ಮಂಗಳವಾರ, ನವೆಂಬರ್ 12, 2019
25 °C

ಮತದಾರರ ಜಾಗೃತಿಗಾಗಿ ಜಾಥಾ

Published:
Updated:

ಮುಗಳಖೋಡ: ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಶ್ರೀಕಾಂತ ಯಡ್ರಾವಿ ಅವರ ನೇತೃತ್ವದಲ್ಲಿ ಚುನಾವಣೆ ಸ್ವೀಪ್ ಕ್ರಿಯಾ ಯೋಜನೆ ಪ್ರಕಾರ ಗ್ರಾಮದಲ್ಲಿ ಮತದಾರರಿಗೆ ಜಾಗೃತಿ ಮೂಡಿಸುವ ದೃಷ್ಟಿಯಿಂದ ಕಡ್ಡಾಯ ಮತದಾನ ಮಾಡಿ ತಮ್ಮ ಹಕ್ಕು ಚಲಾಯಿಸುವ ಕುರಿತು ಅಂಗನವಾಡಿ, ಆಶಾ, ಎಎನ್‌ಎಂ, ಕಾರ್ಯಕರ್ತೆಯರು ಮತ್ತು ವಿವಿಧ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು  ಮತ್ತು ಮತಗಟ್ಟಿ ಅಧಿಕಾರಿಗಳು ಜಾತಾ ಮುಲಕ ಗ್ರಾಮದ ಪ್ರಮುಖ ಬೀದಿ ಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿದರು.ನಿರ್ಭಿತಿಯಿಂದ ಮತ ಚಲಾಯಿಸಿ. ನಿಮಗೆ ಒಳ್ಳೆಯವರೆನಿಸುವ ಅಭ್ಯರ್ಥಿ ಗಳನ್ನು ಆಯ್ಕೆ ಮಾಡಿರಿ. ಆ ಮೂಲಕ ಸುಭದ್ರ ಪ್ರಜಾಪ್ರಭುತ್ವಕ್ಕೆ ನಿಮ್ಮ ಅಮೂಲ್ಯ ಕೊಡುಗೆ ನೀಡಿರಿ ಎಂದು ಮನೆ ಮನೆಗೆ ತೆರಳಿ ಮತದಾನ ಬಗ್ಗೆ ಅರಿವು ಮೂಡಿಸಿದರು. ಇದರ ನಿಮಿತ್ತ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.ಕಾರ್ಯಕ್ರಮದಲ್ಲಿ ಆರ್.ಎಸ್. ಬೆಳಗಲಿ, ಎಸ್.ಬಿ. ಢವಳೇಶ್ವರ, ಐ.ಜಿ. ಯಡವಣ್ಣವರ, ಬಿ.ಎ. ಮೆಕನಮರಡಿ, ಬಿ.ಆರ್. ಹಳಿಂಗಳಿ, ಎಸ್.ಎ. ನಾವಿ, ವೈ.ಎಸ್. ಕದಮ್, ಆರ್.ಎನ್. ರಾನಬರೆ, ಎಸ್.ಬಿ. ಗೋಲಭಾವಿ, ಆರ್.ಎಸ್. ಹಾರೂಗೇರಿ, ಪಿ.ರಂಜನಾ, ಪಿ.ಆರ್. ಪಾಟೀಲ, ಎಚ್.ಪಿ. ಸನತಿಪ್ಪಗೋಳ, ಟಿ.ಎಂ. ಖಾನಟ್ಟಿ. ಬಿ.ಆರ್. ತೇರದಾಳ, ಎಸ್.ಬಿ. ವಿಜಯನಗರಿ, ಮಹಿಳಾ ಪೊಲೀಸ್ ಸಿಬ್ಬಂದಿ ಎ.ಬಿ. ಬಡಿಗೇರ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)