ಮಣ್ಣು ಕುಸಿದು ಕಾರ್ಮಿಕರು ಬಲಿ

7

ಮಣ್ಣು ಕುಸಿದು ಕಾರ್ಮಿಕರು ಬಲಿ

Published:
Updated:

ಬಳ್ಳಾರಿ: ಮಣ್ಣಿನ ಗುಡ್ಡೆ ಕುಸಿದು ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಡೂರು ತಾಲ್ಲೂಕಿನ ತೋರಣಗಲ್‌ನ ಜೆಎಸ್‌ಡಬ್ಲ್ಯೂ ಉಕ್ಕಿನ ಕಾರ್ಖಾನೆ ಆವರಣದಲ್ಲಿ ಶನಿವಾರ ಸಂಜೆ ಸಂಭವಿಸಿದೆ.ಮೃತರನ್ನು ಗಾದಿಗನೂರು ಗ್ರಾಮದ ಹುಚ್ಚಪ್ಪ (28) ಹಾಗೂ ರೇವಣಸಿದ್ಧಯ್ಯ (30) ಎಂದು ಗುರುತಿಸಲಾಗಿದೆ. ಟ್ರ್ಯಾಕ್ಟರ್‌ಗೆ ಮಣ್ಣು ತುಂಬುತ್ತಿದ್ದಾಗ ಈ ಘಟನೆ ಸಂಭವಿಸಿದೆ. ತೋರಣಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry