ಶುಕ್ರವಾರ, ನವೆಂಬರ್ 22, 2019
25 °C

`ಮತದಾರರಿಂದ ಭ್ರಷ್ಟರಿಗೆ ತಕ್ಕ ಪಾಠ'

Published:
Updated:

ಗಜೇಂದ್ರಗಡ: ಹಣ ಬಲ, ತೋಳ್ಬಲಗಳಿಂದ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯವಿಲ್ಲ. ಜನಬಲವಿದ್ದಾಗ ಮಾತ್ರ ಗೆಲುವು ಸಾಧಿಸಲು ಸಾಧ್ಯ ಎಂದು ಮಾಜಿ ಶಾಸಕ ಜಿ.ಎಸ್. ಪಾಟೀಲ ಹೇಳಿದರು.ನಗರದ ದುರ್ಗಾ ವೃತ್ತದಲ್ಲಿ ಬುಧವಾರ ಆಯೋಜಿಸಿದ್ದ  `ಕಾಂಗ್ರೆಸ್‌ಗೆ ಬನ್ನಿ ಬದಲಾವಣೆ ತನ್ನಿ' ಕಾರ್ಯಕ್ರಮದಲ್ಲಿ ವಿವಿಧ ಪಕ್ಷಗಳ ಮುಖಂಡರನ್ನು ಕಾಂಗ್ರೆಸ್‌ಗೆ  ಬರಮಾಡಿಕೊಂಡು ಮಾತನಾಡಿದರು.ಬಿಜೆಪಿ ನಾಯಕರು ಭ್ರಷ್ಟಾಚಾರದಲ್ಲಿ ತೊಡಗಿ ಅಕ್ರಮ ಸಂಪತ್ತು  ಮಾಡಿದ್ದಾರೆ.  ಇದೇ ಸಂಪತ್ತನ್ನು ಬಳಸಿಕೊಂಡು  ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ಲೆಕ್ಕಾಚಾರದಲ್ಲಿದ್ದಾರೆ. ಆದರೆ ಭ್ರಷ್ಟ ನಾಯಕರಿಗೆ ತಕ್ಕ ಪಾಠ ಕಲಿಸಲು ಮತದಾರರು ತುದಿಗಾಲಲ್ಲಿ ನಿಂತಿದ್ದಾರೆ ಎಂದರು.ಬಿಜೆಪಿಯ ದುರಾಡಳಿತಕ್ಕೆ ರಾಜ್ಯದ ಜನತೆ ಬೇಸತ್ತಿದ್ದಾರೆ. ಬಿಜೆಪಿಯನ್ನು ಪರಾಭವಗೊಳಿಸಿ ಕಾಂಗ್ರೆಸ್‌ಗೆ ಅಧಿಕಾರ ವಹಿಸಿಕೊಡುವ ದಿಸೆಯಲ್ಲಿ ಮತದಾರರು ಉತ್ಸುಕರಾಗಿದ್ದಾರೆ ಎಂದು ಹೇಳಿದರು.ಈ ಸಂದರ್ಭದಲ್ಲಿ  ಚಬಣ್ಣ ಚವಡಿ, ಮೋಹ ನಸಾ ರಾಯಬಾಗಿ, ಅಶೋಕ ದೇಶಣ್ಣವರ, ದತ್ತು ಬಾಕಳೆ, ಗಿರೀಶ ರಂಗ್ರೇಜಿ, ವೆಂಕಟೇಶ ಮುದಗಲ್, ನಾಗೇಶ ಖೋಡೆ, ಉಮೇಶ ಶೀಲವಂತ, ಪ್ರಶಾಂತ ಶಿರೋಡಕರ್, ಕಳಕಪ್ಪ ಜಾಡಬಂದಿ, ಪ್ರಕಾಶ ಫಲಮಾರಿ, ಮಾರುತಿ ಕುರಿ, ಫಕೀರಪ್ಪ ಕುರಿ, ಚಂದ್ರು ರಾಯಬಾಗಿ ಕಾಂಗ್ರೆಸ್ ಸೇರಿದರು.ಮಾಜಿ ಸಂಸದ ಆರ್.ಎಸ್.ಪಾಟೀಲ, ವೀರಣ್ಣ ಸೊನ್ನದ, ಜಿ.ಪಂ. ಮಾಜಿ ಅಧ್ಯಕ್ಷ ನಿಂಗಪ್ಪ ಬೇವಿನಮರದ, ಐ.ಎಸ್. ಪಾಟೀಲ, ವಿ.ಆರ್. ಗುಡಿಸಾಗರ್, ಸುಭಾನಸಾಬ ಆರಗಿದ್ದಿ, ಶಶಿಧರ ಹೂಗಾರ, ಶಿವರಾಜ್ ಘೋರ್ಪಡೆ, ಪ್ರಭು ಮೇಟಿ, ಅಶೋಕ ಬಾಗಮಾರ, ಅಜೀತ ವಂದ ಕುದರಿ ಹಾಜರಿದ್ದರು.ಜನಸ್ನೇಹಿ ಕೇಂದ್ರ ಸರ್ಕಾರ: ಜೆ.ಎಸ್.ಪಾಟೀಲ

ನರೇಗಲ್: ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷವು ಸಾಮಾನ್ಯ ಜನರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿ ಜನಸ್ನೇಹಿಯಾಗಿದೆ ಎಂದು ವಿಧಾನಸಭೆ ರೋಣ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಶಾಸಕ ಜಿ ಎಸ್ ಪಾಟೀಲ ಹೇಳಿದರು.

ಸ್ಥಳೀಯ ನಾಡಗೌಡರ ಜಿನ್ನಿಂಗ ಮಿಲ್‌ನಲ್ಲಿ  ಬುಧುವಾರ ನಡೆದ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ರೈತರ ಹಾಗೂ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಪಕ್ಷ ಕಾಂಗ್ರೆಸ್, ಇಂದು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿಕೊಂಡು ನೂರಾರು ವಿವಿಧ ಪಕ್ಷಗಳ ಕಾರ್ಯಕರ್ತರು ಪಕ್ಷಕ್ಕೆ ಬರುತ್ತಿರುವುದು ಪಕ್ಷಕ್ಕೆ  ಬಲಬಂದಂತಾ ಗಿದೆ ಎಂದು ಹೇಳಿದರು. ಮುಖಂಡ ನಿಂಗಪ್ಪ ಬೇವಿನಮರದ ಮಾತನಾಡಿದರು.ನಗರ ಘಟಕದ ಅಧ್ಯಕ್ಷ ಬಸನಗೌಡ ಪೊಲೀಸ್ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವೀರಣ್ಣ ಶೆಟ್ಟರ್, ವಿ.ಆರ್.ಗುಡಿಸಾಗರ, ದಶರಥ ಗಾಣಿಗೇರ, ವಿಶ್ವನಾಥ ಜಿಡ್ಡಿಬಾಗಿಲ, ಅಶೋಕ ದೇಶಣ್ಣವರ, ಪ್ರಭು ಮೇಟಿ, ಪರಶುರಾಮಪ್ಪ ಅಳಗವಾಡಿ, ಎಚ್.ಎಂ.ಪಾಟೀಲ, ಅಜ್ಜಪ್ಪ ಮಳಗಿ, ತಾಪಂ ಸದಸ್ಯ ಅಂದಪ್ಪ ಬಿಚ್ಚೂರ, ಬಸವರಾಜ ಮಲ್ಲಾಪುರ, ಮಿಥುನ್ ಪಾಟೀಲ, ಯುವ ಘಟಕದ ಅಧ್ಯಕ್ಷ ಸೋಮು ಲಕ್ಕನಗೌಡ್ರ, ವಿರುಪಣ್ಣ ಪಿಡಗೊಂಡ, ವೇಣುಗೋಪಾಲ ಶಾಸ್ತ್ರೀ, ನರೇಗಲ್ಲ ಪಪಂ ಸದಸ್ಯ ಕಲ್ಮೇಶ ತೊಂಡಿಹಾಳ, ಬಾಳಪ್ಪ ಸೋಮಗೊಂಡ ಮುಂತಾದವರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)