ಸೋಮವಾರ, ಮೇ 17, 2021
28 °C
ಸಮಯ ಪ್ರಜ್ಞೆ ಮೆರೆದ ಅಗ್ನಿಶಾಮಕ ಸಿಬ್ಬಂದಿಯಿಂದ ಉಳಿದ ಪ್ರಾಣ

ಮಣ್ಣು ಕುಸಿತ: ಕಾರ್ಮಿಕನ ಜೀವರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಒಳಚರಂಡಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕನೊಬ್ಬನ ಮೇಲೆ ಮಣ್ಣು ಕುಸಿದು, ಸಹ ಕಾರ್ಮಿಕರ ಸಮಯ ಪ್ರಜ್ಞೆ ಹಾಗೂ ಹರಸಾಹಸದಿಂದ ತಕ್ಷಣ ಆತನನ್ನು ಮೇಲೆತ್ತಿ ಕಾಪಾಡಿರುವ ಘಟನೆ ಗುರುವಾರ ಸಂಜೆ ನಡೆದಿದೆ.ಕೆಂಪನಹಳ್ಳಿ ರಸ್ತೆಯ ಬದಿಯಲ್ಲಿ ಜೆಸಿಬಿ ಯಂತ್ರ ಮಣ್ಣು ತೆಗೆದು ಮುಂದೆ ಸಾಗುತ್ತಿದ್ದಾಗ ಹಿಂದಿನಿಂದ ಆಂಧ್ರಪ್ರದೇಶ ಮೂಲದ ವ್ಯಕ್ತಿ ನರಸಿಂಹ ಎಂಬಾತ ಪೈಪ್‌ಗಳನ್ನು ಜೋಡಿಸುವ ಕೆಲಸದಲ್ಲಿ ನಿರತವಾಗಿದ್ದ. ಆಕಸ್ಮಿಕವಾಗಿ ಮಣ್ಣು ಆತನ ಮೇಲೆ ಕುಸಿದು ಬಿತ್ತು.ಕೆಲಸದಲ್ಲಿ ನಿರತರಾಗಿದ್ದ ಇತರೆ ಕಾರ್ಮಿಕರು ಬಂದು ನೋಡಿದಾಗ ಮಣ್ಣಿನೊಳಗೆ ಸಿಕ್ಕಿಹಾಕಿಕೊಂಡಿದ್ದ ವ್ಯಕ್ತಿಯ ಕೈ ಮಾತ್ರ ಕಾಣುತ್ತಿದ್ದವು. ಕೂಡಲೇ ಆತನ ಮೇಲೆ ಬಿದ್ದಿದ್ದ ಮಣ್ಣನ್ನು ಗುದ್ದಲಿಯಿಂದ ತೆಗೆಯುವ ಕೆಲಸಕ್ಕೆ ಮುಂದಾದರು. ಜೆಸಿಬಿ ಯಂತ್ರದಿಂದಲೂ ಮಣ್ಣನ್ನು ತೆಗೆಯುವ ಕೆಲಸ ಆರಂಭವಾಯಿತು.ವಿಷಯ ತಿಳಿಯುತ್ತಿದ್ದಂತೆ ಅಲ್ಲಿಗೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ, ಮಣ್ಣಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ವ್ಯಕ್ತಿಯನ್ನು ಮೇಲೆತ್ತಿದರು. ಆತನಿಗೆ ಮುಖದಲ್ಲಿ ತರಚಿದ ಗಾಯಗಳಾಗಿದ್ದವು. ತಕ್ಷಣ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.