ಬುಧವಾರ, ಜೂನ್ 16, 2021
23 °C

ಮತದಾರರ ಪಟ್ಟಿಗೆ ಹೆಸರು ಸೇರಿಸಲು ಇಂದು ಕೊನೆ ದಿನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಕೇವಲ ಒಂದು ದಿನ ಬಾಕಿ ಉಳಿದಿದೆ. ಹೊಸದಾಗಿ ಹೆಸರು ಸೇರ್ಪಡೆಗೆ, ವರ್ಗಾವಣೆ ಹಾಗೂ ತಿದ್ದುಪಡಿಗಾಗಿ ಅರ್ಜಿಗಳನ್ನು ಸಲ್ಲಿಸಲು ಭಾನುವಾರ (ಮಾ.16) ಕೊನೆಯ ದಿನ ಎಂದು ಮುಖ್ಯ ಚುನಾವಣಾಧಿಕಾರಿ ಅನಿಲ್‌ ಕುಮಾರ್‌ ಝಾ ತಿಳಿಸಿದರು.ತಾಲ್ಲೂಕು ಕಚೇರಿಯಲ್ಲಿನ ಮತ­ದಾರರ ಸಹಾಯ ಕೇಂದ್ರ, ವಾರ್ಡ್‌ ಕಚೇರಿ, ಬೆಂಗಳೂರು ಒನ್‌ ಕೇಂದ್ರ­ ಹಾಗೂ ಆನ್‌ಲೈನ್‌ನಲ್ಲಿ ಅರ್ಜಿ­ಗಳು ದೊರೆಯು­ತ್ತವೆ. ಭರ್ತಿ ಮಾಡಿದ ಅರ್ಜಿಗಳನ್ನು ಮೇಲ್ಕಂಡ ಕಚೇರಿ­ಗ­ಳಲ್ಲೇ ಸಲ್ಲಿಸಬಹುದು ಎಂದರು.ಈಗಾಗಲೇ ಹೆಸರು ನೋಂದಾಯಿಸಿ­ಕೊಂಡಿರುವ ಮತದಾರರು ಮೊಬೈಲ್‌­ನಲ್ಲಿ kaepic ಎಂದು ಟೈಪ್‌ ಮಾಡಿದ ನಂತರ ಸ್ಟೇಸ್‌ ಕೊಟ್ಟು ಮತದಾರರ ಗುರುತಿನ ಚೀಟಿಯ ಸಂಖ್ಯೆ ಟೈಪ್‌ ಮಾಡಿ ದೂರವಾಣಿ ಸಂಖ್ಯೆ 9243355223 ಕ್ಕೆ ಸಂದೇಶ ಕಳುಹಿ­ಸ­ಬೇಕು. ಹೆಸರು ನೋಂದಣಿಯಾಗಿ-­ದ್ದಲ್ಲಿ, ಮತಗಟ್ಟೆಯ ವಿವರ ಕೆಲವೇ ಸೆಕೆಂಡುಗಳಲ್ಲಿ ಸಂದೇಶದ ಮೂಲಕ ಮೊಬೈಲೆಗೆ ಬರುತ್ತದೆ.ಮತದಾರರು ಆನ್‌ಲೈನ್‌ನಲ್ಲೂ ಅರ್ಜಿ ಸಲ್ಲಿಸಬಹುದು. ಅರ್ಜಿಗಾಗಿ ಸಂಪರ್ಕಿಸಿ: www.voterreg.kar.nic.inwww.ceokarnataka.kar.nic.in

ಬೆಂಗಳೂರು ನಗರದಲ್ಲಿ ವಾರ್ಡ್ ಮಟ್ಟದ ಸಹಾಯಕ ಮತದಾರರ ನೋಂದ­ಣಾ­ಧಿ­ಕಾರಿ­ಗಳ ಕಚೇರಿಗಳಲ್ಲಿ ಅರ್ಜಿ ಪಡೆಯಬಹುದು. ಬೆಳಿಗ್ಗೆ 10ರಿಂದ ಸಂಜೆ 5.30ರ ವರೆಗೆ ಅರ್ಜಿ ವಿತರಣೆ ಮತ್ತು ಸ್ವೀಕಾರಕ್ಕೆ ಅವಕಾಶ ಇರುತ್ತದೆ. ಮಾಹಿತಿಗೆ ಪಾಲಿಕೆಯ ನಿಯಂತ್ರಣ ಕೊಠಡಿ ಸಂಪರ್ಕಿಸಬಹುದು (ದೂ ೨೨೯೭೫೫೦೦, ೨೨೯೭೫೫೮೩).   ಕಾಲಾವಕಾಶಕ್ಕೆ ಮನವಿ: ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಇನ್ನೂ ಹೆಚ್ಚಿನ ಕಾಲಾವಕಾಶ ನೀಡಬೇಕು ಎಂದು ಬಿಜೆಪಿ ರಾಜ್ಯ ಘಟಕ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.