ಬುಧವಾರ, ನವೆಂಬರ್ 20, 2019
20 °C

ಮತದಾನ ಜಾಗೃತಿ ವೆುರವಣಿಗೆ

Published:
Updated:

ಸಾಗರ: ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು ನಾಗರಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಲ್ಲಿನ ವಕೀಲರ ಸಂಘದ ಸದಸ್ಯರು ಗುರುವಾರ ನಗರದ ಪ್ರಮುಖಬೀದಿಗಳಲ್ಲಿ ಮೆರವಣಿಗೆ ನಡೆಸಿದರು.ಹಣ, ಹೆಂಡ ಮೊದಲಾದ ಆಮಿಷಗಳಿಗೆ ಬಲಿಯಾಗಬೇಡಿ, ಜಾತಿ ನೋಡಿ ಮತ ಚಲಾಯಿಸಬೇಡಿ, ಅರ್ಹ ಮತ್ತು ಯೋಗ್ಯ ಅಭ್ಯರ್ಥಿಯನ್ನು ಗುರುತಿಸಿ ಮತ ಹಾಕಿ, ಮತದಾನ ಅತ್ಯಂತ ಪವಿತ್ರ ಕಾರ್ಯ ಎಂಬ ಘೋಷಣಾ ಫಲಕಗಳನ್ನು ಹಿಡಿದು ವಕೀಲರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.ವಕೀಲರ ಸಂಘದ ಅಧ್ಯಕ್ಷ ಎಚ್.ಕೆ. ಅಣ್ಣಪ್ಪ, ಕಾರ್ಯದರ್ಶಿ ರವೀಶ್‌ಕುಮಾರ್, ಖಜಾಂಚಿ ಪ್ರೇಮ್‌ಸಿಂಗ್, ಕೆ.ಎಚ್. ಸುದರ್ಶನ್, ಕೆ.ಜಿ. ರಾಘವೇಂದ್ರ, ಉಲ್ಲಾಸ್, ವಿನಯಕುಮಾರ್ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)