ಗುರುವಾರ , ಜೂನ್ 24, 2021
24 °C

ಮತದಾನ ಅವಧಿ 2 ಗಂಟೆ ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಚುನಾವಣಾ ಪ್ರಕ್ರಿಯೆಯಲ್ಲಿ ಮತ­ದಾರರ ಭಾಗ­ವಹಿ­ಸುವಿಕೆಯನ್ನು ಇನ್ನಷ್ಟು ಹೆಚ್ಚಿ­ಸುವ ಉದ್ದೇಶ­ದಿಂದ ಚುನಾವಣಾ ಆಯೋಗವು  ಲೋಕಸಭಾ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಮತ­ದಾನದ ಅವಧಿಯನ್ನು ಎರಡು ಗಂಟೆ ವಿಸ್ತರಿಸಿದೆ.ಗುಡ್ಡಗಾಡು ಪ್ರದೇಶದವರೂ ಸೇರಿ­ದಂತೆ ಎಲ್ಲಾ ಮತದಾರರು ಇನ್ನು ಮುಂದೆ  ಬೆಳಿಗ್ಗೆ ಏಳು ಗಂಟೆಯಿಂದ ಸಾಯಂಕಾಲ ಆರು ಗಂಟೆಯವರೆಗೆ ಮತ್ತು ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ಬೆಳಿಗ್ಗೆ ಏಳರಿಂದ ನಾಲ್ಕು ಗಂಟೆವರೆಗೆ ಮತದಾನ ಮಾಡಬಹುದಾಗಿದೆ.ಈ ಮೊದಲು, ಬೆಳಿಗ್ಗೆ ಎಂಟು ಗಂಟೆಯಿಂದ ಸಂಜೆ 5ರವರೆಗೆ ಮತದಾನ ಮಾಡಬಹುದಿತ್ತು. ಈಶಾನ್ಯ ರಾಜ್ಯಗಳಲ್ಲಿ ಬೆಳಿಗ್ಗೆ ಏಳಕ್ಕೆ ಮತದಾನ ಆರಂಭವಾಗುತ್ತಿತ್ತು.ಸದ್ಯ ಮತದಾನದ ಅವಧಿ ಒಟ್ಟು 9ಗಂಟೆ ಇದೆ. ಈಗ ಅದನ್ನು ಚುನಾವಣಾ ಆಯೋಗವು 11 ಗಂಟೆಗಳವರೆಗೆ ವಿಸ್ತರಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.