ಭಾನುವಾರ, ಜೂನ್ 20, 2021
21 °C
28,603 ಅರ್ಜಿ ಅಂಗೀಕಾರ, 15,876 ಅನುಮೋದನೆ ಬಾಕಿ

ಮತದಾರ ಪಟ್ಟಿ: 1,003 ಅರ್ಜಿ ತಿರಸ್ಕೃತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ‘ಜಿಲ್ಲೆಯಲ್ಲಿ ಮತದಾರರ ಪಟ್ಟಿಗೆ  ಹೆಸರು ಸೇರ್ಪಡೆಗಾಗಿ 45,482 ಅರ್ಜಿ ಬಂದಿದ್ದು, ಅದರಲ್ಲಿ 28,603 ಅರ್ಜಿಗಳನ್ನು ಅಂಗೀಕರಿಸಲಾಗಿದೆ. 15,876 ಅರ್ಜಿಗಳು ಅನುಮೋದನೆಗೆ ಬಾಕಿ ಉಳಿದಿದ್ದು, 1,003 ಅರ್ಜಿಗಳನ್ನು ತಿರಸ್ಕರಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ತಿಳಿಸಿದ್ದಾರೆ.ಜಿಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಚುನಾವಣೆ ಸಿದ್ದತಾ ಪರಿಶಿಲನಾ ಸಭೆ ನಡೆಸಿದ ಅವರು, ‘ಬಾಕಿ ಇರುವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಿ ಎಲ್ಲ ಅರ್ಹ ಮತದಾರರಿಗೆ ಗುರುತಿನ ಕಾರ್ಡ್‌ ವಿತರಿಸಬೇಕು, ತಹಶಿಲ್ದಾರರು ಈ ವಿಷಯದಲ್ಲಿ  ಹೆಚ್ಚಿನ ಮುತುವರ್ಜಿ ವಹಿಸಬೇಕು. ಮುದ್ರಣವಾದ ಕಾರ್ಡ್‌ಗಳನ್ನು ಮತಗಟ್ಟೆ ಅಧಿಕಾರಿಗಳ ಮುಖಾಂತರವೇ ವಿತರಿಸಬೇಕು’ ಎಂದು ಸ್ಪಷ್ಟ ಸೂಚನೆ ನೀಡಿದರು.‘ಮತದಾರರ ಪಟ್ಟಿ ಪರಿಷ್ಕರಣೆಗೆ ಮುನ್ನ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ಕರೆದು ಅವರಿಂದ ಆಕ್ಷೇಪಣೆಗಳಿದ್ದರೆ ಪಡೆಯಬೇಕು ಎಂದರು.ಸಹಾಯಕ ಚುನಾವಣಾಧಿಕರಿಗಳು, ತಹಶಿಲ್ದಾರರು, ಮಾದರಿ  ನೀತಿಸಂಹಿತೆ ತಂಡದ ಅಧಿಕಾರಿಗಳು ಮತ್ತು ವಿವಿಧ ತಂಡಗಳ ಮುಖ್ಯಸ್ತರು ಪಾಲ್ಗೊಂಡಿದ್ದ ಈ ಸಭೆಯಲ್ಲಿ ಈವರಗೆ ಮಾಡಿಕೊಂಡಿರುವ ಸಿದ್ಧತೆಗಳ ಮಾಹಿತಿ ಪಡೆದರು ಜೊತೆಗೆ  ಮುಂದೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾರ್ಗದರ್ಶನ ನೀಡಿದರು.ಗರ್ಭಿಣಿಯರು, ಹಾಲುಣಿಸುವ ತಾಯಂದಿರು. ತೀವ್ರ ತರದ ಅನಾರೋಗ್ಯದಿದಂದ ಬಳಲುತ್ತಿರುವವರು ಮತ್ತು ಮೂರು ತಿಂಗಳಲ್ಲಿ ನಿವೃತ್ತರಾಗಲಿರುವವರನ್ನು ಚುಣಾವಣಾ ಕರ್ತವ್ಯದಲ್ಲಿ ತೊಡಗಿಸುವಾಗ ಮಾನವೀಯತೆ ದೃಷ್ಟಿಯಿಂದ ವಿನಾಯಿತಿ ನೀಡುವ ಬಗ್ಗೆ ಪರಿಶೀಲಿಸಬಹುದು. ಉಳಿದವರಿಗೆ ರಿಯಾಯಿತಿ ನೀಡಲಾಗದು ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.ತಮ್ಮ ಕ್ಷೇತ್ರದ  ವ್ಯಾಪ್ತಿಯೊಳಗೆ  ನಡೆಯುವ ರಾಜಕೀಯ ಸಭೆ ಸಮಾರಂಭಗಳಿಗ ಸಹಾಯಕ ಚುನಾವಣಾಧಿಕಾರಿಗಳೆ ಅನುಮತಿ ನೀಡಬಹುದು.  ಎಲ್ಲ ಸಹಾಯಕ ಚುನಾವಾಣಾ ಅಧಿಕಾರಿಗಳು, ತಹಶಿಲ್ದಾರರು ಮತ್ತು ಮಾದರಿ ನೀತಿ ಸಂಹಿತೆ ಜಾರಿ ತಂಡ  ತಮ್ಮ ವ್ಯಾಪ್ತಿಯಲ್ಲಿ  ಸ್ಥಾಪಿಸಲಾಗಿರುವ  ಚೆಕ್ ಪೋಸ್ಟ್‌ಗಳಿಗೆ ಭೇಟಿ ನೀಡಿ ಸರಿಯಾಗಿವೆ ಎಂಬುದನ್ನು ಖಾತರಿ ಪಡಿಸಿಕೋಳ್ಳಬೇಕು. ಅನುಮಾನಾಸ್ಪದ ವಾಹನಗಳ ತಪಾಸಣೆ ನೇಡೆಸಬೇಕು ಎಂದು ಸೂಚಿಸಿದರು.ಅಪರ  ಜಿಲ್ಲಾಧಿಕಾರಿ ಡಾ.ಎಚ್ .ಎನ್ ಗೋಪಾಲ ಕೃಷ್ಣ ಚುನಾವಣಾ ಕಾರ್ಯದಲ್ಲಿ ತೊಡಗುವ ಅಧಿಕಾರಿ ಸಿಬ್ಬಂದಿಗಳ ತರಬೇತಿ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಯು.ಪಿ.ಸಿಂಗ್  ಪ್ರೋಬೆಷನರಿ ಐ.ಎ.ಎಸ್ ಅಧಿಕಾರಿ ರಾಮಚಂದ್ರ, ಉಪ ವಿಭಾಗಾಧಿಕಾರಿಗಳಾದ ಶರತ್, ಮಧುಕೇಶ್ವರ್, ವಿವಿಧ ಕೇತ್ರಗಳ ಸಹಾಯಕ ಚುನಾವಾಣಾ ಅಕಾರಿಗಳು, ತಹಶೀಲ್ದಾರರು ಸಭೆಯಲ್ಲಿ  ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.