ಬುಧವಾರ, ನವೆಂಬರ್ 13, 2019
28 °C

ಮತದಾರರ ಜಾಗೃತಿಗೆ ಪ್ಯಾರಾಗ್ಲೈಡರ್

Published:
Updated:

ಬೆಳಗಾವಿ: ಜಿಲ್ಲಾಡಳಿತದ ವತಿಯಿಂದ ಪ್ಯಾರಾಗ್ಲೈಡರ್ ಮೂಲಕ ಮತದಾರರ ಜಾಗೃತಿ ಕಾರ್ಯಕ್ರಮವನ್ನು ಇದೇ 20ರಂದು ಬೆಳಿಗ್ಗೆ 7 ಗಂಟೆಗೆ ನಡೆಯಲಿದೆ.ಸಾಂಬ್ರಾ ವಿಮಾನ ನಿಲ್ದಾಣದಿಂದ ಪ್ಯಾರಾಗ್ಲೈಡರ್ ಆರಂಭಗೊಳ್ಳಲಿದೆ. ಪ್ಯಾರಾಗ್ಲೈಡರ್ ಮೂಲಕ ಬೆಳಗಾವಿ ನಗರದ ಆಗಸದಲ್ಲಿ ಸಂಚರಿಸಿ ಮತದಾನದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತದೆ. ಈ ಸಂದರ್ಭದಲ್ಲಿ ಮತದಾರರ ಜಾಗೃತಿ ಕುರಿತಾಗಿ ಸಿದ್ಧಪಡಿಸಲಾಗಿರುವ ಕರಪತ್ರಗಳನ್ನು ಪ್ಯಾರಾಗ್ಲೈಡರ್ ಮೂಲಕ ನಗರದಲ್ಲಿ ಹಾರಿ ಬಿಡಲಾಗುವುದು ಎಂದು ಪ್ಯಾರಾಗ್ಲೈಡರ್ ಪ್ರದರ್ಶನದ ನೇತತ್ವ ವಹಿಸಿರುವ ನಿಕೋಲಾಯ್ ಸಿಂಗ್ ತಿಳಿಸಿದ್ದಾರೆ.ಮೂರು ಚಕ್ರಗಳನ್ನು ಒಳಗೊಂಡ ಸೈಕಲ್ ಮಾದರಿಯ ವಾಹನ ಹಾಗೂ ಅದರ ಮೇಲಿಂದ ಪ್ಯಾರಾಚೂಟನ್ನು ಒಳಗೊಂಡ ಪ್ಯಾರಾಗ್ಲೈಡಿಂಗ್ 450 ಕೆಜಿ ಭಾರವನ್ನು ಹೊಂದಿದೆ. ಈ ಪ್ಯಾರಾಗ್ಲೈಡಿಂಗ್ ಆಗಸದಲ್ಲಿ ಸತತವಾಗಿ 3 ಗಂಟೆಗಳ ಕಾಲ ಹಾರುವ ಸಾಮರ್ಥ್ಯವನ್ನು ಹೊಂದಿದ್ದು, ನೆಲದಿಂದ ಐದು ಅಡಿಯಿಂದ 18 ಸಾವಿರ ಅಡಿ ಎತ್ತರದವರೆಗೆ ಹಾರಬಲ್ಲದು. ಮತದಾರರಲ್ಲಿ ಜಾಗೃತಿ ಮೂಡಿಸಲು ಎಲ್ಲ ಮಾಧ್ಯಮಗಳನ್ನು ಬಳಸಲಾಗುತ್ತಿದ್ದು, ಇದೀಗ ಪ್ಯಾರಾಗ್ಲೈಡಿಂಗ್ ಅನ್ನೂ ಬಳಸಲಾಗು ತ್ತಿದೆ. ಇದನ್ನು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಮುನಿಷ್ ಮೌದ್ಗಿಲ್ ತಿಳಿಸಿದ್ದಾರೆ.ಕಿತ್ತೂರ ಕ್ಷೇತ್ರ: ವೀಕ್ಷಕರ ಭೇಟಿ

ಬೆಳಗಾವಿ: ಕಿತ್ತೂರ ವಿಧಾನಸಭೆ ಕ್ಷೇತ್ರದ ವೀಕ್ಷಕರಾದ ಇಂದ್ರಜಿತ್ ಸಿಂಗ್ ಸಂಧು ಪ್ರತಿದಿನ ಬೆಳಿಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಲಿದ್ದಾರೆ.

ಚುನಾವಣೆಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದರೆ ವೀಕ್ಷಕರನ್ನು ಭೇಟಿಯಾಗಿ ತಮ್ಮ ಅಹವಾಲು ಸಲ್ಲಿಸಬಹುದಾಗಿದೆ. ವೀಕ್ಷಕರ ಮೊಬೈಲ್ ಸಂಖ್ಯೆ 9483078708 ಇದ್ದು, ಸಾರ್ವಜನಿಕರು ಇದಕ್ಕೆ ಕರೆ ಮಾಡಬಹುದು ಎಂದು ಬೈಲಹೊಂಗಲ ತಹಸೀಲ್ದಾರರು ತಿಳಿಸಿದ್ದಾರೆ.ನಾಮಪತ್ರ ವಾಪಸ್

ಬೈಲಹೊಂಗಲ: ಮತಕ್ಷೇತ್ರದ ವಿಧಾನಸಭೆ ಚುನಾವಣೆಗೆ ಬಿ.ಎಸ್.ಆರ್. ಕಾಂಗ್ರೆಸ್ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದ ಅರವಿಂದ ಕಲಕುಟಕರ ಶುಕ್ರವಾರ ನಾಮಪತ್ರ ವಾಪಸ್ಸು ಪಡೆದಿದ್ದಾರೆ ಎಂದು ಚುನಾವಣಾಧಿಕಾರಿ ಕೆ.ಎಚ್.ಗುರುಪ್ರಸಾದ ತಿಳಿಸಿದ್ದಾರೆ. ಹತ್ತು ಅಭ್ಯರ್ಥಿಗಳು ಕಣದಲ್ಲಿದ್ದು, ನಾಮಪತ್ರ ವಾಪಸ್ಸು ಪಡೆಯಲು ಶನಿವಾರ ಕೊನೆಯ ದಿನವಾಗಿದೆ.

ಪ್ರತಿಕ್ರಿಯಿಸಿ (+)