ಗುರುವಾರ , ನವೆಂಬರ್ 21, 2019
26 °C

`ಮತದಾರರ ಋಣ ತೀರಿಸಲು ಶ್ರಮಿಸುವೆ'

Published:
Updated:

ಹಿರೇಕೆರೂರ: ಕೆಜೆಪಿ ಅಭ್ಯರ್ಥಿ, ಮಾಜಿ ಶಾಸಕ ಯು.ಬಿ.ಬಣಕಾರ ಸೋಮವಾರ ತಾಲ್ಲೂಕಿನ ಕಳಗೊಂಡ ಗ್ರಾಮದಲ್ಲಿ ಪಾದಯಾತ್ರೆ ಮೂಲಕ ಮನೆಮನೆಗೆ ತೆರಳಿ ಪಕ್ಷದ ಚಿನ್ಹೆಯಾದ ತೆಂಗಿನಕಾಯಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.`ನಾನು ಯಾವುದೇ ಆಶ್ವಾಸನೆ ನೀಡುವುದಿಲ್ಲ, ನನ್ನನ್ನು ಆಯ್ಕೆ ಮಾಡಿದರೆ ಸಮಗ್ರ ಅಭಿವೃದ್ಧಿಯ ರೂಪರೇಷೆ ತಯಾರಿಸಿ ಒಬ್ಬ ಶಾಸಕ ಎಷ್ಟು ಸಾಮಾನ್ಯನಾಗಿ ಇರಲು ಸಾಧ್ಯ ಎನ್ನುವುದನ್ನು ತೋರಿಸಿಕೊಡುವ ಮೂಲಕ ಮತದಾರರ ಋಣ ತೀರಿಸಲು ಶ್ರಮಿಸುತ್ತೇನೆ. ಸರ್ಕಾರದ ಯೋಜನೆಗಳು ಮಧ್ಯವರ್ತಿಗಳ ಪಾಲಾಗದಂತೆ ನೋಡಿಕೊಂಡು ಅರ್ಹರಿಗೆ ತಲುಪುವಂತೆ ಆಗಲು ನಿರಂತರವಾಗಿ ಶ್ರಮಿಸುತ್ತೇನೆ' ಎಂದು ಯು.ಬಿ.ಬಣಕಾರ ಈ ಸಂದರ್ಭದಲ್ಲಿ ಹೇಳಿದರು.ನಾಗರಾಜ ಮಳವಳ್ಳಿ, ಬಸವರಾಜ ಹುಲ್ಲಿನಕೊಪ್ಪ, ಗಣೇಶಪ್ಪ ನಿಂಬಿಗೊಂದಿ, ಕೆ.ಸಿ.ಮುದಿಗೌಡ್ರ, ಕರಬಸಪ್ಪ ಹುಲ್ಲಿನಕೊಪ್ಪ, ಹನುಮಂತಪ್ಪ ಕೆಂಚಣ್ಣನವರ, ಶಂಕ್ರಗೌಡ ಮುದಿಗೌಡ್ರ, ಸಿದ್ದನಗೌಡ ಪಾಟೀಲ, ಶಂಕ್ರಪ್ಪ ಮರಿಗೌಡ್ರ, ಹೂವಪ್ಪ ಮುದಿಗೌಡ್ರ, ಹನುಮಂತಪ್ಪ ಮುಚಡಿ, ಕೃಷ್ಣಪ್ಪ ಹುಲ್ಲತ್ತಿ, ಬಸವರಾಜ ದಂಡಿಗೀಹಳ್ಳಿ, ಲೇಶಪ್ಪ ಮುದಿಗೌಡ್ರ, ಪರಮೇಶ ಯಡಚಿ, ಬೂದೇಶ ಯಡಚಿ, ರಾಮಪ್ಪ ಕಡೇಮನಿ, ಚಂದ್ರಪ್ಪ ಕುರುಬರ, ರಂಗಪ್ಪ ದೊಡ್ಡಮನಿ, ಭೈರಪ್ಪ ಮಡಿವಾಳರ, ತಿರಕಪ್ಪ ಹರಿಜನ, ಗೋವಿಂದಪ್ಪ ದೊಡ್ಡಮನಿ, ಹುಚ್ಚಪ್ಪ ಹರಿಜನ, ಗಣೇಶ ದೊಡ್ಡಮನಿ ಮೊದಲಾದವರು ಹಾಜರಿದ್ದರು.

ಪ್ರತಿಕ್ರಿಯಿಸಿ (+)