ಸೋಮವಾರ, ಜೂನ್ 21, 2021
29 °C

ಮತದಾರರ ಚೀಟಿ ಪರಿಷ್ಕರಣೆ: 16ರವರೆಗೆ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವನಹಳ್ಳಿ: ಮತದಾರರ ಪಟ್ಟಿಯಲ್ಲಿ ಹೆಸರು ಪರಿಶೀಲಿಸಿ ಇರಬಹುದಾದ ನ್ಯೂನತೆಗಳನ್ನು ಸರಿಪಡಿಸಲು ಮತ್ತು ನೂತನವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಲು ಮತದಾ­ರರಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಚುನಾವಣಾ ಆಯೋ­ಗದ ನಿರ್ದೇಶನದಂತೆ ಲೋಕಸಭೆ ವ್ಯಾಪ್ತಿಯಲ್ಲಿ ಎಲ್ಲಾ ಮತಗಟ್ಟೆಗಳಲ್ಲಿ ವಿಶೇಷ ಶಿಬಿರ ಏರ್ಪಡಿಸಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಆರ್.ಸುಮಾ ತಿಳಿಸಿದರು.ಪುರಸಭಾ ಆವರಣದಲ್ಲಿ ಮತಗಟ್ಟೆ ಪರಿಶೀಲಿಸಿ ಮಾತನಾಡಿದ ಅವರು,  ಮಾರ್ಚ್ ಒಂದರಿಂದ ನಿರಂತರ ಪರಿ­ಷ್ಕರಣೆ ಅಡಿಯಲ್ಲಿ ಅರ್ಜಿ ಪಡೆಯ­ಲಾಗುತ್ತಿದ್ದು ಮಾರ್ಚ್ 16 ರವರೆಗೆ ಕಾಲಾವಕಾಶ ನೀಡಲಾಗಿದೆ ಲೋಕ­ಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಮತ­ಗಟ್ಟೆಯಲ್ಲಿ ಅಧಿಕಾರಿ (ಬಿ.ಎಲ್.ಓ) ಇದ್ದು ಮತದಾರರಿಗೆ ಸಹಕರಿಸಲಿದ್ದಾರೆ ಎಂದರು.ಮತಗಟ್ಟೆಯಲ್ಲಿಯೇ ಮತದಾರರ ಪಟ್ಟಿ ಪ್ರಕಟಿಸಿ ಮತದಾರ ಮುಂದೆ ಓದಿ ತಿಳಿಸುವುದು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದಲ್ಲಿ ಅವರು ಆ ಭಾಗದ ಸಾಮಾನ್ಯ ನಿವಾಸಿಯಾಗಿದ್ದಲ್ಲಿ ನಮೂನೆ 6ರಲ್ಲಿ ಅರ್ಜಿ ಸಲ್ಲಿಸ­ಬೇಕಾಗಿದೆ ಮತದಾರರ ಹೆಸರು ಮತ್ತು ವಿವರಗಳು ಮತದಾರರ ಪಟ್ಟಿಯಲ್ಲಿ ಲೋಪದೋಷಗಳಿದ್ದರೆ ನಮೂನೆ 8 ರಲ್ಲಿ ಅರ್ಜಿ ಸಲ್ಲಿಸಬೇಕು ಮತದಾರರ ಪಟ್ಟಿಯಲ್ಲಿ ಹೆಸರಿದ್ದು ತೆಗೆದು ಹಾಕಲು ನಮೂನೆ 7 ರಲ್ಲಿ ಅರ್ಜಿ ಸಲ್ಲಿಸಬೇಕು. ಒಂದೆ ವಿಧಾನ ಸಭಾ ಕ್ಷೇತ್ರದಲ್ಲಿ ಒಂದು ಮತಗಟ್ಟೆಯಿಂದ ಇನ್ನೊಂದು ಮತಗಟ್ಟೆ ಪ್ರದೇಶಕ್ಕೆ ವಾಸಸ್ಥಳವನ್ನು ಸ್ಥಳಾಂತರ­ಗೊಳಿಸಿದರೆ ಅಂತಹ ಮತದಾರರು ನಮೂನೆ 8ಎ ಅಡಿಯಲ್ಲಿ ಅರ್ಜಿ ಸಲ್ಲಿ­ಸಬೇಕು.ಮತದಾರರ ಪಟ್ಟಿಯಲ್ಲಿ ಹೆಸ­ರಿದ್ದು ಗುರುತಿನ ಚೀಟಿ ಕಳೆದುಕೊಂಡಿ­ದ್ದಲ್ಲಿ 25ರೂ ಶುಲ್ಕ ಪಾವತಿಸಿ ನಕಲು ಗುರುತಿನಚೀಟಿ ಪಡೆಯಲು ಅವಕಾ­ಶವಿದೆ. ಮತದಾರರ ಪಟ್ಟಿಯಲ್ಲಿ ಹೆಸ­ರಿದ್ದು ಗುರುತಿನ ಚೀಟಿಯು ಇದ್ದು ಅದರ ಸಂಖ್ಯೆ ವ್ಯತ್ಯಾಸವಿದ್ದಲ್ಲಿ ಮತ­ದಾರರ ಪಟ್ಟಿಯಲ್ಲಿದ್ದಂತೆಯೇ ಗುರುತಿನ ಚೀಟಿ ಸಂಖ್ಯೆಯನ್ನಾಧಾರಿಸಿ ಮತ್ತೊಮ್ಮೆ ಚೀಟಿ ಪಡೆಯಲು ಅವಕಾಶ ಕಲ್ಪಿಸ­ಲಾಗಿದೆ.ಭಾರತ ಚುನಾವಣಾ ಆಯೋ­ಗದಿಂದ ಮತಗಟ್ಟೆ ಅಧಿಕಾರಿಗಳು (ಬಿ.ಎಲ್.ಓ) ಮೂಲಕ ಮತದಾನಕ್ಕೆ ಮೂರು ದಿನ ಮೊದಲು ಮತದಾನ ಚೀಟಿ (ವೋಟರ್ಸ್ ಸ್ಲಿಪ್) ಮನೆ ಮನೆಗೆ ಹಂಚಿಕೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಚುನಾವಣಾ ಶಿರಸ್ತೆದಾರ್ ರಾಘ­ವೇಂ­ದ್ರನ್‌, ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್‌ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.