ಮಂಗಳವಾರ, ನವೆಂಬರ್ 19, 2019
27 °C

ಮತದಾನಕ್ಕೆ 23 ಗುರುತು ದಾಖಲೆ

Published:
Updated:

ಗದಗ: ಮೇ 5 ರಂದು ನಡೆಯುವ  ಚುನಾವಣೆಯಲ್ಲಿ ಮತದಾರರು ಭಾವಚಿತ್ರವಿರುವ ಗುರುತಿನ ಚೀಟಿಯನ್ನು ತೋರಿಸಿ ಮತಚಲಾಯಿಸಬೇಕು. ಮತದಾರರ ಪಟ್ಟಿಯಲ್ಲಿ ಹೆಸರಿದ್ದು ಗುರುತಿನ ಚೀಟಿ ಹೊಂದದಿರುವ ಮತದಾರರು ಆಯೋಗ ನಿಗದಿಪಡಿಸಿದ ಪರ್ಯಾಯ ಗುರುತು ಪತ್ರಗಳನ್ನು ಹಾಜರುಪಡಿಸಿ ಮತಚಲಾಯಿಸಬಹುದಾಗಿದೆ ಎಂದು ರಾಜ್ಯ ಚುನಾವಣಾ ಆಯೋಗ  ಪ್ರಕಟಣೆಯಲ್ಲಿ ತಿಳಿಸಿದೆ.

      

ಮತದಾರರ ಭಾವಚಿತ್ರ ಗುರುತಿನ ಚೀಟಿ ಹೊಂದಿರದೇ ಇರುವ ಮತದಾರರು ಅಥವಾ ಅಂತಹ ಕಾರ್ಡನ್ನು ಕಳೆದುಕೊಂಡಿರುವವರು ಈ ಕೆಳಗೆ ಸೂಚಿಸಿರುವ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಮತಗಟ್ಟೆಯಲ್ಲಿ ತೋರಿಸಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಗುರುತುಪತ್ರಗಳ ವಿವರ: ಅಧಿಕೃತ ಮತದಾರರ ಭಾವಚಿತ್ರ ಸಹಿತ ಗುರುತಿನ ಚೀಟಿ,  ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್ , ಆದಾಯ ತೆರಿಗೆ ಗುರುತಿನ ಚೀಟಿ (ಪಾನ್ ಕಾರ್ಡ್) ರಾಜ್ಯ, ಕೇಂದ್ರ ಸರ್ಕಾರ ಹಾಗೂ ಸಾರ್ವಜನಿಕ ಉದ್ಯಮಗಳು , ಸ್ಥಳೀಯ ಸಂಸ್ಥೆಗಳು ಅಥವಾ ಇತರೇ ಖಾಸಗಿ ಔದ್ಯಮಿಕ ಸಂಸ್ಥೆಗಳು ಅವರ ಕೆಲಸಗಾರರಿಗೆ ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು, ಸಾರ್ವಜನಿಕ ಔದ್ಯಮಿಕ ಬ್ಯಾಂಕ್ ಕಿಸಾನ್,  ಪೋಸ್ಟ್ ಆಫೀಸ್ ಭಾವಚಿತ್ರವಿ ರುವ ಪಾಸ್ ಪುಸ್ತಕ,  ಮಾನ್ಯತೆ ಪಡೆದ ನೋಂದಾಯಿತ ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳಿಗೆ ಕೊಟ್ಟಿರುವ ಗುರುತಿನ ಚೀಟಿಗಳು , ಭಾವಚಿತ್ರವಿರುವ ನೊಂದಾಯಿತ ಡೀಡ್‌ಗಳು, ಪಟ್ಟಾಗಳು  ಮುಂತಾದ ಆಸ್ತಿ ದಾಖಲೆಗಳು ಭಾವಚಿತ್ರವಿರುವ ಪಡಿತರ ಚೀಟಿಗಳು, ಸಕ್ಷಮ ಪ್ರಾಧಿಕಾರ ನೀಡಿರುವ  ಎಸ್‌ಸಿ, ಎಸ್‌ಟಿ, ಓಬಿಸಿ  ಭಾವಚಿತ್ರವಿರುವ ಪ್ರಮಾಣ ಪತ್ರಗಳು, ಭಾವಚಿತ್ರವಿರುವ ಪ್ರಮಾಣ ಪಿಂಚಣಿ ಪಾವತಿ ಆದೇಶಗಳು ಅಥವಾ ಮಾಜಿ ಯೋಧರ  ಪಿಂಚಣಿ ಪುಸ್ತಕ, ಪಿಂಚಣಿ ಸಂದಾಯ ಆದೇಶಗಳಂತಹ ಪಿಂಚಣಿ ದಾಖಲೆಗಳು, ವೃದ್ಧಾಪ್ಯ ವೇತನ ಆದೇಶಗಳು ವಿಧವಾ ವೇತನ ಆದೇಶಗಳು, ಸ್ವಾತಂತ್ರ್ಯ ಯೋಧರ ಗುರುತಿನ ಚೀಟಿಗಳು, ಭಾವಚಿತ್ರವಿರುವ ಶಸ್ತ್ರಪರ ವಾನಗಿ, ಅಂಗವಿಕಲರಿಗೆ ಸಕ್ಷಮ ಪ್ರಾಧಿಕಾರ ನೀಡಿ ರುವ ಭಾವಚಿತ್ರವಿರುವ ಚೀಟಿಗಳು, ಮಾಜಿ ಯೋಧರ ಭಾವಚಿತ್ರವಿರುವ ಸಿ.ಎಸ್.ಡಿ  ಕ್ಯಾಂಟಿನ್ ಕಾರ್ಡ್, ಮಾ. 31 ರ ವರೆಗೆ ನೀಡಿರುವ ಸಂಧ್ಯಾ ಸುರಕ್ಷಾ ಯೋಜನೆಯ ಭಾವಚಿತ್ರವಿರುವ ಗುರುತಿನ ಚೀಟಿ , ಮಾ. 31ರ ರವರೆಗೆ ನೀಡಿರುವ ಎನ್.ಆರ್. ಇ.ಜಿ     (ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ) ಯೋಜನೆಯ ಅಡಿಯಲ್ಲಿ ನೀಡಿರುವ ಭಾವಚಿತ್ರ ವಿರುವ ಯಶಸ್ವಿನಿ ಕಾರ್ಡ, ಮುನಿಸಿಪಲ್ ಕಾರ್ಪೋ ರೆಷನ್, ಸಿ.ಎಂ.ಸಿ, ಟಿ.ಎಂ.ಸಿ ಇತ್ಯಾದಿ ಸ್ಥಳೀಯ ಸಂಸ್ಥೆಗಳು ನೌಕರರು ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು , ಸರ್ಕಾರಿ ಇಲಾಖೆ ನೀಡಿರುವ ಭಾವಚಿತ್ರವಿರುವ ಹಿರಿಯ ನಾಗರಿಕರ ಗುರುತಿನ ಚೀಟಿ, ಕಾರ್ಮಿಕ ಕಲ್ಯಾಣ ಮಂತ್ರಾಲಯ ನೀಡಿದ ಭಾವಚಿತ್ರ ಸಹಿತ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್, ಎನ್.ಪಿ.ಆರ್ ಯೋಜನೆಯಡಿಯಲ್ಲಿ ನೀಡಲಾದ  ಗುರುತು ಪತ್ರ ಮತ್ತು ಆಧಾರ ಗುರುತಿನ ಚೀಟಿ.

ಪ್ರತಿಕ್ರಿಯಿಸಿ (+)