ಮಂಗಳವಾರ, ಜನವರಿ 28, 2020
23 °C

ಮತದಾರರ ದಿನಾಚರಣೆ ಫಲಿತಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು : ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ನಗರದಲ್ಲಿ ಈಚೆಗೆ ನಡೆದ ಕ್ರೀಡಾಕೂಟ, ರಂಗೋಲಿ ಸ್ಪರ್ಧೆ ಫಲಿತಾಂಶವನ್ನು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಪ್ರಕಟಿಸಿದೆ.ವಾಲಿಬಾಲ್: ಸಿದ್ದಗಂಗಾ ಪಿಯು ಕಾಲೇಜು (ಪ್ರಥಮ), ಗುಬ್ಬಿ ಸರ್ಕಾರಿ ಪದವಿ ಪೂರ್ವ ಕಾಲೇಜು (ದ್ವಿತೀಯ).

ಕೊಕ್ಕೊ: ತುಮಕೂರು ಸರ್ವೋ ದಯ ವಿದ್ಯಾಸಂಸ್ಥೆ (ಪ್ರಥಮ), ಬೆಳಗುಂಬದ ಮಾರುತಿ ವಿದ್ಯಾಸಂಸ್ಥೆ (ದ್ವಿತೀಯ) .ಕಬಡ್ಡಿ: ತುಮಕೂರು ಎಸ್‌ಆರ್‌ಎಸ್ ಪ್ರಥಮ ದರ್ಜೆ ಕಾಲೇಜು (ಪ್ರಥಮ), ತಿಪಟೂರು ಕಲ್ಪತರು ಪ್ರಥಮ ದರ್ಜೆ ಕಾಲೇಜು (ದ್ವಿತೀಯ) ಪಡೆದರು.ವಾಲಿಬಾಲ್- ಬಾಲಕಿಯರು: ತುಮಕೂರು ಸಿದ್ದಗಂಗಾ ಮಹಿಳಾ ಪ್ರಥಮ ದರ್ಜೆ ಕಾಲೇಜು (ಪ್ರಥಮ), ತಿಪಟೂರು ಕಲ್ಪತರು ಪ್ರಥಮ ದರ್ಜೆ ಕಾಲೇಜು (ದ್ವಿತೀಯ).ರಂಗೋಲಿ ಸ್ಪರ್ಧೆ: ತುಮಕೂರು ಎನ್.ಪೂಜಾ (ಪ್ರಥಮ), ವಿ.ವಿ ಕಲಾ ಕಾಲೇಜು ಆರ್.ಅನಿತಾ (ದ್ವಿತೀಯ), ಸಿದ್ದಗಂಗಾ ಪದವಿ ಪೂರ್ವ ಕಾಲೇಜಿನ ಜಿ.ಶಾರದಾ (ತೃತೀಯ) ಪ್ರಶಸ್ತಿಗೆ ಭಾಜನರಾದರು ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.ಕೆಸ್ತೂರು ತಂಡಕ್ಕೆ ವಜ್ರಮುನಿ ಕಪ್

ಕುಣಿಗಲ್: ಹುಲಿಯೂರುದುರ್ಗ ಹೋಬಳಿ ಅರಮನೆ ಹೊನ್ನ ಮಾಚೇನಹಳ್ಳಿಯಲ್ಲಿ ಈಚೆಗೆ ಚಾಲೆಂ ಜಿಂಗ್ ಸ್ಟಾರ್ ಅಂಬಿ- ದರ್ಶನ್ ಅಭಿಮಾನಿಗಳ ಸಂಘ ಆಯೋಜಿಸಿದ್ದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಯಲ್ಲಿ ಕೆಸ್ತೂರು ತಂಡ ಮೊದಲ ಬಹುಮಾನ ಪಡೆಯಿತು. ಅರಮನೆ ಹೊನ್ನಮಾಚೇನಹಳ್ಳಿ ತಂಡ ದ್ವಿತೀಯ ಸ್ಥಾನ ಪಡೆಯಿತು.ಬಹುಮಾನ ವಿತರಣೆ ಸಮಾರಂಭವನ್ನು ಜೆಡಿಎಸ್ ಮುಖಂಡ ಮುದ್ದಹನುಮೇಗೌಡ ಉದ್ಘಾ ಟಿಸಿದರು.

 ಮುಖಂಡರಾದ ಜಯರಾಮಯ್ಯ, ರವೀಶಯ್ಯ, ಹನುಮಂತರಾಜು, ಪ್ರಸಾದ್ ನಿಡಸಾಲೆ, ಎನ್.ಕೆ.ಸತೀಶ್, ರಂಗರಾಜು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)