ಸೋಮವಾರ, ಜೂನ್ 14, 2021
27 °C

ಮತಪಟ್ಟಿ ಸೇರ್ಪಡೆ ಯುವಜನರಿಗೆ ಅಪಥ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ರಾಜ್ಯದ ಜನ­ಸಂಖ್ಯೆ­ಯಲ್ಲಿ 16ನೇ ಲೋಕಸಭಾ ಚುನಾವಣೆಗೆ ಮತದಾನ ಮಾಡಲು ಅರ್ಹತೆ ಪಡೆದಿರುವ ಮತದಾರರ ಪ್ರಮಾಣ ಶೇ 69.60ರಷ್ಟಿದೆ. ಇವರಲ್ಲಿ 18ರಿಂದ 19 ವರ್ಷದ ಹೊಸ ಮತದಾರರ ಪ್ರಮಾಣ ಕೇವಲ ಶೇ 1.25ರಷ್ಟಿದೆ.ಶಾಲಾ–ಕಾಲೇಜುಗಳಲ್ಲಿ ವ್ಯಾಪಕವಾಗಿ ಮತದಾನದ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿ­ದ್ದರೂ, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಗೆ ಯುವ ಮತ­ದಾರರು ಹಿಂದೇಟು ಹಾಕುತ್ತಿರು­ವುದು ಚುನಾವಣಾ ಆಯೋಗ ಬಿಡುಗಡೆ ಮಾಡಿದ ಅಂಕಿ–ಅಂಶಗಳಿಂದ ಬಯಲಾಗಿದೆ.ಅದರ ಪ್ರಕಾರ ಜನವರಿ ಅಂತ್ಯಕ್ಕೆ ರಾಜ್ಯದಲ್ಲಿ 2,27,78,644 ಪುರುಷರು ಮತ್ತು 2,18,65,233 ಮಹಿಳಾ ಮತದಾರರು  ಇದ್ದಾರೆ. ಇವರಲ್ಲಿ 3,260 ಜನ ಲೈಂಗಿಕ ಅಲ್ಪಸಂಖ್ಯಾತರು.20 ರಿಂದ 29 ವರ್ಷದ ಮತದಾರರ ಸಂಖ್ಯೆ 1,04,19,296. ಒಟ್ಟು ಮತದಾರ­ರಲ್ಲಿ ಇವರ ಪ್ರಮಾಣ ಶೇ 16.24ರಷ್ಟಿದೆ. 30ರಿಂದ 39 ವರ್ಷದೊಳಗಿನ ಮತದಾರರ ಪ್ರಮಾಣ ಶೇ 18.30. ಈ ವಯೋಮಾನದೊಳಗಿರುವ 1,17,39,305 ಮತದಾರರು ಮತ ಚಲಾಯಿಸಲು ಅರ್ಹತೆ ಪಡೆದಿದ್ದಾರೆ.40ರಿಂದ 49 ವರ್ಷದೊಳಗಿನವರ ಸಂಖ್ಯೆ 90,14,386 ಇದೆ. ಒಟ್ಟು ಮತದಾರ­ರಲ್ಲಿ ಇವರ ಪ್ರಮಾಣ ಶೇ 14.05ರಷ್ಟಿದೆ. 50ರಿಂದ 59 ವರ್ಷದ ಮತದಾರರು ಶೇ 9.59ರಷ್ಟಿದ್ದಾರೆ.  61,48,615 ಮತದಾರರು ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ. 60ರಿಂದ 69 ವರ್ಷದ ಮತದಾರರು 38,20,460 ಇದ್ದಾರೆ. ಒಟ್ಟು ಮತದಾರ­ರಲ್ಲಿ ಇವರದು ಶೇ 5.96ರಷ್ಟು ಪಾಲಿದೆ. 70ರಿಂದ 79 ವರ್ಷದೊಳಗಿನವರ ಮತದಾರರ ಸಂಖ್ಯೆ 19,35,727 (ಶೇ 3.02).ರಾಜ್ಯದಲ್ಲಿ ಬಾಳಿನ ಮುಸ್ಸಂಜೆಯಲ್ಲಿರುವ 80 ವರ್ಷ ದಾಟಿದ ಮತದಾರರ ಸಂಖ್ಯೆ 7,64,941 ಇದೆ. ಒಟ್ಟು ಮತದಾರರಲ್ಲಿ ಹಿರಿಯರ ಪಾಲು ಶೇ 1.19ರಷ್ಟಿದೆ.

*ರಾಜ್ಯದ ಜನಸಂಖ್ಯೆ 6,41,42,830

*ಇದರಲ್ಲಿ ಮತಪಟ್ಟಿ ಸೇರಲು ಅರ್ಹರಾದ 18 ರಿಂದ 19 ವರ್ಷ ವಯೋಮಾನದವರ ಸಂಖ್ಯೆ 22,30,684

*ಹೆಸರು ನೋಂದಾಯಿಸಿದವರು 8,01,147

418 ತುಂಬಿದರೂ ಮತಪಟ್ಟಿ­ಯಲ್ಲಿ ಹೆಸರು ಸೇರಿಸದವರು 5,78,063

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.