ಮತದಾನ ಪ್ರತಿಯೊಬ್ಬರ ಸಂವಿಧಾನಬದ್ಧ ಹಕ್ಕು

7

ಮತದಾನ ಪ್ರತಿಯೊಬ್ಬರ ಸಂವಿಧಾನಬದ್ಧ ಹಕ್ಕು

Published:
Updated:

ಲಿಂಗಸುಗೂರ: ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆ ಸಬಲೀಕರಣಕ್ಕೆ ಜನರಿಂದ ಆಯ್ಕೆಗೊಂಡ ಮಂಡಳಿ ಅಸ್ಥಿತ್ವಕ್ಕೆ ತರಲಾಗುತ್ತದೆ. ಅಂತೆಯೆ ಚುನಾವಣಾ ಆಯೋಗ ಪ್ರತಿನಿಧಿಗಳ ಆಯ್ಕೆಗೆ ಸಂಬಂಧಿಸಿ ಪ್ರಕ್ರಿಯೆ ನಡೆಸುತ್ತದೆ.ಪ್ರಜಾತಂತ್ರ ಆಡಳಿತ ವ್ಯವಸ್ಥೆಗೆ ಆಯ್ಕೆಗೊಳ್ಳುವ ಪ್ರತಿನಿಧಿಗಳಿಗೆ 18ವರ್ಷ ಮೇಲ್ಪಟ್ಟವರು ಮತದಾನ ಮಾಡಬಹುದಾಗಿದೆ. ಮತದಾನ ಮಾಡುವುದು ಪ್ರತಿಯೊಬ್ಬರ ಸಂವಿಧಾನಬದ್ಧ ಹಕ್ಕಾಗಿದೆ ಎಂದು ಸಹಾಯಕ ಆಯುಕ್ತ ಟಿ. ಯೊಗೇಶ ಅಭಿಮತ ವ್ಯಕ್ತಪಡಿಸಿದರು.ಸೋಮವಾರ ಸ್ಥಳೀಯ ಮಹಾಂತಮ್ಮ ಲಿಂಗನಗೌಡ ಬಯ್ಯಾಪೂರ ಕಾಲೇಜಿನಲ್ಲಿ ಆಯೋಜಿಸಿದ್ದ ಮತದಾರ ಪಟ್ಟಿ ಪರಿಸ್ಕರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸಧ್ಯ 18 ವರ್ಷ ತುಂಬಿದ ಅಥವಾ 1ನೇ ಜನವರಿ 2013ಕ್ಕೆ 18 ವರ್ಷ ತುಂಬುವ ಪ್ರತಿಯೋರ್ವ ನಾಗರಿಕರು ಫಾರ್ಮ್ ನಂಬರ 6ರಲ್ಲಿ ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವಾಗ ಅಗತ್ಯ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಹೇಳಿದರು.ಅಕ್ಟೋಬರ್ 1 ರಿಂದ 31ರ ವರೆಗೆ ಮತದಾರ ಪಟ್ಟಿ ಪರಿಸ್ಕರಣೆ ಅಭಿಯಾನ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ಹೆಸರು ಸೇರ‌್ಪಡೆ ಬಯಸುವವರು ಫಾರ್ಮ್ 6ರಲ್ಲಿ. ಯಾವುದೇ ತಕರಾರು ಸಲ್ಲಿಸ ಬಯಸುವವರು ಫಾರ್ಮ್ 7ರಲ್ಲಿ. ಹೆಸರು, ವಯಸ್ಸು, ವಗೈರೆ ತಿದ್ದುಪಡಿಗೆ ಅರ್ಜಿ ಸಲ್ಲಿಸುವವರು ಫಾರ್ಮ್ 8ರಲ್ಲಿ ಭರ್ತಿ ಮಾಡಿ ಸಂಬಂಧಿಸಿದ ಮತಗಟ್ಟೆ ಅಧಿಕಾರಿಗೆ ಸಲ್ಲಿಸುವುದು ಕಡ್ಡಾಯ. ತಪ್ಪು ಅಥವಾ ಅಪೂರ್ಣ ಮಾಹಿತಿ ಕಂಡು ಬಂದಲ್ಲಿ ಅರ್ಜಿ ತಿರಸ್ಕರಿಸಲಾಗುತ್ತದೆ ಎಂದು ವಿವರಿಸಿದರು.ಸಭೆ ಅಧ್ಯಕ್ಷತೆಯನ್ನು ವಿವಿ ಸಂಘದ ಆಡಳಿತಾಧಿಕಾರಿ ಬಸವಂತರಾಯ ಕುರಿ ವಹಿಸಿದ್ದರು. ತಹಸೀಲ್ದಾರ ಜಿ. ಮುನಿರಾಜಪ್ಪ, ಶಿರಸ್ತೆದಾರ ಆಲಮೇಲಕರ್ ಮತ್ತಿತರರು ಪಾಲ್ಗೊಂಡಿದ್ದರು. ಬಾಲಪ್ಪ ಪವಾರ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry