ಭಾನುವಾರ, ಮಾರ್ಚ್ 7, 2021
29 °C

ಮಣ್ಣು ಸಂರಕ್ಷಿಸಿ: ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಣ್ಣು ಸಂರಕ್ಷಿಸಿ: ಸಲಹೆ

ಅರಕಲಗೂಡು: ಮಣ್ಣು ಸಂರಕ್ಷಣೆ ಕುರಿತು ಕೃಷಿಕರು ಎಚ್ಚರ ವಹಿಸದಿದ್ದಲ್ಲಿ ರೈತರ ಜಮೀನುಗಳು ಬರಡು ಭೂಮಿಯಾಗಲಿದೆ. ಈ ಕುರಿತು ಹೆಚ್ಚಿನ ಜಾಗೃತಿ ಅಗತ್ಯ ಎಂದು ಹಾಸನದ ಕಂದಲಿ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ತಜ್ಞ ಡಾ. ಚನ್ನಕೇಶವ ತಿಳಿಸಿದರು.ಪಟ್ಟಣದಲ್ಲಿ ಭಾನುವಾರ ಕೃಷಿ ಉತ್ಸವದಲ್ಲಿ ನಡೆದ  ವಿಚಾರ ಗೋಷ್ಠಿಯಲ್ಲಿ ನಮ್ಮ ಕೃಷಿ ಬದುಕಿನಲ್ಲಿ ಅವಕಾಶಗಳು, ಸಮಗ್ರ ಹಾಗೂ ಸಾವಯವ ಕೃಷಿ ಪದ್ದತಿ ಕುರಿತು ಮಾತನಾಡಿದರು.ಪರಿಸರ ನಾಶ ಹಾಗೂ ಹಿಡಿತವಿಲ್ಲದ ರಸಾಯನಿಕಗಳ ಬಳಕೆ ಮಣ್ಣಿನ ಬರಡುತನಕ್ಕೆ ಮುಖ್ಯ ಕಾಗಣವಾಗಿದೆ. ರಸಾಯನಿಕಗಳ ಬಳಕೆಯನ್ನು ಹಂತ ಹಂತವಾಗಿ ಕಡಿಮೆ ಮಾಡಿ ಸಾವಯವ ಪದ್ದತಿ ಅನುಸರಿಸಿದಾಗ ಮಣ್ಣಿನ ಫಲವತ್ತತೆ ಹೆಚ್ಚಿಸಲು ಸಾಧ್ಯ ಎಂದರು. ಮಣ್ಣು ಪರೀಕ್ಷೆ ಹಾಗೂ ಅದರಿಂದ ದೊರೆಯುವ ಪ್ರಯೋಜನ ಕುರಿತು ಮಾಹಿತಿ ನೀಡಿದರು.ಸಮಗ್ರ ಕೃಷಿ ಕುರಿತು ಪ್ರಗತಿ ಪರ ರೈತ ಬೇಲೂರೇಗೌಡ ಮಾತನಾಡಿದರು. ಸಹಾಯಕ ಕೃಷಿ ನಿರ್ದೇಶಕ ಬಿ.ಓ. ಪರಮೇಶ್‌ ಇಲಾಖೆಯಿಂದ ದೊರೆಯುವ ಸವಲತ್ತುಗಳ ಬಗ್ಗೆ  ಮಾಹಿತಿ ನೀಡಿದರು. ಪ್ರಗತಿ ಪರ ರೈತ ಪಟೇಲ್‌ ರಾಜೇಗೌಡ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.ಹಬ್ಬದ ವಾತಾವರಣ (ಅರಕಲಗೂಡು): ಧರ್ಮಸ್ಥಳ ಗ್ರಾಮಭಿವೃದ್ದಿ ಸಂಸ್ಥೆ ವಿವಿಧ ಇಲಾಖೆ ಸಂಘಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಕೃಷಿ ಉತ್ಸವ ಜನ ಮನ ಸೆಳೆಯಿತಲ್ಲದೆ ಪಟ್ಟಣದಲ್ಲಿ ಹಬ್ಬದ ವಾತಾವರಣ ಮೂಡಿಸಿತ್ತು. ಕ್ರೀಡಾಂಗಣದಲ್ಲಿ ನಡೆದ ಉತ್ಸವದಲ್ಲಿ ತಾಲ್ಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ರೈತರು, ರೈತ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.