ಮಂಗಳವಾರ, ನವೆಂಬರ್ 12, 2019
28 °C

ಮತದಾರ ಹೆಸರು ಸೇರ್ಪಡೆಗೆ ಉತ್ಸಾಹ

Published:
Updated:
ಮತದಾರ ಹೆಸರು ಸೇರ್ಪಡೆಗೆ ಉತ್ಸಾಹ

ಬೀದರ್:  ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ವಿಧಿಸಲಾಗಿದ್ದ ಗಡುವು ಹತ್ತಿರವಾದಂತೆ ಹೆಸರು ಸೇರ್ಪಡೆಗೆ ನೂಕುನುಗ್ಗಲು ಹೆಚ್ಚಾಗಿದೆ.ಬೀದರ್ ತಹಶೀಲ್ದಾರ್ ಕಚೇರಿ ಆವರನದಲ್ಲಿ ಶುಕ್ರವಾರ ಯುವಕರು ಸಾಲಿನಲ್ಲಿ ನಿಂತು ಹೆಸರು ಸೇರ್ಪಡೆಗೆ  ವಿವರಗಳನ್ನು ದಾಖಲಿಸಿದರು. ಬಿಸಿಲು ನೆತ್ತಿಗೇರಿದ್ದ ಅವಧಿಯಲ್ಲಿ ಪಟ್ಟಿಗೆ ಹೆಸರು ಸೇರಿಸುವ ಸಂಖ್ಯೆ ಹೆಚ್ಚಿದ್ದು, ಪ್ರತ್ಯೇಕ ಕೌಂಟರ್‌ನಲ್ಲಿ ಸಿಬ್ಬಂದಿ ಅರ್ಜಿ ಮತ್ತು ದಾಖಲಾತಿಗಳನ್ನು ಪರಿಶೀಲಿಸಿದರು.

ಬಿಸಿಲು ಹೆಚ್ಚಿದ್ದ ಹಿನ್ನೆಲೆಯಲ್ಲಿ ತಹಶೀಲ್ದಾರ ಕಚೇರಿ ಆವರಣದಲ್ಲಿ  ನೆರಳಿಗಾಗಿ ಪೆಂಡಾಲ್ ಹಾಕಿಸಿದ್ದು, ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿತ್ತು. ಸಾರ್ವತ್ರಿಕ ಚುನಾವಣೆಗಾಗಿ ಅಧಿಸೂಚನೆ ಇದೇ 10ರಂದು ಹೊರಬೀಳಲಿದ್ದು, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಏ. 7 ಕಡೆಯ ದಿನವಾಗಿದೆ.

ಪ್ರತಿಕ್ರಿಯಿಸಿ (+)