ಮಂಗಳವಾರ, ಏಪ್ರಿಲ್ 13, 2021
30 °C

ಮತಗಟ್ಟೆಗಳ ಗಡಿ ಗುರುತಿಸಿದ ಬಿಬಿಎಂಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮತದಾರನ ಗುರುತಿನ ಚೀಟಿ ಸಂಖ್ಯೆ ಸಿಕ್ಕರೆ ಸಾಕು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇನ್ನುಮುಂದೆ ಆತನ ಮನೆ ಮತ್ತು ಬೀದಿಯನ್ನು ಕುಳಿತಲ್ಲೇ ತೋರಿಸಲಿದೆ. ಮತಗಟ್ಟೆಗೆ ಆತ ಹೋಗಬೇಕಾದ ಕೇಂದ್ರದ ದಾರಿಗೂ ಕೈದೀವಿಗೆ ಆಗಲಿದೆ!ಹೌದು, ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ಯಿಂದ ಪಡೆದ ನಕ್ಷೆ ಬಳಸಿಕೊಂಡು ನಗರದ ಎಲ್ಲ 28 ವಿಧಾನಸಭಾ ಕ್ಷೇತ್ರಗಳ ಪ್ರತಿಯೊಂದು ಮತಗಟ್ಟೆಗೆ ಬಿಬಿಎಂಪಿ ನಿರ್ದಿಷ್ಟವಾದ ಗಡಿ ಗುರುತಿಸಿದೆ.

ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಬಿಬಿಎಂಪಿ ಆಯುಕ್ತ ರಜನೀಶ್ ಗೋಯಲ್ ಹೊಸ ವ್ಯವಸ್ಥೆ ಕುರಿತಂತೆ ಮಾಹಿತಿ ನೀಡಿದರು.`ಮತದಾರರ ಗುರುತಿನ ಸಂಖ್ಯೆ ಕೊಟ್ಟರೆ ಸಾಕು, ಅವರ ಮನೆ ಎಲ್ಲಿದೆ, ಯಾವ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಆ ಪ್ರದೇಶ ಒಳಪಡುತ್ತದೆ ಹಾಗೂ ಮತಗಟ್ಟೆ ಕೇಂದ್ರ ಯಾವುದು ಎಂಬ ಎಲ್ಲ ವಿವರವೂ ದೊರೆಯಲಿದೆ~ ಎಂದು ಮಾಹಿತಿ ನೀಡಿದರು.`ಮತದಾರರಿಗೆ ಮತಗಟ್ಟೆ ವಿಳಾಸ ಮತ್ತು ವಿಧಾನಸಭಾ ಕ್ಷೇತ್ರದ ಮಾಹಿತಿ ಪತ್ತೆ ಹೆಚ್ಚುವುದು ಸಮಸ್ಯೆಯಾಗಿತ್ತು. ಮತಗಟ್ಟೆ ಸಿಗದೆ ಮತ ಚಲಾವಣೆ ಮಾಡಲಾಗದ ಉದಾಹರಣೆಗಳೂ ಬೇಕಾದಷ್ಟಿವೆ. ಹೊಸ ವ್ಯವಸ್ಥೆಯಿಂದ ಈ ಎಲ್ಲ ಸಮಸ್ಯೆಗಳು ನೀಗಲಿವೆ~ ಎಂದು ತಿಳಿಸಿದರು.`ಒಂದು ಪ್ರದೇಶದಲ್ಲಿ ವಾಸಿಸುವ ಜನರಿಗೆ ಅದೇ ಭಾಗದ ಮತಗಟ್ಟೆಯಲ್ಲಿ ಮತ ಚಲಾಯಿಸಲು ಅನುಕೂಲ ಆಗುವಂತೆ ಜಿಐಎಸ್ ಆಧರಿಸಿ ಮತದಾರರ ಪಟ್ಟಿಯನ್ನು ಕ್ರಮಬದ್ಧ ಮಾಡಲಾಗಿದೆ. ದೇಶದಲ್ಲೇ ಇಂತಹ ವ್ಯವಸ್ಥೆ ರೂಪಿಸುತ್ತಿರುವ ಮೊದಲ ನಗರ ನಮ್ಮದಾಗಿದೆ~ ಎಂದು ಹೆಮ್ಮೆಯಿಂದ ಹೇಳಿಕೊಂಡರು.`ಮತದಾರರ ಅನುಕ್ರಮ ಪಟ್ಟಿ ಸಿದ್ಧಪಡಿಸುವ ಹಿಂದಿನ ಪದ್ಧತಿಯಲ್ಲಿ ಹಲವು ಕೊರತೆಗಳು ಇದ್ದವು. ಇದರಿಂದ ಅಕ್ಕ-ಪಕ್ಕದ ಜನ ಬೇರೆ, ಬೇರೆ ಮತಗಟ್ಟೆಗೆ ಹೋಗಬೇಕಿತ್ತು. ಹೀಗಾಗಿ ಮತದಾರರ ದ್ವೀಪಗಳು ನಿರ್ಮಾಣ ಆಗುತ್ತಿದ್ದವು. ಹೊಸ ವ್ಯವಸ್ಥೆಯಲ್ಲಿ ಅದನ್ನು ತಪ್ಪಿಸಲಾಗಿದ್ದು, ಆಯಾ ಪ್ರದೇಶದ ಜನ ಒಂದೇ ಮತಗಟ್ಟೆಗೆ ಹೋಗಲಿದ್ದಾರೆ~ ಎಂದು ವಿವರಿಸಿದರು.`ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಆರಂಭಿಸಲಾಗಿದ್ದು, ಡಿಸೆಂಬರ್ 4ರವರೆಗೆ ಈ ಅಭಿಯಾನ ನಡೆಯಲಿದೆ. ಮತದಾರರ ಪಟ್ಟಿಯನ್ನು ಎಲ್ಲ ವಾರ್ಡ್ ಕಚೇರಿಗಳು ಮತ್ತು ಮತದಾರರ ಸುಗಮ ಕೇಂದ್ರಗಳಲ್ಲಿ ಪ್ರಕಟಿಸಲಾಗಿದೆ. ಪಟ್ಟಿಯನ್ನು ಪರಿಶೀಲಿಸಿ, ಆಕ್ಷೇಪಣೆ ಇದ್ದಲ್ಲಿ ಸಲ್ಲಿಸಬೇಕು~ ಎಂದು ಆಯುಕ್ತರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.`ಪಾಲಿಕೆ ಚುನಾವಣಾ ಸಿಬ್ಬಂದಿ ಮನೆ-ಮನೆಗೆ ತೆರಳಿ ಪರಿಶೀಲನೆ ನಡೆಸಲಿದ್ದು, ಅರ್ಹ ಮತದಾರರಿಂದ ಗುರುತಿನ ಚೀಟಿ ಸಿದ್ಧಪಡಿಸಲು ಭಾವಚಿತ್ರ ಪಡೆಯಲಿದ್ದಾರೆ. ದೋಷಗಳನ್ನು ಸರಿಪಡಿಸುವುದಲ್ಲದೆ ಹೊಸ ಮತದಾರರ ಹೆಸರು ಸೇರ್ಪಡೆಗೂ ಈ ಅವಧಿಯಲ್ಲಿ ಅವಕಾಶ ಒದಗಿಸಲಾಗಿದೆ~ ಎಂದು ತಿಳಿಸಿದರು.ಎಸ್‌ಎಂಎಸ್‌ನಲ್ಲಿ ಮಾಹಿತಿ

ಸಾರ್ವಜನಿಕರು ತಮ್ಮ ಗುರುತಿನ ಚೀಟಿ ಸಂಖ್ಯೆಯನ್ನು 9243355223 ಈ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಮಾಡುವ ಮೂಲಕ ಮತದಾರರ ಪಟ್ಟಿಗೆ ಸಂಬಂಧಿಸಿದ ವಿವರವನ್ನು ಪಡೆಯಬಹುದು. ಛಿಜ್ಚಿ ಎಂದು ಟೈಪ್ ಮಾಡಿ ಸ್ಪೇಸ್ ಬಿಟ್ಟು ಗುರುತಿನ ಚೀಟಿ ಸಂಖ್ಯೆ ಹಾಕಿದರೆ ಬೇಕಾದ ಎಲ್ಲ ಮಾಹಿತಿಯೂ ಸಿಗುತ್ತದೆ.ಆನ್‌ಲೈನ್‌ನಲ್ಲಿ ಮತದಾರರ ವಿವರ ಪಡೆಯಲು ceokarnataka.nic.in  ಈ ವೆಬ್‌ಸೈಟ್‌ಗೆ ಸಂದರ್ಶಿಸಬೇಕು. ಆನ್‌ಲೈನ್ ನೋಂದಣಿಗೆ www.voterreg.kar.nic.in ಈ ತಾಣದಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಆಯುಕ್ತರು ತಿಳಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.