ಗುರುವಾರ , ಜೂನ್ 24, 2021
24 °C

ಮತದಾನ ಜಾಗೃತಿ ಯಾತ್ರೆಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿಂಗಸುಗೂರು: ಪ್ರಸ್ತುತ ಲೋಕಸಭಾ ಚುನಾವಣೆ­ಯಲ್ಲಿ ಪ್ರತಿಶತ ನೂರಕ್ಕೆ ನೂರರಷ್ಟು ಮತದಾನ ಮಾಡಿಸುವ ಉದ್ದೇಶದಿಂದ ಜನತೆಯಲ್ಲಿ ಜಾಗೃತಿ ಮೂಡಿಸಲು ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಹಮ್ಮಿಕೊಂಡಿ­ರುವ ಮತದಾನ ಜಾಗೃತ ಜ್ಯೋತಿ ಯಾತ್ರೆಗೆ ಉಪ ವಿಭಾಗಾಧಿಕಾರಿ ಟಿ. ಯೋಗೇಶ ಚಾಲನೆ ನೀಡಿದರು.ಶುಕ್ರವಾರ ಸ್ಥಳೀಯ ಶಾಸಕರ ಶಾಲೆಯಲ್ಲಿ ಆಯೋಜಿಸಿದ್ದ ಯಾತ್ರೆ ಉದ್ಘಾಟನೆ ನೆರವೇರಿಸಿ ಮಾತನಾಡಿ, ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಸರ್ವರು ಪಾಲ್ಗೊಳ್ಳುವಿಕೆ ಪ್ರಜಾತಂತ್ರ ವ್ಯವಸ್ಥೆಯನ್ನು ಗಟ್ಟಿಗೊಳಿಸುತ್ತದೆ. ಅಂಥ ವ್ಯವಸ್ಥೆ ಬಲಗೊಳಿಸಲು ಪ್ರತಿಯೊಬ್ಬರು ಮತದಾರ ಮತದಾನ ಮಾಡುವುದು ಕಡ್ಡಾಯವಾಗಬೇಕು ಎಂದರು.ಪವಿತ್ರವಾದ ಮತ ಚಲಾಯಿಸಲು ನಿರ್ಭಯದಿಂದ ಮತಗಟ್ಟೆಗೆ ಬರಬೇಕು. ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗಿ ಮತದಾನ ಹಕ್ಕು ಕಳೆದುಕೊಳ್ಳಬೇಡಿ. ವಿದ್ಯುನ್ಮಾನ ಮತ­ಯಂತ್ರ ಮೂಲಕ ಮತ ಚಲಾಯಿಸುವ ಬಗ್ಗೆ ಜಾಗೃತಗೊಳಿಸುವಂತೆ ವಿವಿಧ ಇಲಾಖೆ ಅಧಿಕಾರಿಗಳು, ಯುವಕರಲ್ಲಿ ಮನವಿ ಮಾಡಿದರು.ಪೊಲೀಸ್‌ ಉಪ ವಿಭಾಗಾಧಿಕಾರಿ ಅನಿತಾ ಹದ್ದಣ್ಣವರ. ತಹಶೀಲ್ದಾರ ಜಿ.ಎಸ್‌. ಮಹಾಜನ. ಕ್ಷೇತ್ರ ಶಿಕ್ಷಣಾ­ಧಿಕಾರಿ ಶಾಂತಗೌಡ ಪಾಟೀಲ. ತಾಲ್ಲೂಕು ಪಂಚಾಯಿತಿ ಕಾರ್ಯ­ನಿರ್ವಾಹಕ ಅಧಿಕಾರಿ ಶರಣಬಸವ, ಪುರಸಭೆ ಮುಖ್ಯಾಧಿಕಾರಿ ಈರಣ್ಣ ಬಿರಾದರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.