ಬುಧವಾರ, ಅಕ್ಟೋಬರ್ 23, 2019
27 °C

ಮಣ್ಣಿನ ಫಲವತ್ತತೆ ರಕ್ಷಣೆ ಅಗತ್ಯ

Published:
Updated:

ಮಂಡ್ಯ: ಕೃಷಿಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಮಣ್ಣಿನ ಫಲವತ್ತತೆಯನ್ನು ಕಾಯ್ದುಕೊಳ್ಳುವುದು ಅಗತ್ಯ ಎಂದು ವಿ.ಸಿ.ಫಾರಂನ ಸಹ ವಿಸ್ತರಣಾ ನಿರ್ದೇಶಕ ಡಾ. ಪಿ.ಆರ್. ಕೃಷ್ಣಪ್ರಸಾದ್ ಬುಧವಾರ ಅಭಿಪ್ರಾಯಪಟ್ಟರು.ಇಫ್ರೋ ಸಂಸ್ಥೆ, ಕೃಷಿ ವಿಜ್ಞಾನ ಕೇಂದ್ರ, ಆಕಾಶವಾಣಿ ಇವರ ಸಂಯುಕ್ತಾಶ್ರಯದಲ್ಲಿ ಮಣ್ಣಿನ ಪುನಶ್ಚೇತನ ಕುರಿತು ರೈತರಿಗೆ ತರಬೇತಿ ಹಾಗೂ ಕೃಷಿ ಬಾನುಲಿ ಸರಣಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಸ್ವಾತಂತ್ರ್ಯ ಬಂದ ಮೇಲೆ ಹಸಿರು ಕ್ರಾಂತಿ ಯೋಜನೆಯ ಇಳುವರಿ ಕಾರ್ಯಕ್ರಮದ ಅಡಿಯಲ್ಲಿ ಆಹಾರದ ಸ್ವಾವಲಂಬನೆ ಗುಣಮಟ್ಟದಿಂದ ಅಭಿವದ್ಧಿ ಹೊಂದಲು ಮಣ್ಣಿನ ಫಲವತ್ತತೆ ಕಾರಣ ಎಂದು ತಿಳಿಸಿದರು.ವಾರ್ತಾ ಇಲಾಖೆ ಉಪ ನಿರ್ದೇಶಕ ಪ್ರತಾಪ್, ಇಫ್ರೋ ಸಂಸ್ಥೆ ಡಾ.ಪಾಟೀಲ್ ಮಾತನಾಡಿದರು. ಆಕಾಶವಾಣಿ ಉಪ ನಿರ್ದೇಶಕಿ ಡಾ.ಎಂ.ಎಸ್. ವಿಜಯಾಹರನ್ ಉದ್ಘಾಟಿಸಿದರು. ಕೃಷಿ ವಿ.ವಿ. ಡೀನ್ ಡಾ.ಸಣ್ಣವೀರಪ್ಪನ್ ಅಧ್ಯಕ್ಷತೆ ವಹಿಸಿದ್ದರು. ಅಧಿಕಾರಿಗಳಾದ ಡಾ.ಪಾಂಡುರಂಗೇಗೌಡ, ಬಾಲಚಂದ್ರ, ರಘು, ಕೇಶವಮೂರ್ತಿ ಇದ್ದರು.ಕೌಸ್ತುಭ ಸಂಚಿಕೆ ಬಿಡುಗಡೆ: ನಗರದ ಶ್ರೀ ಲಕ್ಷ್ಮಿ ಜನಾರ್ಧನ ಶಾಲೆಯಲ್ಲಿಂದು ನಡೆದ ವಾರ್ಷಿಕೋತ್ಸವ ಮತ್ತು ಪೋಷಕರ ದಿನಾಚರಣೆ ಸಮಾರಂಭದಲ್ಲಿ ಬುಧವಾರ  ಕೌಸ್ತುಭ ಸಂಚಿಕೆಯನ್ನು ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ. ಸಿದ್ದರಾಜು ಬಿಡುಗಡೆ ಮಾಡಿದರು.ಶಾಲೆಯ ಖಜಾಂಚಿ ವಿದ್ಯಾ ಮನೋಹರ್ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಮಾಜಿ ಅಧ್ಯಕ್ಷ ಎಚ್.ವಿ.ಜಯರಾಂ,  ಶಾಲೆಯ ಉಪಾಧ್ಯಕ್ಷೆ ಕಸ್ತೂರಿ, ಕಾರ್ಯದರ್ಶಿ ಡಾ.ಗೋಪಾಲಕಷ್ಣ ಗುಪ್ತಾ ಸದಸ್ಯರಾದ ಆಶಾ, ಶಕೀಲಾ ಪ್ರಕಾಶ್, ಮಂಜುನಾಥ್ ಇದ್ದರು. ಶಿಕ್ಷಕಿ ಆರ್.ಎಸ್.ವಸಂತಾ ನಿರೂಪಿಸಿದರು. ಶಿಕ್ಷಕಿ ಎಂ.ಕೆ.ಲಲಿತಾ ಸ್ವಾಗತಿಸಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)