ಬುಧವಾರ, ನವೆಂಬರ್ 20, 2019
25 °C

ಮತದಾನ ಜಾಗೃತಿಗೆ ಬೀದಿ ನಾಟಕ ಪ್ರದರ್ಶನ

Published:
Updated:

ಮಡಿಕೇರಿ: ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಹಾಗೂ ಮತದಾನದ ಹಕ್ಕಿನ ಮಹತ್ವ ಕುರಿತು ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಜಿಲ್ಲಾ ಸಮಿತಿ ವತಿಯಿಂದ ವಿರಾಜಪೇಟೆ, ಗೋಣಿಕೊಪ್ಪ, ಪಾಲಿಬೆಟ್ಟದಲ್ಲಿ ಗುರುವಾರ ಬೀದಿನಾಟಕ ಮೂಲಕ ಮತದಾರರ ಜಾಗೃತಿ ಅಭಿಯಾನ ನಡೆಯಿತು.ಚುನಾವಣಾ ಆಯೋಗದ ಸಂದೇಶ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಅಗತ್ಯ ಎಂಬ ಹಾಡಿನ ಜೊತೆಗೆ ನಾಟಕ ಮಾಡುವ ಮೂಲಕ ಕುಶಾಲನಗರದ ಕೊಡಗು ವಿದ್ಯಾ ಸಾಗರ ಕಲಾವೇದಿಕೆಯ ರಾಜು ಮತ್ತು ತಂಡದವರು ಮತದಾರರಲ್ಲಿ ಅರಿವು ಮೂಡಿಸಿದರು.`ಮತದಾನ ಸಂವಿಧಾನತ್ಮಕ ಹಕ್ಕಾಗಿದ್ದು, ತಪ್ಪದೇ ಮತ ಚಲಾಯಿಸಿ ಪ್ರಜಾಪ್ರಭುತ್ವದ ಬಲವರ್ಧನೆಗೆ ಕಡ್ಡಾಯವಾಗಿ ಮತದಾನ ಮಾಡಿ, ಮತದಾನ ಸಂವಿಧಾನ್ಮಕ ಹಕ್ಕಾಗಿದ್ದು ತಪ್ಪದೇ ಚಲಾಯಿಸಿ, ನಿಮ್ಮ ಮತ ನಿಮ್ಮ ಹಕ್ಕು, ಜಾಗೃತ ಮತದಾರ- ಸದೃಢ ಪ್ರಜಾಪ್ರಭುತ್ವ, ಮತದಾನ ಮಾಡುವುದು ಪ್ರತಿ ಮತದಾರರ ಹಕ್ಕು ಮತ್ತು ಆದ್ಯ ಕರ್ತವ್ಯ, ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತ ಚುನಾವಣೆಗೆ ಸಹಕರಿಸಿ, ಚುನಾವಣೆ ಪ್ರಜಾಪ್ರಭುತ್ವದ ಭದ್ರ ಬುನಾದಿ, ಯಾವುದೇ ಆಸೆ ಆಮಿಷಗಳಿಗೆ ತುತ್ತಾಗದೆ ನಿರ್ಭೀತಿಯಿಂದ ಮತ ಚಲಾಯಿಸಿ, ಮತದಾರರ ಪಟ್ಟಿಯಲ್ಲಿ ಹೆಸರಿರುವುದನ್ನು ಖಚಿತ ಪಡಿಸಿಕೊಳ್ಳಿ.

2013ರ ಜನವರಿ 1 ಕ್ಕೆ 18 ವರ್ಷ ತುಂಬಿದವರೆಲ್ಲ ಮತದಾರರಪಟ್ಟಿಗೆ ಹೆಸರು ಸೇರ್ಪಡೆ ಮಾಡಿಸಿ, ಚುನಾವಣಾ ಗುರುತಿನ ಚೀಟಿ ಇದ್ದರೂ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಮತದಾನಕ್ಕೆ ಅವಕಾಶವಿಲ್ಲ. ಇನ್ನೇಕೆ ತಡ ಇಂದೇ ಹೆಸರು ನೋಂದಣಿ ಮಾಡಿಸಿ..' ಎಂಬ ಸಂದೇಶಗಳನ್ನು ಬೀದಿ ನಾಟಕ ಮೂಲಕ ಸಾರಿದರು.ಮತದಾರರ ಪಟ್ಟಿ ಪರಿಶೀಲನೆ

ಮಡಿಕೇರಿ:
ಮಡಿಕೇರಿ ತಾಲ್ಲೂಕಿನಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತಿದ್ದುಪಡಿ  ಸಂಬಂಧಿಸಿದಂತೆ ಸ್ವೀಕೃತವಾಗಿರುವ ಅರ್ಜಿಗಳ (ಚೆಕ್‌ಲಿಸ್ಟ್) ಪರಿಶೀಲನಾ ಕಾರ್ಯವು ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಡೆಯಿತು.ತಹಶೀಲ್ದಾರರಾದ ವಾಸುದೇವಾಚಾರ್ಯ, ಚುನಾವಣಾ ಶಿರಸ್ತೆದಾರ್ ಕೃಷ್ಣಮೂರ್ತಿ ಮತ್ತಿತರರ ಸಮ್ಮುಖದಲ್ಲಿ ಸುಮಾರು 140 ಬ್ಲಾಕ್ ಮಟ್ಟದ ಅಧಿಕಾರಿಗಳಿಂದ ಚೆಕ್‌ಲಿಸ್ಟ್‌ಗಳ ಪರಿಶೀಲನಾ ಕಾರ್ಯ ನಡೆಯಿತು.2013ರ ಜನವರಿ 1 ಕ್ಕೆ 18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಯಾರಾದಾರೂ ನಿಧನ ಹೊಂದಿದಲ್ಲಿ ತೆಗೆದು ಹಾಕುವುದು, ತಿದ್ದುಪಡಿ ಮತ್ತಿತರ ಸಂಬಂಧಿಸಿದಂತೆ ಅರ್ಜಿಗಳ ಪರಿಶೀಲನಾ ಕಾರ್ಯ ನಡೆಯಿತು.ಬಿಜೆಪಿ ಕಾರ್ಯಾಲಯ ಉದ್ಘಾಟನೆ 

ನಾಪೋಕ್ಲು:
ಭಾರತೀಯ ಜನತಾ ಪಕ್ಷದ ಕಾರ್ಯಾಲಯದ ಉದ್ಘಾಟನೆ ಕಾರ್ಯಕ್ರಮ ಪಟ್ಟಣದಲ್ಲಿ ಗುರುವಾರ ನಡೆಯಿತು.

ಸಮೀಪದ ಮೂರ್ನಾಡಿನ ಮುದ್ದು ಕಾಂಪೆಕ್ಸ್‌ನಲ್ಲಿರುವ ಭಾರತೀಯ ಜನತಾ ಪಕ್ಷದ ಕಾರ್ಯಾಲಯವನ್ನು ಮೂರ್ನಾಡು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ಬಡುವಂಡ ಅರುಣ್ ಅಪ್ಪಚ್ಚು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಬಿ.ಕೆ. ಪೂವಪ್ಪ, ಕಾರ್ಯದರ್ಶಿ ಕೊಂಪುಳೀರ ಲುಶ್ವಪತಿ, ಮುಕ್ಕಾಟೀರ ರವಿ ಚೀಯಣ್ಣ, ಚೆಟ್ಟಿಮಾಡ ಬಾಲಕಷ್ಣ, ಬಡುವಂಡ ಬೆಲ್ಲು ಚಿಣ್ಣಪ್ಪ, ಮಜೀದ್ ಉಪ್ಪಿ, ಶೇಕ್ ಅಹಮ್ಮದ್, ಮೂಡೇರ ಅಶೋಕ್, ಚೇನಂಡ ಅಯ್ಯಣ್ಣ ಹಾಗೂ ಇನ್ನಿತರ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.

ಪ್ರತಿಕ್ರಿಯಿಸಿ (+)