ಬುಧವಾರ, ಏಪ್ರಿಲ್ 14, 2021
31 °C

ಮತದಾನ ರಹಸ್ಯ ಉಲ್ಲಂಘನೆ: ಮುಲಾಯಂ ಸಿಂಗ್ ಮತ ತಿರಸ್ಕರಿಸಿದ ಆಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡಿದ ಸಮಾಜವಾದಿ ಪಕ್ಷದ ಧುರಿಣ ಮುಲಾಯಂ ಸಿಂಗ್ ಯಾದವ್ ಅವರ ಮತವನ್ನು ಶುಕ್ರವಾರ ತಿರಸ್ಕರಿಸಿದ ಚುನಾವಣಾ ಆಯೋಗವು ಮತದಾನದ ರಹಸ್ಯ ಉಲ್ಲಂಘನೆ ಕಾರಣಕ್ಕಾಗಿ ಅವರ ಮತವನ್ನು ಗಣನೆಗೆ ತೆಗೆದುಕೊಳ್ಳಬಾರದು ಎಂದು ನಿರ್ವಚನಾಧಿಕಾರಿಗೆ ನಿರ್ದೇಶನ ನೀಡಿದೆ.~ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣಾ ನಿಯಮಗಳು 1974ರ 15ನೇ ನಿಯಮದ ಪ್ರಕಾರ ಮುಲಾಯಂ ಸಿಂಗ್ ಅವರಿಗೆ ಎರಡನೇ ಮತಪತ್ರ ನೀಡುವ ಅಗತ್ಯ ಇರಲಿಲ್ಲ. ಆದ್ದರಿಂದ ಯಾದವ್ ಅವರಿಗೆ ನೀಡಲಾದ ಎರಡನೇ ಮತಪತ್ರವನ್ನು ಎಣಿಕೆ ಕಾಲದಲ್ಲಿ ಪರಿಗಣಿಸಬೇಕಾದ ಅಗತ್ಯ ಇಲ್ಲ ಎಂದು ಆಯೋಗ ಹೇಳಿತು.ಮೊದಲನೇ ಮತಪತ್ರದ ರಹಸ್ಯ ಪಾಲನೆ ನಿಯಮ ಉಲ್ಲಂಘನೆಯಾದ ಕಾರಣ ಅದನ್ನೂ ಪರಿಗಣಿಸಬೇಕಾದ್ದಿಲ್ಲ ಎಂದು ಆಯೋಗ ನಿರ್ವಚನಾಧಿಕಾರಿಗೆ ನಿರ್ದೇಶನ ನೀಡಿತು.ಯಾದವ್ ಅವರು ಗುರುವಾರ ಯುಪಿಎ ಅಭ್ಯರ್ಥಿ ಪ್ರಣವ್ ಮುಖರ್ಜಿ ಅವರ ಬದಲಿಗೆ ಪ್ರಮಾದವಶಾತ್ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪಿ.ಎ. ಸಂಗ್ಮಾ ಅವರ ಪರವಾಗಿ ಮತ ಚಲಾಯಿಸಿದ್ದರು. ಆದರೆ ತತ್ ಕ್ಷಣವೇ ತಪ್ಪಿನ ಅರಿವಾಗಿ ಬೇರೊಂದು ಮತಪತ್ರ ಪಡೆದು ತಪ್ಪನ್ನು ಸರಿಸಪಡಿಸಲು ಮುಂದಾದರು.ಬೆಳಗ್ಗೆಯೇ ಮತದಾನಕ್ಕೆ ಆಗಮಿಸಿದ್ದ ಅವರು ಸಂಗ್ಮಾ ಅವರಿಗೆ ಮುದ್ರೆಯೊತ್ತಿದ ಬಳಿಕ ಮತಪತ್ರವನ್ನು ಹರಿದು ಹಾಕಿ ನಿರ್ವಚನಾಧಿಕಾರಿಗೆ ಮನವಿ ಮಾಡಿ ಹೊಸದಾಗಿ ಮತಪತ್ರ ಪಡೆದು ಮರು ಮತದಾನ ಮಾಡಿದ್ದರು.ಯಾದವ್ ಅವರು ತಪ್ಪಾಗಿ ಗುರುತಿಸಿ ಬಳಿಕ ಹರಿದು ಹಾಕಿದ ಮತಪತ್ರವನ್ನು ನಿರ್ವಚನಾಧಿಕಾರಿ ಬಳಿ ಇಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.