ಶುಕ್ರವಾರ, ಜೂನ್ 25, 2021
21 °C

ಮತದಾರರ ಜಾಗೃತಿಗೆ ವಿನೂತನ ಕಾರ್ಯಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ವಾರ್ತಾ ಇಲಾಖೆ ಸಂಯುಕ್ತವಾಗಿ ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.ಕಾಲೇಜುಗಳಲ್ಲಿ ಕ್ಯಾಂಪಸ್ ಅಂಬಾಸಿಡರ್ ನೇಮಕ ಮಾಡಲು ಉದ್ದೇಶಿಸಲಾಗಿದೆ. ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ಕ್ರಿಯಾಶೀಲ ವಿದ್ಯಾರ್ಥಿಯ ನೇಮಕ ಮಾಡಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ವಿಪುಲ್‌ ಬನ್ಸಲ್‌ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಾರ್ವಜನಿಕರಿಗಾಗಿ ಆಶುಭಾಷಣ ಸ್ಪರ್ಧೆ, ಚರ್ಚಾಗೋಷ್ಠಿಗಳು ಆಯೋಜಿಸಲಾಗಿದೆ. ಹಾಗೆಯೇ, ಹೆದ್ದಾರಿ ಫಲಕಗಳು, ರಸ್ತೆ ಬದಿಯ ಲ್ಯಾಂಪ್ಆಡ್, ಪೋಲ್ ಆಡ್‌, ಶಿವಮೊಗ್ಗ ಡಿಪೋದ ಎಲ್ಲ ಸರ್ಕಾರಿ ಬಸ್‌ಗಳಿಗೆ ಭಿತ್ತಿಪತ್ರ, ಆಟೋ ಮೇಲೆ ಜಾಗೃತಿ ಸ್ಟಿಕ್ಕರ್ ಅಂಟಿಸಲು ತೀರ್ಮಾನಿಸಲಾಗಿದೆ ಎಂದರು.ವಿವಿಧ ಸರ್ಕಾರಿ ಕಚೇರಿಗಳಲ್ಲಿ ಹಿಂಬರಹದ ಮೇಲೆ ಕೆಂಪು ಶಾಯಿ ಮೊಹರು, ಅಂಚೆ ಕಚೇರಿಗಳು ಹಾಗೂ ಬ್ಯಾಂಕ್ ಹಿಂಬರಹದ ಮೇಲೆ  ರಬ್ಬರ್ ಸ್ಟಾಂಪ್ ಹಾಕಲು ನಿರ್ಧರಿಸಲಾಗಿದೆ ಎಂದರು.ಹಾಲಿನ ಪ್ಯಾಕೆಟ್ ಮೇಲೆ ಕೂಡ ಜಾಗೃತಿ ಮೊಹರು ಹಾಕಲು ತೀರ್ಮಾನಿಸಲಾಗಿದೆ. ಶಿಮೂಲ್‌ನಿಂದ ಪ್ರತಿದಿನ 1.30 ಲಕ್ಷ  ಪ್ಯಾಕೆಟ್ ವಿವಿಧ ಅಳತೆಯಲ್ಲಿ ಮಾರಾಟವಾಗುತ್ತಿದ್ದು, ಮತದಾನದ ದಿನದವರೆಗೆ ಮೊಹರುಳ್ಳ ಪ್ಯಾಕೆಟ್ ಮಾರಾಟ ಮಾಡುವಂತೆ ಸೂಚಿಸಲಾಗಿದೆ ಎಂದರು. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ಹಾಗೂ ಹೊಸ ಮತದಾರರಿಂದ ಅಂಚೆ ಕಾರ್ಡಿನಲ್ಲಿ ಸಂಬಂಧಿಗಳಿಗೆ ಪತ್ರ ರವಾನೆ. ಪ್ರತಿಜ್ಞಾವಿಧಿ ಪತ್ರಗಳ ರವಾನೆ.ದೂರವಾಣಿ, ಮೊಬೈಲ್‌ಗಳಿಗೆ ಕಾಲರ್ ಟ್ಯೂನರ್ ಮತ್ತು ರಿಂಗ್ ಟ್ಯೂನ್ ಹಾಕಲು ಚಿಂತನೆ ನಡೆದಿದೆ ಎಂದು ಹೇಳಿದರು. ಸಮೂಹ ಮಾಹಿತಿ ರವಾನೆ (ಬಲ್ಕ್ ಎಸ್ಎಂಎಸ್), ಬೀದಿ ನಾಟಕಗಳು, ಚಲನಚಿತ್ರ ಪ್ರದರ್ಶನ, ಜಿಲ್ಲೆಯಾದ್ಯಂತ ಗ್ರಾಮೀಣ ಹಂತದಲ್ಲಿ ಬೀದಿನಾಟಕಗಳ ಮೂಲಕ ಮತದಾರರ ಜಾಗೃತಿ ಮಾಡಲಾಗುವುದು ಎಂದರು.ಯುವ ಮತದಾರರ ಸೆಳೆಯಲು ಪಂಜಿನ ಮೆರವಣಿಗೆ, ರಸ್ತೆ ಓಟ, ಸಹಿ ಸಂಗ್ರಹ ಅಭಿಯಾನ ಮಾಡಲಾಗುತ್ತದೆ. ತಾಲ್ಲೂಕು ಮಟ್ಟದಲ್ಲಿ 100 ಅಡಿ ಉದ್ದದ ಕ್ಯಾನ್ವಸ್ ಮೇಲೆ ಬೃಹತ್ ಸಹಿ ಸಂಗ್ರಹ ಅಭಿಯಾನ. ಗೃಹಿಣಿಯರಿಗೆ ರಂಗೋಲಿ ಸ್ಪರ್ಧೆ, ಮದುವೆ ಮತ್ತು ಉತ್ಸವಗಳಲ್ಲಿ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ  ಎಂದರು.‌ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೌಶಲೇಂದ್ರಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎನ್‌.ನಾಗರಾಜ್, ಜಿಲ್ಲಾ ವಾರ್ತಾಧಿಕಾರಿ ಜಿ. ಹಿಮಂತರಾಜ್ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.