ಬುಧವಾರ, ನವೆಂಬರ್ 20, 2019
26 °C

ಮತಗಟ್ಟೆ ಅಧಿಕಾರಿಗಳಿಗೆ ಮತಯಂತ್ರ ಬಳಕೆ ತರಬೇತಿ

Published:
Updated:

ಹಾಸನ: `ಪಿಆರ್‌ಓ ಹಾಗೂ ಎಪಿಆರ್‌ಓಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುವ ಮೂಲಕ ಚುನಾವಣಾ ಪ್ರಕ್ರಿಯೆ ಸುಸೂತ್ರವಾಗಿ ನಡೆಸಲು ಸಹಕರಿಸಬೇಕು' ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೆ.ಪಿ. ಮೋಹನ್ ರಾಜ್ ಸೂಚಿಸಿದರು.ನಗರದ ಸಂತ ಫಿಲೋಮಿನ ಶಾಲೆ ಯಲ್ಲಿ ಬುಧವಾರ ಹಾಸನ ವಿಧಾನ ಸಭಾ ಕ್ಷೇತ್ರದ ಪಿಆರ್‌ಓ ಹಾಗೂ ಎಪಿಆರ್‌ಓ ಗಳಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಚುನಾವಣಾ ಕರ್ತವ್ಯಕ್ಕೆ ನೇಮಿಸಿ ರುವ ಸಿಬ್ಬಂದಿಯ ಪಟ್ಟಿಯನ್ನು ತರ ಬೇತಿ ಕೇಂದ್ರದಲ್ಲಿ ಹಾಗೂ ತಹಶೀಲ್ದಾ ರರ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಬೇಕು. ಮತ ದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆ ಯಾಗಲು ನಮೂನೆ 6 ಮತ್ತು 7ರಲ್ಲಿ ಅರ್ಜಿ ಸಲ್ಲಿ ಸಿರುವವರು ತಮ್ಮ ಹೆಸರು ಮತ ದಾರರ ಪಟ್ಟಿಯಲ್ಲಿರುವುದನ್ನು ಖಾತರಿ ಪಡಿಸಿಕೊಳ್ಳಲು ದೂರವಾಣಿ ಸಂಖ್ಯೆ 1950 ಕರೆ ಮಾಡಬಹುದು ಎಂದರು.ವಿದ್ಯುತ್ ಮತಯಂತ್ರಗಳ ಬಳಕೆ ಬಗ್ಗೆ ಸಿಬ್ಬಂದಿಗೆ ಪ್ರಾಯೋಗಿಕ ತರಬೇತಿ ನೀಡಲಾಯಿತು. 1600 ಸಿಬ್ಬಂದಿಗೆ 32 ಮಾಸ್ಟರ್ ಟ್ರೇನರ್ಸ್‌ ತರಬೇತಿ ನೀಡಲಾಯಿತು.ಚುನಾವಣಾ ವೀಕ್ಷಕ ಭಾರತ್ ಡಿ. ಪಾರ್ಕೆ, ಹಾಸನ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಹೆಚ್.ಸಿ. ಚಿದಾನಂದ್, ಹಾಸನ ತಹಶೀಲ್ದಾರ ಹಾಗೂ ಸಹಾಯಕ ಚುನಾವಣಾಧಿ ಕಾರಿ ಮಂಜುನಾಥ್, ಪೋಸ್ಟಲ್ ಬ್ಯಾಲೆಟ್ ನೋಡಲ್ ಅಧಿಕಾರಿ ಪುಟ್ಟಸ್ವಾಮಿ, ಪರಪ್ಪಸ್ವಾಮಿ ಇದ್ದರು.ಚನ್ನರಾಯಪಟ್ಟಣ ವರದಿ:  ವಿಧಾನ ಸಭೆ ಚುನಾವಣೆಗೆ ನಿಯೋಜಿತರಾಗಿರುವ ಮತಗಟ್ಟೆ ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಬುಧವಾರ ತರಬೇತಿ ನೀಡಲಾಯಿತು.ಉಪ ವಿಭಾಗಾಧಿಕಾರಿ ಪ್ರಕಾಶ್ ಜಿ.ರಜಪೂತ್, ಚುನಾವಣಾಧಿಕಾರಿ ಡಾ.ಜಿ.ಸುರೇಶ್, ಸಹಾಯಕ ಚುನಾವಣಾಧಿಕಾರಿ ಪಿ.ಜಿ.ನಟರಾಜ್ ಮತಗಟ್ಟೆ ಅಧಿಕಾರಿಗಳಿಗೆ ಅಗತ್ಯ ಮಾಹಿತಿ ನೀಡಿದರು.ಒಟ್ಟು 584 ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ಇವರೆಲ್ಲರು ಜಿಲ್ಲೆಯ ಬೇರೆ ಬೇರೆ ತಾಲ್ಲೂಕಿಗೆ ನಿಯೋಜಿತರಾಗಿದ್ದಾರೆ. ಅಂಚೆ ಮತ ಚಲಾಯಿಸಲು ಅವಕಾಶ ನೀಡಲಾಯಿತು. ಒಟ್ಟು 254 ಮಂದಿ ಮತ ಚಲಾಯಿಸಿದರು. ಮುಂದಿನ ತರಬೇತಿ ಏಪ್ರಿಲ್ 27 ರಂದು ಪಟ್ಟಣದ ನವೋದಯ ಪದವಿ ಪೂರ್ವ ಕಾಲೇಜಿನಲ್ಲಿ  ನಡೆಯಲಿದ್ದು. ಬೇರೆ ತಾಲ್ಲೂಕಿನಿಂದ ಆಗಮಿಸುವ ಅಧಿಕಾರಿಗಳಿಗೆ ತರಬೇತಿ ನೀಡಲಾಗುವುದು ಎಂದು ಸಹಾಯಕ ಚುನಾವಣಾಧಿಕಾರಿ ನಟರಾಜ್ ತಿಳಿಸಿದರು.ಬೇಲೂರು ವರದಿ: ಕ್ಷೇತ್ರದ ಮತಗಟ್ಟೆ ಅಧಿಕಾರಿ ಮತ್ತು ಸಹಾಯಕ ಮತ ಗಟ್ಟೆ ಅಧಿಕಾರಿಗಳಿಗೆ ಬುಧವಾರ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತರಬೇತಿ ನಡೆಯಿತು ಎಂದು ಚುನಾವಣಾಧಿಕಾರಿ ಇಲಿಯಾಸ್ ಉಲ್ಲಾ ಷರೀಫ್ ತಿಳಿಸಿದರು.ತರಬೇತಿಯಲ್ಲಿ ಪಾಲ್ಗೊಂಡಿದ್ದ ಸಿಬ್ಬಂದಿಗಳಿಗೆ ಅಭ್ಯರ್ಥಿಗಳ ಸಮ್ಮುಖ ದಲ್ಲಿ ಅಂಚೆ ಮತಪತ್ರಗಳನ್ನು ವಿತರಿಸ ಲಾಯಿತು. ಕೆಲ ಚುನಾವಣಾ ಸಿಬ್ಬಂದಿ ಬುಧವಾರವೇ ಮತವನ್ನು ಚಲಾಯಿಸಿ ಮತಪೆಟ್ಟಿಗೆಗೆ ಹಾಕಿದ್ದಾರೆ. ಚುನಾವಣಾಧಿಕಾರಿ ಕಚೇರಿಯಲ್ಲಿರುವ ಮತಪೆಟ್ಟಿಗೆಯಲ್ಲಿ ಮೇ 3 ರವರೆಗೆ ಅಂಚೆ ಮತ ಚಲಾವ ಣೆಗೆ ಅವಕಾಶ ನೀಡಲಾಗಿದೆ ಎಂದರು.

ಪ್ರತಿಕ್ರಿಯಿಸಿ (+)