ಭಾನುವಾರ, ಡಿಸೆಂಬರ್ 8, 2019
25 °C

`ಮತದಾನ ಹೆಚ್ಚಳ ಮುಖ್ಯ ಗುರಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಮತದಾನ ಹೆಚ್ಚಳ ಮುಖ್ಯ ಗುರಿ'

ರಾಯಚೂರು: ಜಿಲ್ಲೆಯಲ್ಲಿ ಮತದಾರರ ನೋಂದಣಿ ಹಾಗೂ ಮತದಾನದ ಪ್ರತಿಶತ ಹೆಚ್ಚಿಸಲು ಮತ್ತು  ಯಾವುದೇ ಆಮಿಷಕ್ಕೊಳಗಾಗದೇ ನಿರ್ಭಯದಿಂದ ಮತ ಚಲಾಯಿಸುವಂತೆ ಮತದಾರರಿಗೆ ಮಾಹಿತಿ ನೀಡುವುದು ಸ್ವೀಪ್ (ಸಿಸ್ಟೆಮ್ಯೋಟಿಕ್ ವೋಟರ್ಸ್‌ ಎಜ್ಯುಕೇಶನ್ ಆ್ಯಂಡ್ ಎಲೆಕ್ಟೋರಲ್ ಪಾರ್ಟಿಸಿಪೇಷನ್ ಪ್ಲಾನ್)  ಕಾರ್ಯಕ್ರಮದ ಉದ್ದೇಶವಾಗಿದೆ. ಇದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಎಲ್ಲರೂ ಸಹಕರಿಸಬೇಕು ಜಿಲ್ಲಾಧಿಕಾರಿ ಉಜ್ವಲ್‌ಕುಮಾರ್ ಘೋಷ್ ಹೇಳಿದರು.ಸೋಮವಾರ ಜಿಲ್ಲಾಡಳಿತ ಕಚೇರಿ ಸಭಾಭವನದಲ್ಲಿ ಆಯೋಜಿಸಿದ್ದ ಸ್ವೀಪ್ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಮತದಾರರು ಸಮೀಪದ ತಹಸೀಲ್ದಾರ ಕಾರ್ಯಾಲಯಕ್ಕೆ ಭೇಟಿ ನೀಡಿ ತಮ್ಮ ಹೆಸರನ್ನು ಪರಿಶೀಲಿಸಬೇಕು. ಒಂದು ವೇಳೆ ಹೆಸರು ಮತದಾರರ ಯಾದಿಯಲ್ಲಿ ಸೇರಿರದಿದ್ದಲ್ಲಿ ಹೆಸರನ್ನು ಸೇರಿಸಬೇಕು. ಅಲ್ಲದೇ ಹೆಸರು ಬದಲಾವಣೆ, ಮತಗಟ್ಟೆ ಬದಲಾವಣೆ ಈ ಎಲ್ಲ ಕಾರ್ಯಗಳನ್ನು  ಏಪ್ರಿಲ್ 7 ರೊಳಗೆ ಮಾಡಿಕೊಳ್ಳುವಂತೆ ಮತದಾರರಲ್ಲಿ ಮನವಿ ಮಾಡಿದರು.ಭಾರತ ಚುನಾವಣಾ ಆಯೋಗವು ಮತದಾರರಿಗೆ ಅರಿವು ಮೂಡಿಸಲು ಹೊರ ತಂದಿರುವ ಜಾಹೀರಾತುಗಳನ್ನು ಎಲ್ಲ ಚಲನಚಿತ್ರ ಮಂದಿರಗಳು, ಕೇಬಲ್ ಟಿ.ವಿ.ಗಳಲ್ಲಿ ಪ್ರಸಾರ ಮಾಡಬೇಕು. ಮೊಬೈಲ್ ಸೇವೆ ನೀಡುವ ಕಂಪನಿಗಳು ಮತದಾನದ ಕುರಿತು ಎಸ್.ಎಂ.ಎಸ್. ಗಳನ್ನು ಕಳುಹಿಸಬೇಕು. ಬಿ.ಎಸ್.ಎನ್.ಎಲ್.ನವರು ಮತದಾನದ ಮಾಹಿತಿಯನ್ನು ಡಯಲ್ ಟೋನಿನಲ್ಲಿ ಅಳವಡಿಸಬೇಕು. ಪದವಿ ಕಾಲೇಜುಗಳಲ್ಲಿ ಮತದಾನದ ಕುರಿತು ಜಾಥಾ, ಮ್ಯೋರಾಥಾನ್, ಸೈಕಲ್ ರೇಸ್‌ಗಳಂತಹ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದರು.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಜ್ಙಾನಪ್ರಕಾಶ , ಜಿಲ್ಲಾ ಪೊಲೀಸ್ ವರಿಷ್ಠ ಎಸ್.ಬಿ.ಬಿಸ್ನಳ್ಳಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ತಿಮ್ಮಪ್ಪ, ಸಹಾಯಕ ಆಯುಕ್ತೆ ಮಂಜುಶ್ರೀ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಪ್ರತಿಕ್ರಿಯಿಸಿ (+)