ಬುಧವಾರ, ಜೂನ್ 23, 2021
23 °C

ಮತದಾರರಿಗೆ ಹಂಚಲು ಹಣ ಸಾಗಣೆ: ₨ 47 ಲಕ್ಷ ಜಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರ­ರಿಗೆ ಹಂಚಲು ಹಣ ಸಾಗಿಸುತ್ತಿದ್ದ ಆರೋಪದ ಮೇಲೆ ಶುಕ್ರವಾರ ಮೂರು ಮಂದಿ­ಯನ್ನು ಬಂಧಿ­ಸಿ­ರುವ ನಗರದ ಅಮೃತಹಳ್ಳಿ ಪೊಲೀಸರು ₨ 47 ಲಕ್ಷ ಜಪ್ತಿ ಮಾಡಿದ್ದಾರೆ.ಜೆ.ಪಿ.ನಗರದ ಜೀವನ್‌ಸಾಗರ್‌(45), ಉತ್ತರಹಳ್ಳಿ ಮುಖ್ಯರಸ್ತೆಯ ರಘು­ರಾಜ್‌ (30) ಮತ್ತು ಪಂತರಪಾಳ್ಯ ಬಳಿಯ ಪ್ರಮೋದ್‌ ಲೇಔಟ್‌ನ ನಾಗೇಂದ್ರ­ಕುಮಾರ್‌ (40) ಬಂಧಿತರು. ಆರೋಪಿ­ಗಳು ಕಾರಿನಲ್ಲಿ ಬಾಣ­ಸವಾಡಿ­ಯಿಂದ ವಿಜಯನಗರಕ್ಕೆ ಹಣ ಸಾಗಿಸು­ತ್ತಿದ್ದ ಬಗ್ಗೆ ಠಾಣೆಗೆ ಮಾಹಿತಿ ಬಂತು. ಆ ಮಾಹಿತಿ ಆಧರಿಸಿ ವೀರಣ್ಣ­ಪಾಳ್ಯ ಜಂ­ಕ್ಷನ್‌ ಬಳಿ ಕಾರನ್ನು ತಡೆದು ಪರಿ­ಶೀ­ಲಿಸಿ­­­ದಾಗ ಹಣ ಸಾಗಿಸು­ತ್ತಿ­ರು­ವು­ದು ಗೊತ್ತಾ­ಯಿತು ಎಂದು ಪೊಲೀಸರು ತಿಳಿಸಿದ್ದಾರೆ.ಆರೋಪಿಗಳು ₨ 1,000 ಮತ್ತು ₨ 500ರ ಮುಖ­ಬೆಲೆಯ ನೋಟುಗಳನ್ನು ರಟ್ಟಿನ ಪೆಟ್ಟಿಗೆಗೆ ತುಂಬಿ ವಾಹನದ ಸೀಟಿನ ಹಿಂಭಾಗದಲ್ಲಿಟ್ಟು, ಪ್ಲಾಸ್ಟಿಕ್‌ ಕವರ್‌ ಮುಚ್ಚಿದ್ದರು. ಹಣಕ್ಕೆ ಅವರ ಬಳಿ ಯಾವುದೇ ದಾಖಲೆ­ಪತ್ರಗಳಿಲ್ಲ. ಹಣ ಯಾವ ಪಕ್ಷಕ್ಕೆ ಸೇರಿದ್ದು ಎಂಬುದು ಗೊತ್ತಾ­ಗಿಲ್ಲ. ಆ ಬಗ್ಗೆ ತನಿಖೆ ಮಾಡ­ಲಾಗು­ತ್ತಿದೆ ಎಂದು ಹೇಳಿದ್ದಾರೆ.ಜೀವನ್‌ಸಾಗರ್‌ ರಿಯಲ್‌ ಎಸ್ಟೇಟ್‌ ವ್ಯವ­­ಹಾರ ಮಾಡುತ್ತಿ­ರು­ವುದಾಗಿ, ನಾಗೇಂ­ದ್ರ­­ಕುಮಾರ್‌ ಬಿಡಿಎ ಗುತ್ತಿಗೆ­ದಾರ­­­ನೆಂದು, ರಘುರಾಜ್‌ ಸಿವಿಲ್‌ ಗುತ್ತಿಗೆ­­­ದಾರ­ನೆಂದು ವಿಚಾರಣೆ ವೇಳೆ ಹೇಳಿದ್ದಾರೆ. ಅವರ ವಿರುದ್ಧ ಪ್ರಜಾ­ಪ್ರತಿನಿಧಿ ಕಾಯ್ದೆ ಮತ್ತು ಮತ­ದಾರ­ರಿಗೆ ಹಂಚುವ ಉದ್ದೇಶಕ್ಕಾಗಿ ಹಣ ಸಾಗಿ­ಸುತ್ತಿದ್ದ ಆರೋಪದ ಮೇಲೆ ಪ್ರಕರಣ ದಾಖಲಿಸ­ಲಾಗಿದೆ.  ಆರೋಪಿಗಳಿಂದ ಹಣ, ಕಾರು ಹಾಗೂ ಮೂರು ಮೊಬೈಲ್‌­ ವಶಪಡಿಸಿ­ಕೊಳ್ಳಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.