೆಂಗಳೂರು: ಭಾರತೀಯ ಸದ್ಭಾವನಾ ಪ್ರವಾಸದ ಅಂಗವಾಗಿ ಮಣಿಪುರದ ಚಾಂಡೇಲ್ ಜಿಲ್ಲೆಯ ವಿದ್ಯಾರ್ಥಿಗಳು ನಗರದ ಆರ್ಮಿ ಸರ್ವಿಸ್ ಕಾರ್ಪ್ಸ್ ಸೆಂಟರ್ ಮತ್ತು ಕಾಲೇಜ್‌ಗೆ ಬುಧವಾರ ಭೇಟಿ ನೀಡಿದರು.ಸದ್ಭಾವನಾ ಯೋಜನೆಯಲ್ಲಿ ಅಸ್ಸಾಂ ರೈಫಲ್ಸ್ (42) ಐದು ದಿನಗಳ ಈ ಪ್ರವಾಸ ಆಯೋಜಿಸಿದೆ. ಒಟ್ಟು ಇಪ್ಪತ್ತು ಮಂದಿ ವಿದ್ಯಾರ್ಥಿಗಳು ಈ ಪ್ರವಾಸದಲ್ಲಿ ಪಾಲ್ಗೊಂಡಿದ್ದಾರೆ. ವಿದ್ಯಾರ್ಥಿಗಳು, ಉಗ್ರರ ಉಪಟಳ ಇರುವ ಚಾಂಡೇಲ್ ಜಿಲ್ಲೆಯ ಪುಟ್ಟ ಹಳ್ಳಿಗೆ ಸೇರಿದವರಾಗಿದ್ದಾರೆ. ಐದು ದಿನಗಳ ಪ್ರವಾಸಕ್ಕಾಗಿ ಫೆ 13ರಂದು ನಗರಕ್ಕೆ ಬಂದಿರುವ ಅವರು ಲಾಲ್‌ಬಾಗ್ ಉದ್ಯಾನಕ್ಕೂ ಭೇಟಿ ನೀಡಿ ಸೌಂದರ್ಯ ಸವಿದರು.ಜಾಲಹಳ್ಳಿ ವಾಯುನೆಲೆ, ಭಾರತ್ ಹೆವಿ ಎಲೆಕ್ಟ್ರಿಕಲ್ ಲಿಮಿಟೆಡ್ ಮುಂತಾದ ಸ್ಥಳಗಳಿಗೂ ಅವರು ಭೇಟಿ ನೀಡಲಿದ್ದಾರೆ. ಅಲ್ಲದೇ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರನ್ನು ಭೇಟಿಯಾಗಲಿದ್ದಾರೆ. ಬೆಂಗಳೂರು ಮತ್ತು ಮೈಸೂರು ಜಿಲ್ಲೆಯ ಐತಿಹಾಸಿಕ ಪ್ರದೇಶಗಳಿಗೂ ಅವರು ಭೇಟಿ ನೀಡಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.ದೆಶದ ಭಿನ್ನ ಸಂಸ್ಕೃತಿ, ಅಭಿವೃದ್ಧಿಯನ್ನು ಪರಿಚಯಿಸಿ ಮಕ್ಕಳಲ್ಲಿ ವಿಶಾಲ ಮನೋಭಾವ ಬೆಳೆಸುವುದು ಮತ್ತು ದೇಶದ ಬಗ್ಗೆ ಸ್ಪಷ್ಟ ಕಲ್ಪನೆ ಮೂಡಿಸುವುದು ಈ ಪ್ರವಾಸದ ಉದ್ದೇಶವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry