ಮಂಗಳವಾರ, ಆಗಸ್ಟ್ 20, 2019
21 °C

ಮತಗಳಿಗಾಗಿ ಮತಿಗೆಡುವುದೇ?

Published:
Updated:

ಕಾಂಗ್ರೆಸ್ ಪಕ್ಷದ ರಾಜ್‌ಬಬ್ಬರ್ ಮತ್ತು ರಶೀದ್ ಮಸೂದ್ ಎಂಬ ಮಹಿಮಾನ್ವಿತರು ಈ ದೇಶದಲ್ಲಿ ಹೊಟ್ಟೆತುಂಬ ಊಟ ಮಾಡಲು ಹೆಚ್ಚು ಹಣ ಬೇಕಿಲ್ಲ ಎಂದು ಬಡಬಡಿಸಿದರಷ್ಟೇ ಅಲ್ಲ, ಅದನ್ನವರು ಸಮರ್ಥಿಸಿಕೊಳ್ಳಲೂ ಸಂಕೋಚ ಪಡಲಿಲ್ಲ.ರಾಜ್‌ಬಬ್ಬರ್ ಪ್ರಕಾರ ಮುಂಬೈನಲ್ಲಿ  ರೂ 12ಕ್ಕೆ ಊಟ ಸಿಗುತ್ತದಾದರೆ, ರಶೀದ್ ಮಸೂದ್ ಪ್ರಕಾರ ದೆಹಲಿಯಲ್ಲಿ ಕೇವಲ ರೂ 5 ಕೊಟ್ಟರೆ ಪುಷ್ಕಳವಾಗಿ ಹೊಟ್ಟೆ ತುಂಬಿಸಿಕೊಳ್ಳಬಹುದಂತೆ! ದೇಶದಲ್ಲಿ ಬಡತನವು ಏಳು ವರ್ಷಗಳಲ್ಲಿ ಶೇ 16 ರಷ್ಟು ಇಳಿದಿದೆ ಎಂದಿತು ಕೇಂದ್ರ ಯೋಜನಾ ಆಯೋಗ. ಎಂತಹ ಮಹತ್ಸಾಧನೆ ಯೋಜನಾ ಆಯೋಗದ್ದು! ಸರ್ಕಾರದ್ದಲ್ಲ!!ಚುನಾವಣೆ ಹತ್ತಿರವಾಗಿರುವ ವೇಳೆಯಲ್ಲಿ, `ಬಡತನ ಕಡಿಮೆಯಾಗಿದೆ' ಎಂದು ಕಾಗದದ ಮೇಲೆ ಕಾಣಿಸಿದರೆ ಜನತೆ ಮೆಚ್ಚಿಬಿಡುತ್ತದೆಂಬ ಹುಂಬ ನಂಬಿಕೆ ಹೊಂದಿರುವಂತಿದೆ ಯುಪಿಎ. ಎಂದೇ ರಾಜಬಬ್ಬರ್, ರಶೀದ್ ಮಸೂದ್ ಮತ್ತು ನ್ಯಾಷನಲ್  ಕಾನ್ಫರೆನ್ಸಿನ ಫಾರೂಕ್ ಅಬ್ದುಲ್ಲಾ, `ಈ ದೇಶದಲ್ಲಿ ಹೊಟ್ಟೆ ತುಂಬಿಸಿಕೊಳ್ಳಲು ಹೆಚ್ಚು ಖರ್ಚು ಮಾಡುವ ಅಗತ್ಯವಿಲ್ಲ, ಎಲ್ಲ ಪದಾರ್ಥಗಳೂ ಸೋವಿಯಾಗಿವೆ' ಎಂಬರ್ಥದ ಅಸಂಬದ್ಧ ಮಾತುಗಳನ್ನು ನಿರ್ಭಿಡೆಯಿಂದ ಆಡುತ್ತಿದ್ದಾರೆ. ಮತ ಗಿಟ್ಟಿಸಲು ಹೀಗೆ ಮತಿಗೆಡಬೇಕೆ?

Post Comments (+)