ಮಂಗಳವಾರ, ನವೆಂಬರ್ 12, 2019
25 °C

ಮತದಾರರ ಹೆಸರು:`ಆಧಾರ್'ಗೆ ಕೊಕ್?

Published:
Updated:

ತುಮಕೂರು: ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಆಧಾರ್ ಕಾರ್ಡನ್ನು ದಾಖಲೆಯಾಗಿ ಪರಿಗಣಿಸುತ್ತಿಲ್ಲ ಎಂಬ ಅಂಶ ಇದೀಗ ಹೊಸ ಮತದಾರರನ್ನು ಕಂಗೆಡಿಸಿದೆ.ಮತದಾರರ ಪಟ್ಟಿಗೆ ಹೆಸರು ಸೇರಿಸಲು ಫಾರ್ಮ್ ನಂ 6ರ ಜತೆ ವಿಳಾಸದ ದಾಖಲೆಯಾಗಿ ಅನೇಕ ಮತದಾರರಿಂದ ಆಧಾರ್ ಕಾರ್ಡ್ ಪಡೆಯಲಾಗಿದೆ. ಆದರೆ ಈಗ ಚುನಾವಣಾ ಅಧಿಕಾರಿಗಳು ಆಧಾರ್ ಕಾರ್ಡ್ ದಾಖಲೆಯಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ತಿಳಿಸಿರುವುದು ಗೊಂದಲಕ್ಕೆ ಕಾರಣವಾಗಿದೆ.ಈಗಾಗಲೇ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಆಧಾರ್ ಕಾರ್ಡ್ ನೀಡಿರುವ ಮತದಾರರ ಅರ್ಜಿ ಅನೂರ್ಜಿತಗೊಳ್ಳಲಿದೆ ಎಂದು ತಿಳಿದುಬಂದಿದೆ.ಆಧಾರ್‌ಗೆ ಮಾನ್ಯತೆ: ಆಧಾರ್ ಕಾರ್ಡ್ ಪರಿಗಣಿಸುವಂತೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆ ರೀತಿ ದೂರುಗಳು ಇದ್ದರೆ ಸ್ಪಂದಿಸಲಾಗುವುದು. ಆಧಾರ್ ಕಾರ್ಡ್ ಗಣನೆಗೆ ತೆಗೆದುಕೊಂಡು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ತುಮಕೂರು ಜಿಲ್ಲಾಧಿಕಾರಿಗೆ ಸೂಚಿಸಲಾಗುವುದು.

- ಅನಿಲ್‌ಕುಮಾರ್ ಝಾ, ಮುಖ್ಯ ಚುನಾವಣಾಧಿಕಾರಿ

ಪ್ರತಿಕ್ರಿಯಿಸಿ (+)