ಬುಧವಾರ, ನವೆಂಬರ್ 20, 2019
27 °C

ಮತದಾರರ ಹೆಸರು ಸೇರ್ಪಡೆ ನಾಳೆ ಕೊನೆ

Published:
Updated:

ವಿಜಾಪುರ: ವಿಧಾನಸಭಾ ಚುನಾವಣೆಗೆ ಮತದಾರರ ಹೆಸರು ಸೇರ್ಪಡೆ, ಮಾರ್ಪಾಡು ಹಾಗೂ ವರ್ಗಾವಣೆ, ಭಾವಚಿತ್ರವಿಲ್ಲದವರು ಭಾವಚಿತ್ರ ಸಲ್ಲಿಸಲು ಇದೇ 7 ಕೊನೆಯ ದಿನವಾಗಿದೆ.

ಮುಂಬರುವ ವಿಧಾನಸಭೆ ಚುನಾವಣೆ ಯಲ್ಲಿ ಮತದಾನ ಮಾಡಲು 18 ವರ್ಷ ವಯಸ್ಸು ತುಂಬಿದ ಯುವಕ, ಯುವಕರು ಸೂಕ್ತ ದಾಖಲಾತಿಗಳನ್ನು ಒದಗಿಸಿ ಯಾದಿಯಲ್ಲಿ ತಮ್ಮ ಹೆಸರು ನೋಂದಣಿ ಮಾಡಿಸಬಹುದು. 

ಮತದಾರರು ತಮ್ಮ ಅರ್ಜಿಯನ್ನು ಮತಗಟ್ಟೆ ಅಧಿಕಾರಿಗಳು ಹಾಗೂ ತಹಶೀಲ್ದಾರ ಕಚೇರಿಗೆ ಸಲ್ಲಿಸುವಂತೆ ಉಪ ವಿಭಾಗಾಧಿಕಾರಿ ಡಾ.ಬೂದೆಪ್ಪ ಮನವಿ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)