ಮಣ್ಣು ಕಿರುಚಿತ್ರಕ್ಕೆ ಚಾಲನೆ

7

ಮಣ್ಣು ಕಿರುಚಿತ್ರಕ್ಕೆ ಚಾಲನೆ

Published:
Updated:

ಭದ್ರಾವತಿ: ಸ್ಥಳೀಯ ಕಲಾವಿದರು ಹಾಗೂ ತಂತ್ರಜ್ಞರ ತಂಡದಿಂದ ನಿರ್ಮಾಣ ಆಗುವ 30 ನಿಮಿಷದ `ಮಣ್ಣು~ ಕಿರುಚಿತ್ರಕ್ಕೆ ಜಿ.ಪಂ. ಸದಸ್ಯೆ ಉಷಾ ವಿ. ಸತೀಶ್‌ಗೌಡ ಈಚೆಗೆ ಚಾಲನೆ ನೀಡಿದರು.ಭೂಮಿ ಕ್ರಿಯೇಷನ್ಸ್ ಲಾಂಛನದಲ್ಲಿ ಸ್ವತಃ ಚಿತ್ರ ನಿರ್ಮಾಣಕ್ಕೆ ಮುಂದಾಗಿರುವ ಉಷಾ ಅವರ ಪ್ರಯತ್ನಕ್ಕೆ ಪತಿ ಕೆ.ವಿ. ಸತೀಶ್‌ಗೌಡ ನಿರ್ಮಾಪಕರಾಗಿ, ಸಹಕರಿಸಿದ್ದು, ಸ್ಥಳೀಯರಾದ ವಿಜಯ್ ಕಥೆ, ಚಿತ್ರಕತೆ, ಸಂಭಾಷಣೆ ಹಾಗೂ ನಿರ್ದೇಶನದ ಉಸ್ತುವಾರಿಕೆ ಹೊತ್ತಿದ್ದಾರೆ.ಡಿಸೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯುವ ರಾಷ್ಟ್ರಮಟ್ಟದ ಕಿರುಚಿತ್ರ ಪ್ರದರ್ಶನ ಸ್ಪರ್ಧೆಯಲ್ಲಿ ಭಾಗವಹಿಸುವ ಇಚ್ಛೆಯಿಂದ `ಮಣ್ಣು~ ಚಿತ್ರಣ ಮಾಡುವ ಇರಾದೆ ಇಟ್ಟುಕೊಳ್ಳಲಾಗಿದೆ ಎಂದು ವಿಜಯ್ ನುಡಿದರು.ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ ಇವೆರಡು ಕಾಲಘಟ್ಟದ ನಡುವೆ ನಡೆಯುವ ಬದುಕಿನ ಕಥನವನ್ನು ಹೊರತರುವ ಪ್ರಯತ್ನವಾಗಿ ಈ ಚಿತ್ರ ಹೊರಹೊಮ್ಮಲಿದೆ ಎಂದು ಚಿತ್ರತಂಡದ ಚಿನ್ನಪ್ಪ ನುಡಿದರು.

ವೇದಿಕೆಯಲ್ಲಿ ಕಲಾವಿಂದ ಅಂಜನಪ್ಪ, ರಾಮಕೃಷ್ಣ, ಕಾ.ರಾ. ನಾಗರಾಜ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry