ಭಾನುವಾರ, ಜೂನ್ 13, 2021
21 °C

ಮತಪಟ್ಟಿಯಲ್ಲಿ ಹೆಸರು ಖಾತ್ರಿಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊನ್ನಾಳಿ: ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಬಗ್ಗೆ ಮತದಾರರು ಸಕಾಲದಲ್ಲಿ ಖಾತ್ರಿಪಡಿಸಿಕೊಳ್ಳಬೇಕು ಎಂದು ಚುನಾವಣಾ ಶಿರಸ್ತೇದಾರ್‌ ಶಿವಶಂಕರ್‌ ಮನವಿ ಮಾಡಿದರು.ತಾಲ್ಲೂಕು ಕಚೇರಿಯಲ್ಲಿ ಭಾನುವಾರ ತಮ್ಮ ಸಿಬ್ಬಂದಿ ಜತೆ ಮತದಾರರ ಹೆಸರು ಸೇರ್ಪಡೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಅವರು ನಂತರ ಸುದ್ದಿಗಾರರ ಜತೆಗೆ ಮಾತನಾಡಿದರು.ಮತದಾನ ಮಾಡಲು ಆಗಮಿಸಿದಾಗ ತಮ್ಮ ಹೆಸರು ಮತಪಟ್ಟಿಯಲ್ಲಿ ಇಲ್ಲ ಎಂದು ಗೊಣಗುವ ಬದಲು, ಸಾಕಷ್ಟು ಮುಂಚಿತವಾಗಿಯೇ ಮತಪಟ್ಟಿ  ಪರಿಶೀಲಿಸಬೇಕು. ತಮ್ಮ ಹೆಸರು ಪಟ್ಟಿಯಲ್ಲಿ ಇರುವ ಬಗ್ಗೆ ಖಾತ್ರಿ ಹೊಂದಬೇಕು ಎಂದರು.ಮತದಾರರ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಲು ಮಾರ್ಚ್‌ 16 ಕೊನೆಯ ದಿನವಾಗಿತ್ತು. ಈವರೆಗೆ ಪಟ್ಟಣದ ವಿವಿಧ ಬೂತ್‌ಮಟ್ಟದ ಅಧಿಕಾರಿಗಳಿಂದ ಸಂಗ್ರಹಿಸಲಾದ ನಮೂನೆ 6ರಲ್ಲಿನ ಅರ್ಜಿಗಳನ್ನು ಕಂಪ್ಯೂಟರ್‌ಗೆ ಅಪ್‌ಲೋಡ್‌ ಮಾಡುವ ಕೆಲಸ ಭರದಿಂದ ಸಾಗಿದೆ.16ರವರೆಗೆ ಅರ್ಜಿ ಸಲ್ಲಿಸಿದವರಿಗೆ 26ರ ವೇಳೆಗೆ ಗುರುತಿನ ಚೀಟಿ ವಿತರಿಸಲಾಗುವುದು. ಮತದಾರರ ಗುರುತಿನ ಚೀಟಿ ಇಲ್ಲದಿದ್ದರೂ ಮತದಾನ ಮಾಡಬಹುದು. ಆದರೆ, ಮತದಾರರಪಟ್ಟಿಯಲ್ಲಿ ತಮ್ಮ ಹೆಸರು ಇರುವ ಬಗ್ಗೆ ಸಾರ್ವಜನಿಕರು ಖಾತ್ರಿಪಡಿಸಿಕೊಳ್ಳಬೇಕು ಎಂದರು.ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ಈಗಿನ ಮಾಹಿತಿಯ ಪ್ರಕಾರ ಒಟ್ಟು 1,76,930 ಮತದಾರರಿದ್ದಾರೆ. ಮಾರ್ಚ್‌ 26ರ ವೇಳೆಗೆ ನೂತನ ಮತದಾರರು ಸೇರ್ಪಡೆಗೊಂಡ ನಂತರ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.