ಮತದಾರರ ಸಾಮಾನ್ಯ ಸೇವಾ ಕೇಂದ್ರ ಪ್ರಾರಂಭ

7

ಮತದಾರರ ಸಾಮಾನ್ಯ ಸೇವಾ ಕೇಂದ್ರ ಪ್ರಾರಂಭ

Published:
Updated:

ಬೆಳಗಾವಿ: ಇಲ್ಲಿನ ಉತ್ತರ ಹಾಗೂ ದಕ್ಷಿಣ ವಿಧಾನಸಭೆ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ನಾಗರಿಕರ ಸೌಲಭ್ಯಕ್ಕಾಗಿ ನಗರದಲ್ಲಿರುವ ನಾಲ್ಕು ಬೆಳಗಾವಿ ಒನ್ ಕೇಂದ್ರಗಳಲ್ಲಿ ಮತದಾರರ ಸಾಮಾನ್ಯ ಸೇವಾ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ.ಇಲ್ಲಿನ ಅಶೋಕನಗರ, ರಿಸಾಲ್ದಾರಗಲ್ಲಿ, ಟಿ.ವಿ.ಸೆಂಟರ್ ಹಾಗೂ ಗೋವಾ ವೇಸ್ ಪ್ರದೇಶದಲ್ಲಿರುವ ಮಹಾನಗರ ಪಾಲಿಕೆಯ ವಾಣಿಜ್ಯ ಸಂಕೀರ್ಣದಲ್ಲಿರುವ ಬೆಳಗಾವಿ ಒನ್ ಕೇಂದ್ರಗಳಲ್ಲಿ ಮತದಾರರ ಸಾಮಾನ್ಯ ಸೇವಾ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಈ ಕೇಂದ್ರಗಳಲ್ಲಿ ಅರ್ಹ ಮತದಾರರು ಅನೇಕ ಸೌಲಭ್ಯಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದು.ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ಮತದಾರರ ಸೇವಾ ಕೇಂದ್ರಗಳಿಗೆ ಚಾಲನೆ ನೀಡಿದರು.

`ಅರ್ಹ ಸಾರ್ವಜನಿಕರು ಮತದಾ ರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ನೊಂದಾಯಿಸಲು ನಮೂನೆ ನಂಬರ್ 6 ರಲ್ಲಿ ಅರ್ಜಿ ಭರ್ತಿ ಮಾಡಿ ತಮ್ಮ ಇತ್ತೀಚಿನ ಭಾವಚಿತ್ರ, ರಹವಾಸಿ ದಾಖಲೆ ಹಾಗೂ ವಯಸ್ಸಿನ ದಾಖಲೆ ಗಳೊಂದಿಗೆ ಸಲ್ಲಿಸಬೇಕು. ಮತದಾರರ ತಮ್ಮ ಹೆಸರುಗಳನ್ನು ಕಡಿಮೆ ಮಾಡಲು ನಮೂನೆ ನಂಬರ್ 7 ರಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು' ಎಂದು ಆಯುಕ್ತೆ ಪ್ರಿಯಾಂಕಾ ಫ್ರಾನ್ಸಿಸ್ ತಿಳಿಸಿದ್ದಾರೆ.ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಹಾಗೂ ಇನ್ನಿತರ ವಿವರಗಳ ತಿದ್ದುಪಡಿ ಬಗ್ಗೆ ನಮೂನೆ ನಂಬರ್ 8 ರಲ್ಲಿ ತಮ್ಮ ಇತ್ತೀಚಿನ ಭಾವಚಿತ್ರಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಬಹುದು. ಮತದಾರರು ವಾಸಿಸುವ ಸ್ಥಳದಿಂದ ಅದೇ ವಿಧಾನಸಭಾ ಮತಕ್ಷೇತ್ರದ ಬೇರೆ ಭಾಗದಲ್ಲಿ ವಾಸಿಸುವ ಸ್ಥಳ ಬದಲಾವಣೆಯಾದಲ್ಲಿ ನಮೂನೆ ನಂಬರ್ 8ಎ ರಲ್ಲಿ ಅರ್ಜಿ ಸಲ್ಲಿಸಬಹುದು.ಅರ್ಜಿಗಳು ಮತದಾರರ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಲಭ್ಯವಿದ್ದು, ಅವುಗಳನ್ನು ಭರ್ತಿ ಮಾಡಿ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಇಟ್ಟಿರುವ ಪೆಟ್ಟಿಗೆಗಳಲ್ಲಿ ಹಾಕಬಹುದು ಎಂದು ಆಯುಕ್ತರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry