ಗುರುವಾರ , ನವೆಂಬರ್ 21, 2019
21 °C

`ಮತದಾನ ಸಂವಿಧಾನಬದ್ಧ ಹಕ್ಕು'

Published:
Updated:

ಲಿಂಗಸುಗೂರ: ಪ್ರತಿಯೊಂದು ಚುನಾವಣೆಯಲ್ಲಿ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವ ಸಂವಿಧಾನ ಬದ್ಧ ಹಕ್ಕು ನಮ್ಮದಾಗಿದೆ. ಪವಿತ್ರ ಮತದಾನದ ಹಕ್ಕನ್ನು ಆಮಿಷಕ್ಕೆ ಮಾರಿಕೊಳ್ಳದೆ, ಪ್ರಾಮಾಣಿಕ, ನಿಷ್ಠಾವಂತ, ಸರ್ವ ಜಾತಿ, ಜನಾಂಗದ ನಾಡಿ ಮಿಡಿತ ಬಲ್ಲ ಸರಳ ವ್ಯಕ್ತಿತ್ವದ ವ್ಯಕ್ತಿ ಆಯ್ಕೆ ಮಾಡಿಕೊಳ್ಳಲು ಮತದಾನದ ಹಕ್ಕು ಬಳಕೆ ಕುಡಿತಂತೆ ಜಾಗೃತಿ ಮೂಡಿಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಜಿಲ್ಲಾಧ್ಯಕ್ಷ ವಿನೋದರೆಡ್ಡಿ ಹೇಳಿದರು.ಭಾನುವಾರ ಕರವೇ ಕಚೇರಿ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಬಹುತೇಕರು ಮತದಾನ ಮಾಡಲು ಮುಂದೆ ಬರುತ್ತಿಲ್ಲ. ಅಂತೆಯೆ ತಾವು ಹೋಬಳಿ ಮಟ್ಟದಲ್ಲಿ ಮತದಾನ ಹಕ್ಕು, ಅದರ ಪಾವಿತ್ರತೆ ಕುರಿತಂತೆ ಜಾಗೃತಿ ಕಾರ್ಯಕ್ರಮ ಹಾಕಿಕೊಂಡಿದ್ದೇವೆ. ನೂರಕ್ಕೆ ನೂರರಷ್ಟು ಮತದಾನ ಮಾಡಲು ಮತದಾರರು ಮತಗಟ್ಟೆಗೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಮತದಾರ ಪಟ್ಟಿ ಲೋಪದೋಷಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆಯಲಾಗಿದೆ ಎಂದರು.ಈಗಾಗಲೆ ಜಿಲ್ಲೆಯಲ್ಲಿ ಕಳೆದ ಅವಧಿಯಲ್ಲಿ ಆಯ್ಕೆಗೊಂಡಿರುವ ಶಾಸಕರ ಕಾರ್ಯವೈಖರಿ, ನಡೆದುಕೊಂಡ ರೀತಿ, ನೀತಿ ಎಲ್ಲವನ್ನು ಜನತೆ ನೋಡಿದ್ದೇವೆ. ಮುಂದಿನ ದಿನಗಳಲ್ಲಿ ಅಂತಹ ತಪ್ಪು ಆಗದಂತೆ ನೋಡಿಕೊಳ್ಳುವ ಹೊಣೆ ನಮ್ಮೆಲ್ಲರ ಮೇಲಿದೆ. ಬಹುತೇಕ ಯೋಜನೆಗಳ ಅನುಷ್ಠಾನದಲ್ಲಿ ಹಣ ದುರ್ಬಳಕೆ ಮಾಡಿಕೊಂಡಿರುವುದೆ ಬೃಹತ್ ಸಾಧನೆಯಾಗಿದೆ. ಜನತೆಯನ್ನ್ನು ಮರೆತ ಪ್ರತಿನಿಧಿಗಳಿಗೆ ತಕ್ಕ ಪಾಠ ಕಲಿಸುವಂತೆ ಮನವಿ ಮಾಡಿದರು.ತಾಲ್ಲೂಕು ಅಧ್ಯಕ್ಷ ಜಿಲಾನಿಪಾಷ. ಮುಖಂಡರಾದ ಶಿವರಾಜ ನಾಯಕ, ಆಂಜನೇಯ ಭಂಡಾರಿ, ಚಂದ್ರು ನಾಯಕ, ಜುಲ್ಲು, ಮಲ್ಲು, ನಿತೀಶ, ತಿಮ್ಮಾರೆಡ್ಡಿ, ಅನ್ನಪೂರ್ಣಮ್ಮ, ಅಜೀಜಪಾಷ, ವಿಜಯ ಬಂಡಿ ಮತ್ತಿತರರು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)