ಮತದಾನ: ಪದವೀಧರರ ಅಸಡ್ಡೆ
ಜೂನ್ 10 ರಂದು ವಿಧಾನ ಪರಿಷತ್ಗಾಗಿ ಪದವೀಧರ ಕ್ಷೇತ್ರದಿಂದ ನಡೆದ ಚುನಾವಣೆಯಲ್ಲಿ ಅಭ್ಯರ್ಥಿಯ ಪರವಾಗಿ ಮಲ್ಲೇಶ್ವರದ ಮತಗಟ್ಟೆಯೊಂದರಲ್ಲಿ ಏಜೆಂಟ್ ಆಗಿ ಕಾರ್ಯನಿರ್ವಹಿಸಿದೆ. ಸುಮಾರು 1000 ಮತಗಳನ್ನು ಹೊಂದಿದ್ದ ಆ ಬೂತ್ನಲ್ಲಿ ಮತದಾನವಾಗಿದ್ದು ಕೇವಲ 140 ಮತಗಳು ಮಾತ್ರ!
ಇಷ್ಟು ಮತಗಳಿಗಾಗಿ, ಚುನಾವಣಾ ಸಿಬ್ಬಂದಿ 5 ಜನ, ಅಭ್ಯರ್ಥಿಗಳ ಪರವಾಗಿ 8 ಜನ, ಪೊಲೀಸ್, ವಿಡಿಯೊ ಸಿಬ್ಬಂದಿ ಇಷ್ಟು ಜನ. ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಶ್ರಮಿಸಬೇಕಾಯಿತು.
ಈ ಕೆಲವೇ, ಮತದಾರರಲ್ಲಿ ಬಹುತೇಕ ವೃದ್ಧರು ಬಂದು ಮತ ಚಲಾಯಿಸಿದ್ದು ಒಂದು ನೆಮ್ಮದಿ. ಇನ್ನು ಮತದಾರರ ಪಟ್ಟಿ ತಯಾರಿಕೆಯಲ್ಲಿ ಇಷ್ಟು ವರ್ಷಗಳಾದರೂ ಸುಧಾರಣೆ ಕಾಣದಿರುವುದು ಇನ್ನೊಂದು ವಿಪರ್ಯಾಸ.
-
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.